ಎಲ್ಲ ಸಹಕಾರ ಸಿಕ್ಕರೂ 10ನೇ ತರಗತಿಯಲ್ಲಿ ಶೂನ್ಯ ಸಾಧನೆಗೈದ ಬಿಬಿಎಂಪಿ ಶಾಲಾ ಮಕ್ಕಳು.
ಏನಿದು ಸುದ್ದಿ
Karnataka SSLC Result 2022 Live Update: ನಗರಕ್ಕಿಂತ ಗ್ರಾಮೀಣ ಪ್ರದೇಶದ ಮಕ್ಕಳದ್ದೇ ಮೇಲುಗೈ

ಬೆಂಗಳೂರು(ಮೇ.19): 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ (Karnataka SSLC Result 2022 Declared) ಪ್ರಕಟವಾಗಿದೆ. ಶೇಖಡವಾರು 85.63 ಫಲಿತಾಂಶ ಬಂದಿದೆ. ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ (Minister of Primary and SecondEducation BC Nagesh) ಫಲಿತಾಂಶ ಪ್ರಕಟಿಸಿದ್ದಾರೆ. ವಿಜಯಪುರ ಜಿಲ್ಲೆಯ ವಿದ್ಯಾರ್ಥಿ ಅಮಿತ್ ಮಾದರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ತುಮಕೂರಿನ ಭೂಮಿಕಾ ಬಿಆರ್ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಾರೆ, ಶೇ.85.63 ಫಲಿತಾಂಶ ದಾಖಲಾಗಿದ್ದು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
SSLCಯಲ್ಲಿ ಶೂನ್ಯ ಸಾಧನೆಗೈದ ಬಿಬಿಎಂಪಿ ಶಿಕ್ಷಕರ ವಜಾ
SSLCಯಲ್ಲಿ ಶೂನ್ಯ ಸಾಧನೆಗೈದ ಬಿಬಿಎಂಪಿ ಶಿಕ್ಷಕರ ವಜಾ
ಎಲ್ಲ ಸಹಕಾರ ಸಿಕ್ಕರೂ 10ನೇ ತರಗತಿಯಲ್ಲಿ ಶೂನ್ಯ ಸಾಧನೆಗೈದ ಬಿಬಿಎಂಪಿ ಶಾಲಾ ಮಕ್ಕಳು.
ಏನಿದು ಸುದ್ದಿ
SSLC ಪರೀಕ್ಷೆಯಲ್ಲಿ ರಾಯಚೂರಿಗೇ ಫಸ್ಟ್, ಆಧಾರ್ ಕಾರ್ಡಿಗಾಗಿ ಪರದಾಟ
ಜಿಲ್ಲೆಯ ಸಿಂಧನೂರು ತಾಲೂಕಿನ ಗೌಡನಭಾವಿ ಗ್ರಾಮದ ವಿದ್ಯಾರ್ಥಿನಿ ಬಸವಲೀಲಾ ಈ ವರ್ಷದ SSLC ಪರೀಕ್ಷೆಯಲ್ಲಿ 625 ಅಂಕಗಳಿಗೆ 624 ಅಂಕಗಳು ಪಡೆದ ಜಿಲ್ಲೆಗೆ ಫಸ್ಟ್ ರ್ಯಾಂಕ್ ಬಂದಿದ್ದಾಳೆ. ಆದ್ರೆ ಈ ವಿದ್ಯಾರ್ಥಿನಿ ತನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಧಾರ ಕಾರ್ಡ್ ಗಾಗಿ ಆಧಾರ್ ಕಾರ್ಡ್ ಕೇಂದ್ರಗಳನ್ನು ಅಲೆಯುತ್ತಿದ್ದಾಳೆ.
ಏನಿದು ಸುದ್ದಿ, ಇಲ್ಲಿ ಕ್ಲಿಕ್ ಮಾಡಿ
ಕನ್ನಡಪ್ರಭ ಹಂಚುವ ವಿದ್ಯಾರ್ಥಿ ಫರ್ಸ್ಟ್ ಕ್ಲಾಸ್
ಕನ್ನಡಪ್ರಭ ಹಂಚುವ ವಿದ್ಯಾರ್ಥಿ ಎಸ್.ಎಸ್ಎಲ್ಸಿಯಲ್ಲಿ ಮೊದಲ ದರ್ಜೆಯಲ್ಲಿ ಪಾಸ್ ಆಗಿದ್ದಾನೆ.
ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡ ಅಮಿತ್ ಮಾದರ್ ಯಶಸ್ಸಿನ ಜರ್ನಿ
ಬಡತನದಲ್ಲೆ ಹುಟ್ಟಿದ ಅಮಿತ್ ದುರಾದೃಷ್ಟವೋ ಏನೋ, ಆತ ಹುಟ್ಟಿದ ಒಂದೇ ವರ್ಷದಲ್ಲೆ ತಂದೆ ಆನಂದ ಸಾವನ್ನಪ್ಪಿದ್ದಾರೆ. ತಂದೆ ಇಲ್ಲದಿದ್ದರು, ಅಮ್ಮನಲ್ಲೆ ತಂದೆಯನ್ನ ಕಾಣುತ್ತಾ ಬೆಳೆದ ಅಮಿತ್ ಇಂದು ಮಾಡಿದ ಸಾಧನೆ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದೆ.
Karnataka SSLC 2022 Topper ಬಡತನದಲ್ಲಿ ಅರಳಿದ ವಿಜಯಪುರದ ಪ್ರತಿಭೆ ರಾಜ್ಯಕ್ಕೆ ಟಾಪರ್!
625ಕ್ಕೆ 625 ಅಂಕ ಪಡೆದ 145 ವಿದ್ಯಾರ್ಥಿಗಳ ಪಟ್ಟಿ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 145 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕ ಪಡೆದುಕೊಂಡಿದ್ದಾರೆ. ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ.91.32 ರ ಮೂಲಕ ಮೇಲುಗೈ ಸಾಧಿಸಿದ್ದಾರೆ. ನಗರದ ವಿದ್ಯಾರ್ಥಿಗಳಿಗೆ ಶೇ.86.64 ಫಲಿತಾಂಶ ಬಂದಿದೆ.
Karnataka SSLC Toppers List: ಒಟ್ಟು 145 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ!
ಮಾಜಿ ಕ್ರಿಕೆಟಿಗ ದೊಡ್ಡಗಣೇಶ್ ಪುತ್ರಿ ಸಮೀತಾಗೆ 621 ಅಂಕ!
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಲ್ಲಾ ಮಕ್ಕಳಿಗೆ ಅಭಿನಂದನೆಗಳು. ಇಂದು ನನ್ನ ಮಗಳು ಸಮೇತಾಳ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ. ಅವಳು SSLC ಯಲ್ಲಿ 621 (99.36%) ಅಂಕಗಳನ್ನು ಪಡೆದಿದ್ದಾಳೆ. ಒಬ್ಬ ತಂದೆಯಾಗಿ ನನ್ನ ಮಗಳ ಬಗ್ಗೆ ತುಂಬಾ ಹೆಮ್ಮೆ ಅನಿಸ್ತಾ ಇದೆ. ಒಳ್ಳೆದಾಗಲಿ ಮಗಳೇ #SSLCResults ಎಂದು ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ.
ವಿದ್ಯಾರ್ಥಿ ಸ್ನೇಹಿ ಮೌಲ್ಯಮಾಪನ
ಮೌಲ್ಯಮಾಪನ ವಿದ್ಯಾರ್ಥಿ ಸ್ನೇಹಿಯಾಗಿ ಮಾಡಿದ್ದೇವೆ. ಹೀಗಾಗಿ ಹೆಚ್ಚು ಫಲಿತಾಂಶ ಬಂದಿದೆ. ಪ್ರಶ್ನೆ ಪತ್ರಿಕೆ ಕೂಡಾ ವಿದ್ಯಾರ್ಥಿ ಸ್ನೇಹಿಯಾಗಿ ಇತ್ತು. 10% ಮಾತ್ರ ಟಫ್ ಪ್ರಶ್ನೆಗಳನ್ನ ಪತ್ರಿಕೆಯಲ್ಲಿ ನೀಡಲಾಗಿತ್ತು. 10% ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. 175 ಅಂಕ ಪಡೆದವರು ಮಾತ್ರ ಇದಕ್ಕೆ ಎಲಿಜಬಲ್ ಆಗಿರುತ್ತಾರೆ ಎಂದು ಸಚಿವರು ಹೇಳಿದ್ದಾರೆ."
ಒಟ್ಟು 145 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್
ವಿಜಯಪುರ ಜಿಲ್ಲೆಯ ಅಮಿತ್ ಮಾದರ್, ತುಮಕೂರಿನ ಬಿ.ಆರ್. ಭೂಮಿಕಾ, ಹಾವೇರಿಯ ಪ್ರವೀಣ್ ನೀರಲಗಿ, ಬೆಳಗಾವಿಗ ಸಹಾನಾ, ವಿಜಯರಪುರದ ಐಶ್ವರ್ಯ ಕನಸೆ, ಉಡುಪಿಯ ಗಾಯತ್ರಿ, ಅನೀಶ್,ವಿದ್ಯಾಮಂದಿರ ಶಾಲೆ ಮಲ್ಲೇಶ್ವರಂ ಹೀಗೆ ಹಲವು ಮಂದಿ ಟಾಪರ್ ಆಗಿದ್ದಾರೆ.
SSLC Result 2022 Declared ಒಟ್ಟು 145 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್
ಶಿಕ್ಷಣ ಇಲಾಖೆಯಲ್ಲಿ ಗ್ರೇಡ್ ವ್ಯವಸ್ಥೆ
ಈ ಬಾರಿ ಫಲಿತಾಂಶದಲ್ಲಿ ಜಿಲ್ಲೆಗಳ ನಡುವೆ ನಂಬರ್ 1, 2 ಕಾಂಪಿಟೇಷನ್ ಇಲ್ಲ. ಗ್ರೇಡ್ ವ್ಯವಸ್ಥೆ ಅಳವಡಿಸಿಕೊಂಡಿರುವ ಶಿಕ್ಷಣ ಇಲಾಖೆ. A ಗ್ರೇಡ್ ನಲ್ಲಿ ಒಟ್ಟು 32 ಜಿಲ್ಲೆಗಳು B ಗ್ರೇಡ್ ನಲ್ಲಿ ಎರಡು ಜಿಲ್ಲೆಗಳಿವೆ ಎಂದು ಸಚಿವರು ಹೇಳಿದ್ದಾರೆ.
ಒಟ್ಟು 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
ಒಟ್ಟು 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
ಸರ್ಕಾರಿ ಶಾಲೆ 2, ಅನುದಾನಿತ 3, ಅನುದಾನ ರಹಿತ 15 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
35931 ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಗ್ರೇಸ್ ಮಾರ್ಕ್ಸ್
35931 ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಮಾತ್ರ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ
3940 ವಿದ್ಯಾರ್ಥಿಗಳಿಗೆ ಎರಡು ವಿಷಯದಲ್ಲಿ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ.
ಇದು ದಾಖಲೆಯ ಫಲಿತಾಂಶ ಎಂದ ಶಿಕ್ಷಣ ಸಚಿವ
ಕಳೆದ ಹತ್ತು ವರ್ಷದಲ್ಲಿ ಇದು ದಾಖಲೆಯ ಫಲಿತಾಂಶ
4,41,099 ಪುರುಷ ವಿದ್ಯಾರ್ಥಿಗಳು
3,58, 602 ಪಾಸ್ ಆಗಿದ್ದಾರೆ
81.3% ಫಲಿತಾಂಶ ವಿದ್ಯಾರ್ಥಿಗಳದ್ದು
4,12,334 ಹೆಣ್ಣುಮಕ್ಕಳು ಪರೀಕ್ಷೆ ಬರೆದಿದ್ರು
3,72,279 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ
90.29% ಫಲಿತಾಂಶ
730881 ಮಕ್ಕಳಲ್ಲಿ 40,061 ಮಕ್ಕಳು ಗ್ರೇಸ್ ಮಾರ್ಕ್ಸ್ ಪಡೆದು ಪಾಸ್ ಆಗಿದ್ದಾರೆ
ಶಿಕ್ಷಣ ಸಚಿವ ಬಿಸಿ ನಾಗೇಶ್ ಸುದ್ದಿಗೋಷ್ಠಿ ಅಪ್ ಡೇಟ್ಸ್
8,53,436 ಮಕ್ಕಳು ಪರೀಕ್ಷೆ ಬರೆದಿದ್ದಾರೆ
ಇದರಲ್ಲಿ 85.63% ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ
7,30, 881 ಮಕ್ಕಳು ಪಾಸ್ ಆಗಿದ್ದಾರೆ
"
ಶಿರಸಿ ಮತ್ತು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ7 ವಿದ್ಯಾರ್ಥಿಗಳು ಔಟ್ ಆಫ್ ಔಟ್
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಧಾರವಾಡದ ಪ್ರಜೇಂಟೆಶನ್ ಶಾಲೆ ವಿದ್ಯಾರ್ಥಿನಿ ಸಯಿದಾ ಸಿಮ್ರಾನ್ ಮದನಿ 625 ಕ್ಕೆ 625 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಶಿರಸಿ ಮತ್ತು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 7 ವಿದ್ಯಾರ್ಥಿಗಳು 625/625 ಅಂಕ ಗಳಿಸಿದ್ದಾರೆ.
ಗ್ರೇಡಿಂಗ್ ಪಡೆದ ವಿದ್ಯಾರ್ಥಿಗಳ ಸಂಖ್ಯೆ
A+ ಗ್ರೇಡ್ ನಲ್ಲಿ 1,18,875 (ಶೇ.16.48) ವಿದ್ಯಾರ್ಥಿಗಳು, A ಗ್ರೇಡ್ ನಲ್ಲಿ 1,82,600 (25.31%), B+ ಗ್ರೇಡ್ ನಲ್ಲಿ 1,73,528 (ಶೇ.24.06), B ಗ್ರೇಡ್ ನಲ್ಲಿ 1,43,900 (19.95%), C+ ಗ್ರೇಡ್ ನಲ್ಲಿ 87,801 (12.17%) ಹಾಗೂ C ಗ್ರೇಡ್ ನಲ್ಲಿ 14,627 (ಶೇ. 2.03) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಔಟ್ ಆಫ್ ಔಟ್ ಪಡೆದ ವಿದ್ಯಾರ್ಥಿಗಳು
ಔಟ್ ಆಫ್ ಔಟ್ ಪಡೆದ ವಿದ್ಯಾರ್ಥಿಗಳು
ಈ ಸಲದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ 625 ಅಂಕಕ್ಕೆ 625 ಅಂಕವನ್ನ 145 ಮಕ್ಕಳು ಪಡೆದುಕೊಂಡಿದ್ದಾರೆ. ಹಾಗೇ,
625ಕ್ಕೆ 624 ಅಂಕ ಪಡೆದವರು- 309
-625ಕ್ಕೆ 623ಅಂಕ ಪಡೆದವರು 472
-622 ಅಂಕ ಪಡೆದವರು- 615
- 621 ಅಂಕ ಪಡೆದವರು- 706
-620 ಅಂಕ ಪಡೆದವರು -773 ವಿದ್ಯಾರ್ಥಿಗಳು
ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು
ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು
ಪ್ರಥಮ ಭಾಷೆ- 19,125 ವಿದ್ಯಾರ್ಥಿಗಳು
ದ್ವಿತೀಯ ಭಾಷೆ -13,458 ವಿದ್ಯಾರ್ಥಿಗಳು
ತೃತೀಯ ಭಾಷೆ - 43,126 ವಿದ್ಯಾರ್ಥಿಗಳು
ಗಣಿತ - 13,683 ವಿದ್ಯಾರ್ಥಿಗಳು
ವಿಜ್ಞಾನ 6592 ವಿದ್ಯಾರ್ಥಿಗಳು
ಸಮಾಜ ವಿಜ್ಞಾನ- 50,782 ವಿದ್ಯಾರ್ಥಿಗಳು
3,58,602 ಬಾಲಕರು ಉತ್ತೀರ್ಣ
2021-22ನೇ ಸಾಲಿನಲ್ಲಿ 8,53,436 ವಿದ್ಯಾರ್ಥಿಗಳು ಹಾಜರಾಗಿದ್ದು, 7,30,881 ಉತ್ತೀರ್ಣರಾಗಿ ಶೇಕಡವಾರು ಫಲಿತಾಂಶ 85.63% ರಷ್ಟು ಆಗಿದೆ.
ಲಿಂಗವಾರು ಫಲಿತಾಂಶ
ಹಾಜರು- ಉತ್ತೀರ್ಣ- ಶೇಕಡವಾರು
ಬಾಲಕಿಯರು- 4,12,334- 3,72,278-90.29%
ಬಾಲಕರು-4,41,099- 3,58,602- 81.30%
ಶಾಲಾವಾರು ಫಲಿತಾಂಶ
*ಸರ್ಕಾರಿ- 88.0%
*ಅನುದಾನಿತ- 87.84%
*ಅನುದಾನ ರಹಿತ-92.29%
ನಗರ ಮತ್ತು ಗ್ರಾಮೀಣವಾರು ಫಲಿತಾಂಶ
ನಗರ- 2,92,946-86.64%
ಗ್ರಾಮೀಣ-4,28,385- 91.32%
ವಿಜಯಪುರದ ಅಮಿತ್ ಮಾದರ್ ರಾಜ್ಯಕ್ಕೆ ಪ್ರಥಮ
ವಿಜಯಪುರ ಜಿಲ್ಲೆಯ ವಿದ್ಯಾರ್ಥಿ ಅಮಿತ್ ಮಾದರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ತುಮಕೂರಿನ ಭೂಮಿಕಾ ಬಿಆರ್ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.