ISROನಿಂದ SAR ಡೇಟಾ ಸಂಸ್ಕರಣೆಯ ಉಚಿತ ಆನ್‌ಲೈನ್ ಕೋರ್ಸ್

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಡೇಟಾ ಪ್ರೊಸೆಸಿಂಗ್ ಕೋರ್ಸ್‌ ಅನ್ನು ಆರಂಭಿಸುತ್ತಿದ್ದು, ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಈ ಉಚಿತ ಕೋರ್ಸ್ ನಲ್ಲಿ  ಭಾಗವಹಿಸಬಹುದಾಗಿದೆ. ಏಪ್ರಿಲ್ 4 ರಿಂದ ಮೇ 3 ರವರೆಗೆ ಆನ್ ಲೈನ್ ನೋಂದಣಿ ಪ್ರಕ್ರಿಯೆ ನಡೆಯಲಿದೆ. 

ISRO is offering a free online course on SAR data processing for students and professionals

ಬೆಂಗಳೂರು(ಎ.1): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian space research organization - ISRO), ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ SAR ಡೇಟಾ ಸಂಸ್ಕರಣೆಯ ಉಚಿತ ಆನ್‌ಲೈನ್ ಕೋರ್ಸ್ ಅನ್ನು ನೀಡಲು ನಿರ್ಧರಿಸಿದೆ. ಇಸ್ರೋ, ವಿಪತ್ತು ನಿರ್ವಹಣಾ ಕ್ಷೇತ್ರದ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್‌ಗಳ (MOOC) ಮಾದರಿಯಲ್ಲಿ “SAR ಡೇಟಾ ಸಂಸ್ಕರಣೆ ಮತ್ತು ಅದರ ಅಪ್ಲಿಕೇಶನ್‌ಗಳು” ಕುರಿತು ಉಚಿತ ಆನ್‌ಲೈನ್ ಕೋರ್ಸ್ ಅನ್ನು ನೀಡಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ SAR ಡೇಟಾ ಸಂಸ್ಕರಣೆ ಆನ್ ಲೈನ್ ಕೋರ್ಸ್ ಗೆ ತನ್ನದೇ ಕೇಂದ್ರವಾಗಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ (IIRS) ಮೂಲಕ ಸರ್ಕಾರಿ ಅಧಿಕಾರಿಗಳು, ವೃತ್ತಿಪರರು, ಶಿಕ್ಷಣತಜ್ಞರು, ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಮತ್ತು ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಇತರ ಪಾಲುದಾರರಿಗೆ ಈ ಉಚಿತ ಕೋರ್ಸ್ ಒದಗಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವವರಿಗೆ ಜಿಯೋಸ್ಪೇಷಿಯಲ್ ತಂತ್ರಜ್ಞಾನದ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಈ ಕಾರ್ಯಕ್ರಮವನ್ನು ನೀಡಲಾಗುತ್ತಿದೆ ಎಂದು IIRS ಹೇಳುತ್ತದೆ. 

 DUTCH STUDENT SELLING SOUL ತನ್ನ ಆತ್ಮವನ್ನೇ NFTಯಲ್ಲಿ ಮಾರಾಟಕ್ಕಿಟ್ಟ ವಿದ್ಯಾರ್ಥಿ!

ಇಸ್ರೋದ SAR ಡೇಟಾ ಸಂಸ್ಕರಣೆ ಆನ್ ಲೈನ್ ಕೋರ್ಸ್‌ ನ  ಮಾಸಿವ್ ಓಪನ್ ಆನ್‌ಲೈನ್ ಕೋರ್ಸ್ (Massive Open Online Course MOOC) ಮಾದರಿಯು ಸ್ವಯಂ  ಬಳಕೆದಾರ ಕೇಂದ್ರಿತ ಕಲಿಕೆಯ ತತ್ವವನ್ನು ಆಧರಿಸಿದೆ.  ಈ MOOC ಮಾದರಿಯು  ಜಗತ್ತಿನಾದ್ಯಂತ ಕಲಿಯುವವರನ್ನು ಶಿಕ್ಷಕರ ಜೊತೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಸಹಕಾರಿ ಕಲಿಕೆಯ ವೇದಿಕೆಗಳಲ್ಲಿ ವಿದ್ಯಾರ್ಥಿಗಳ ನಡುವಿನ ಸಂವಹನವನ್ನು ಬೆಂಬಲಿಸಲು ಇದು ಬಳಕೆದಾರ ಮತ್ತು ಚರ್ಚಾ ವೇದಿಕೆಗಳನ್ನು ಕಲ್ಪಿಸುತ್ತದೆ. 

ವಿಷಯದ ಬಗ್ಗೆ ಆಳ ಅಧ್ಯಯನ ಮಾಡಿರುವ ಹಾಗೂ ಅನುಭವಿ ಪರಿಣಿತರು ತರಬೇತಿ ನೀಡುತ್ತಾರೆ. ಕೋರ್ಸ್ ಕಸ್ಟಮೈಸ್ ಮಾಡಿದ ವಿಡಿಯೊ ಸೆಷನ್‌ಗಳು, 2D ಮತ್ತು 3D ಅನಿಮೇಷನ್‌ಗಳು, SCROM ಪ್ಯಾಕೇಜ್ ಗಳು, ಉಪನ್ಯಾಸ ಟಿಪ್ಪಣಿಗಳು ಮತ್ತು ಪ್ರಸ್ತುತಿಗಳನ್ನು ಅಧ್ಯಯನ ವಸ್ತುವಾಗಿರಲಿವೆ. ಇಸ್ರೋ ಉಚಿತ ಆನ್‌ಲೈನ್ ಕೋರ್ಸ್‌ಗೆ ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಕೆಲಸ ಮಾಡಲು ಸರ್ಕಾರಿ ಅಧಿಕಾರಿಗಳು, ವೃತ್ತಿಪರರು,  ಶಿಕ್ಷಣತಜ್ಞರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸ್ಟಾಕ್ ಹೋಲ್ಡರ್ ಗಳು ಸೇರಬಹುದು.  ಶೀಘ್ರದಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ SAR ಡೇಟಾ ಸಂಸ್ಕರಣೆ ಆನ್ ಲೈನ್ ಕೋರ್ಸ್ ಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಏಪ್ರಿಲ್ 4 ರಿಂದ ಮೇ 3 ರವರೆಗೆ ಆನ್ ಲೈನ್ ನೋಂದಣಿ ಪ್ರಕ್ರಿಯೆ ನಡೆಯಲಿದೆ. 

Pariksha Pe Charcha 2022: ಮಕ್ಕಳು ಮೊಬೈಲ್ ನಿಂದ ದೂರ ಇರಲು ಮೋದಿ ಸಲಹೆ

ಕೋರ್ಸ್ ಸೇರಲು ಬಯಸುವವರು IIRS ಪ್ಲಾಟ್‌ಫಾರ್ಮ್‌ಗೆ ಲಾಗ್ ಇನ್ ಮಾಡುವ ಮೂಲಕ ಮತ್ತು ಕೆಳಗಿನ ವಿವರಗಳನ್ನು ಒದಗಿಸುವ ಮೂಲಕ ಕೋರ್ಸ್‌ಗೆ ನೋಂದಾಯಿಸಿಕೊಳ್ಳಬಹುದುನಿಮ್ಮ ಹೆಸರು, ಇಮೇಲ್ ಮತ್ತು ಪಾಸ್‌ವರ್ಡ್‌ನೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಕೋರ್ಸ್ ಆಯ್ಕೆಮಾಡಿ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ವಿವರಗಳನ್ನು ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಭರ್ತಿ ಮಾಡಿ. ನಂತರ ಕೋರ್ಸ್‌ಗೆ ಅರ್ಜಿ ಸಲ್ಲಿಸಿ. ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಅಭ್ಯರ್ಥಿಗಳು ಪ್ಲಾಟ್‌ಫಾರ್ಮ್‌ಗೆ ಲಾಗ್ ಇನ್ ಮಾಡಬಹುದು (ತಮ್ಮ ಹೆಸರು ಮತ್ತು ಪಾಸ್‌ವರ್ಡ್ ಬಳಸಿ) ಮತ್ತು ಕೋರ್ಸ್ ತೆಗೆದುಕೊಳ್ಳಬಹುದು.

ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಭಾರತೀಯ ಹೆಮ್ಮೆಯ ಸಂಸ್ಥೆಯಾಗಿದೆ. ಇಸ್ರೋ ಬಾಹ್ಯಾಕಾಶದಲ್ಲಿ ಸಾಕಷ್ಟು ಗಮನಾರ್ಹ ಸಾಧನೆಗಳನ್ನು ಮಾಡಿದೆ. ನಾನಾ ವಿಧದ ಮತ್ತು ಹಲವು ಸ್ತರರದ ಸ್ಯಾಟಲೈಟ್‌ಗಳನ್ನು ಉಡಾವಣೆ ಮೂಲಕ ಸೈ ಎನಿಸಿಕೊಂಡಿದೆ. ಚಂದ್ರಯಾನ(Chandrayan) ಮತ್ತು ಮಂಗಳಯಾನ (Mangalayan)ಗಳ ಮೂಲಕ ಜಗತ್ತಿನಾದ್ಯಂತ ತನ್ನ ಪ್ರಭಾವನ್ನು ವಿಸ್ತರಿಸಿಕೊಂಡಿದೆ. 

Latest Videos
Follow Us:
Download App:
  • android
  • ios