Dutch Student Selling Soul ತನ್ನ ಆತ್ಮವನ್ನೇ NFTಯಲ್ಲಿ ಮಾರಾಟಕ್ಕಿಟ್ಟ ವಿದ್ಯಾರ್ಥಿ!
21 ವರ್ಷದ ಡಚ್ ವಿದ್ಯಾರ್ಥಿ ಸ್ಟಿಜ್ನ್ ವ್ಯಾನ್ ಸ್ಕೈಕ್ ಎಂಬಾತ ತನ್ನ 'ಆತ್ಮ'ವನ್ನು NFT ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿದ್ದು, ವೈರಲ್ ಆಗಿದೆ.
ಹಾಲೆಂಡ್ (ಎ.1) ಆಶ್ಚರ್ಯಕರ ಬೆಳವಣಿಗೆಯಪೊಂದರಲ್ಲಿ 21 ವರ್ಷದ ಡಚ್ ವಿದ್ಯಾರ್ಥಿ ಸ್ಟಿಜ್ನ್ ವ್ಯಾನ್ ಸ್ಕೈಕ್ (Stijn van Schaik) ಎಂಬಾತ ತನ್ನ 'ಆತ್ಮ'ವನ್ನು NFT (non-fungible token) ಮಾರುಕಟ್ಟೆಯಲ್ಲಿ ಡಿಜಿಟಲ್ ಕಲಾಕೃತಿಯಾಗಿ ಮಾರಾಟಕ್ಕಿಟ್ಟಿದ್ದಾನೆ. ಹೇಗ್ ಆರ್ಟ್ ಅಕಾಡೆಮಿಯ (hague art academy) ವಿದ್ಯಾರ್ಥಿಯಾದ ಸ್ಟಿಜ್ನ್ ವ್ಯಾನ್ ಸ್ಕೈಕ್, ಓದುವ ಸಂಕ್ಷಿಪ್ತ ಮತ್ತು ಸರಳವಾದ ಪಟ್ಟಿಯೊಂದಿಗೆ ತನ್ನ ಆತ್ಮವನ್ನು OpenSea ನಲ್ಲಿ ಮಾರಾಟಕ್ಕೆ ಇಟ್ಟಿದ್ದು, "Soul of Stinus" ಅಂತ ತಲೆಬರಹ ಕೊಟ್ಟಿದ್ದಾನೆ.
ಹೆಲೋ ಗೆಳೆಯರೇ ನನ್ನ ಪ್ರೊಫೈಲ್‌ಗೆ ಸ್ವಾಗತ. ನಾನು ಇಲ್ಲಿ ನನ್ನ ಆತ್ಮವನ್ನು ಮಾರುತ್ತಿದ್ದೇನೆ. ನನ್ನ ಮತ್ತು ನನ್ನ ಆತ್ಮದ ಬಗ್ಗೆ ಏನನ್ನೂ ಕೇಳಲು ಹಿಂಜರಿಯಬೇಡಿ. ಯಾವುದೇ ಪ್ರಶ್ನೆಗೂ ಮುಕ್ತ ಅವಕಾಶ ಇದೆ. ಜೊತೆಗೆ ಈ ಆತ್ಮಕ್ಕೆ ತನ್ನದೇ ಆದ ರೀತಿ ರಿವಾಜು ಇದೆ ಎಂದಿದ್ದು, ತ್ಯಾಗ ಮಾಡುವುದು ಅಥವಾ ಅರ್ಪಿಸುವುದು, ಸಂಪೂರ್ಣ ಅಥವಾ ಭಾಗಶಃ, ಯಾವುದೇ ದೇವತೆ ಅಥವಾ ಆಧ್ಯಾತ್ಮಿಕ ಘಟಕದ ಬಗ್ಗೆ ಆತ್ಮ ಹೇಳುತ್ತದೆ ಎಂದೂ ಸ್ಟಿಜ್ನ್ ಬರೆದಿದ್ದಾನೆ.
ಒಬ್ಬ ವ್ಯಕ್ತಿಯು NFT ಅನ್ನು ಕ್ಲಿಕ್ ಮಾಡಿದಾಗ, ಅದರಲ್ಲಿರುವ ವಿವರಣೆಯು ಹೀಗಿದೆ. ಹಲೋ ವ್ಯಕ್ತಿ, ನೀವೀಗ ಆತ್ಮವನ್ನು ನೋಡುತ್ತಿದ್ದೀರಿ. ಸದ್ಯಕ್ಕೆ ಅದು ನನ್ನದು. ಬ್ಲಾಕ್‌ಚೈನ್‌ನಲ್ಲಿ ಅದನ್ನು ಸಂಪೂರ್ಣವಾಗಿ ಅಪ್‌ಲೋಡ್ ಮಾಡಿದ ನಂತರ, ಏನಾಗುತ್ತದೆ ಎಂದು ಯಾರಿಗೆ ಗೊತ್ತಿದೆ?. ಆತ್ಮವು ವಿಕೇಂದ್ರೀಕರಣಗೊಳ್ಳುವುದರ ಅರ್ಥವೇನು? ನಾವು ಕಂಡುಹಿಡಿಯೋಣ ಎಂದಿದೆ.
Pariksha Pe Charcha 2022: ಮಕ್ಕಳು ಮೊಬೈಲ್ ನಿಂದ ದೂರ ಇರಲು ಮೋದಿ ಸಲಹೆ
ನಮ್ಮ ನಮ್ಮ ಆತ್ಮವನ್ನು ಡಿಜಿಟೈಸ್ ಮಾಡಲು ವಾಸ್ತವವಾಗಿ ಸಾಧ್ಯವಿಲ್ಲ. ಆದರೆ ಕಲಾವಿದ ಸ್ಟಿಜ್ನ್ ವ್ಯಾನ್ ಸ್ಕೈಕ್ ತನ್ನ ವಿಲಕ್ಷಣವಾದ ಯೋಚನೆ ಮತ್ತು ಯೋಜನೆ ಮಾಡಿ ವೈರಲ್ ಆಗಿದ್ದಾನೆ.
NFT (Non fungible tokens) ಡಿಜಿಟಲ್ ಕಲೆ ಅಥವಾ ಮೆಮೆ ಮಾರುಕಟ್ಟೆಯು ಪ್ರಸ್ತುತ ಸಾರ್ವಕಾಲಿಕ ಎತ್ತರದಲ್ಲಿದೆ. COVID-19 ಸಾಂಕ್ರಾಮಿಕ ಸಮಯದಲ್ಲಿ NFT ಮಾರಾಟವು ಉತ್ತುಂಗಕ್ಕೇರಿತ್ತು. ಡಿಜಿಟಲ್ ಉತ್ಸಾಹಿಗಳು ಮತ್ತು ಹೂಡಿಕೆದಾರರು ಡಿಜಿಟಲ್ (Digital) ಆಗಿ ಮಾತ್ರ ಇರುವ ವಸ್ತುಗಳ ಮೇಲೆ ಭಾರಿ ಮೊತ್ತದ ಹಣವನ್ನು ಖರ್ಚು ಮಾಡಲು ಮುಂದೆ ಬಂದ ಕಾರಣ ಇದು ಜನಪ್ರಿಯವಾಯಿತು.
ಬಿಸಿಯೂಟ ಯೋಜನೆಗೆ ಡಾ ಶಿವಕುಮಾರ ಸ್ವಾಮೀಜಿಗಳ ಹೆಸರಿಡಲು ಸರಕಾರದ ತೀರ್ಮಾನ
ಸಂಗ್ರಹಿಸಿಡಬಹುದಾದ ಡಿಜಿಟಲ್ ಸ್ವತ್ತುಗಳೆಂದರೆ GIF ಗಳು, ಹಾಡುಗಳು ಮತ್ತು ವೀಡಿಯೊಗಳು. ಇವನ್ನು ಈ ವರ್ಷ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ. ಆದರೆ ಡಿಜಿಟಲ್ ಕಲಾಕೃತಿಗೆ ಅತ್ಯಂತ ಹೆಚ್ಚಿನ ಮಾರಾಟ ಕಂಡುಬಂದಿದೆ. NFT ಗಳ ಪ್ರಪಂಚವು ಕೆಲವೊಮ್ಮೆ ವಿಚಿತ್ರವಾದ ಸ್ಥಳವಾಗಿದೆ ಏಕೆಂದರೆ ಕೆಲವು ನಿಜವಾಗಿಯೂ ವಿಲಕ್ಷಣವಾದ ರಚನೆಗಳು ಅತೀ ಹೆಚ್ಚು ಮಾರಾಟವಾಗಿವೆ.
21 ವರ್ಷದ ಕಲಾ ವಿಭಾಗದ ವಿದ್ಯಾರ್ಥಿ ಸ್ಟಿಜ್ನ್ ವ್ಯಾನ್ ಸ್ಕೈಕ್ ಮೂಲತ ನೆದರ್‌ಲ್ಯಾಂಡ್ ಅವನು NFT ಮಾರುಕಟ್ಟೆಯ OpenSea ನಲ್ಲಿ ನಿರೀಕ್ಷಿತ ಖರೀದಿದಾರರಿಗೆ ಅಸಾಮಾನ್ಯವಾದ ಐಟಂ ಇರಿಸಿದ್ದು, ಇದನ್ನು ವಿಲಕ್ಷಣ ಪಟ್ಟಿಗಳು ಮತ್ತು ಮಾರಾಟಗಳ ಪಟ್ಟಿಗೆ ಸೇರಿಸಲಾಗಿದೆ.
ಆದಾಗ್ಯೂ, ಮಾರಾಟದ ಷರತ್ತುಗಳನ್ನು ಹೇಳುವ "ಆತ್ಮದ ಒಪ್ಪಂದ" ಇದೆ. ಆತ್ಮ NFT ಯ ಅತ್ಯಧಿಕ ಬಿಡ್ 378 ಡಾಲರ್ ಎಂದು ವರದಿಯಾಗಿದೆ.
Vijayapura: ಬಸ್ ಪಾಸ್ ಅವಧಿ ಮುಕ್ತಾಯವಾಗಿದ್ದ ಹಿನ್ನೆಲೆ: ವಿದ್ಯಾರ್ಥಿಗಳನ್ನು ನಡುದಾರಿಯಲ್ಲಿ ಬಿಟ್ಟ ಕಂಡಕ್ಟರ್!