ಕೌನ್ಸಿಲ್ ಫಾರ್‌ ದಿ ಇಂಡಿಯನ್ ಸ್ಕೂಲ್‌ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ (ಸಿಐಎಸ್‌ಸಿಇ) ಮಂಡಳಿಯು ಪ್ರಸ್ತಕ ಸಾಲಿನ 10,12 ತರಗತಿಯ ಫಲಿತಾಂಶಗಳನ್ನು ಬುಧವಾರ ಪ್ರಕಟಿಸಿದೆ. ಈ ಬಾರಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 

ನವದೆಹಲಿ (ಮೇ.1): ಕೌನ್ಸಿಲ್ ಫಾರ್‌ ದಿ ಇಂಡಿಯನ್ ಸ್ಕೂಲ್‌ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ (ಸಿಐಎಸ್‌ಸಿಇ) ಮಂಡಳಿಯು ಪ್ರಸ್ತಕ ಸಾಲಿನ 10,12 ತರಗತಿಯ ಫಲಿತಾಂಶಗಳನ್ನು ಬುಧವಾರ ಪ್ರಕಟಿಸಿದೆ. ಈ ಬಾರಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 

10,12ನೇ ತರಗತಿ ಫಲಿತಾಂಶದಲ್ಲಿ ಶೇ.99.45ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದರೆ, ಶೇ. 98.64 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಐಸಿಎಸ್‌ಇ 10 ನೇ ತರಗತಿ ಲಿಖಿತ ಪರೀಕ್ಷೆಯು 67 ವಿಷಯಗಳಲ್ಲಿ ನಡೆದಿತ್ತು. 12 ತರಗತಿ ಐಎಸ್‌ಸಿ ಪರೀಕ್ಷೆಯು ಒಟ್ಟು 47 ವಿಷಯಗಳಲ್ಲಿ ನಡೆಸಲಾಗಿತ್ತು. ಜುಲೈನಲ್ಲಿ ಸುಧಾರಣಾ ಪರೀಕ್ಷೆಗಳು ನಡೆಯಲಿದೆ.

ಇದನ್ನೂ ಓದಿ: Breaking: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಈ ವರ್ಷ 73.45%, ಉಡುಪಿ ಫಸ್ಟ್, ದಕ್ಷಿಣ ಕನ್ನಡ ಸೆಕೆಂಡ್‌!

ಫಲಿತಾಂಶ ಪರಿಶೀಲಿಸಿ:

"ಅಭ್ಯರ್ಥಿಗಳು ಮತ್ತು ಪೋಷಕರು CISCE ವೆಬ್‌ಸೈಟ್ ಅಥವಾ ಮಂಡಳಿಯ CAREERS ಪೋರ್ಟಲ್ ಬಳಸಿ ಫಲಿತಾಂಶಗಳನ್ನು ಪರಿಶೀಲಿಸಬಹುದು. ಫಲಿತಾಂಶಗಳನ್ನು ಡಿಜಿಲಾಕರ್ ಮೂಲಕವೂ ಪ್ರವೇಶಿಸಬಹುದು ಎಂದು ಮುಖ್ಯ ಕಾರ್ಯನಿರ್ವಾಹಕ ಜೋಸೆಫ್ ಎಮ್ಯಾನುಯೆಲ್ ಹೇಳಿದರು. 10 ನೇ ತರಗತಿ (ICSE) ಮತ್ತು 12 ನೇ ತರಗತಿ (ISC) ಗಾಗಿ ಸುಧಾರಣಾ ಪರೀಕ್ಷೆಗಳನ್ನು ಜುಲೈನಲ್ಲಿ ನಡೆಸಲಾಗುವುದು.