2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ 73.45 ಫಲಿತಾಂಶ ದಾಖಲಾಗಿದ್ದು,  ಬಾಲಕಿಯರೇ  ಮೇಲುಗೈ ಸಾಧಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶವನ್ನು ಪ್ರಕಟಿಸಿದರು. ಫಲಿತಾಂಶವು karresults.nic.in ಮತ್ತು kseab.karnataka.gov.in ವೆಬ್‌ಸೈಟ್‌ಗಳಲ್ಲಿ ಲಭ್ಯವಿದ್ದು, ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮಾರ್ಚ್ 1 ರಿಂದ 20 ರವರೆಗೆ ಪರೀಕ್ಷೆ ನಡೆದಿತ್ತು

ಬೆಂಗಳೂರು (ಏ.8): 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಮಂಗಳವಾರ ಬಿಡುಗಡೆಯಾಗಿದೆ. ಈ ಬಾರಿ ದ್ವಿತೀಯ ಪಿಯುಸಿ 73.45 ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ ಶೇಕಾಡವಾರು ಫಲಿತಾಂಶ ಕಡಿಮೆಯಾಗಿದೆ. ಪ್ರತೀ ವರ್ಷದಂತೆ ಈ ಬಾರಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆ ಅಧ್ಯಕ್ಷರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಪ್ರಕಟಿಸಿದರು. ಮಧ್ಯಾಹ್ನ 1.30ರ ಬಳಿಕ ಜಾಲತಾಣದಲ್ಲಿ ಫಲಿತಾಂಶ ಲಭ್ಯವಿದೆ. karresults.nic.in ಅಥವಾ kseab.karnataka.gov.in ವೆಬ್ ಸೈಟ್ ಅಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಮಾರ್ಚ್ 1 ರಿಂದ ಮಾರ್ಚ್ 20 ರ ವರೆಗೆ ಸೆಕೆಂಡ್ ಪಿಯು ಪರೀಕ್ಷೆ ನಡೆದಿತ್ತು. 7 ಲಕ್ಷದ 13 ಸಾವಿರದ 862 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಬಾರಿ ಉಡುಪಿ (93.90%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ (93.57%) ದ್ವಿತೀಯ ಸ್ಥಾನ ಪಡೆದಿದೆ. ಬೆಂಗಳೂರು ದಕ್ಷಿಣ ತೃತೀಯ ಸ್ಥಾನ ಪಡೆದಿದೆ. ಯಾದಗಿರಿ ಈ ವರ್ಷವೂ ಕೊನೆಯ ಸ್ಥಾನ (48.45%) ಪಡೆದಿದೆ.

ಕಲಾ ವಿಭಾಗದಲ್ಲಿ ಶೇಕಾಡ 53.29% 
ವಾಣಿಜ್ಯ ವಿಭಾಗದಲ್ಲಿ ಶೇಕಾಡ 76.07%
ವಿಜ್ಞಾನ ವಿಭಾಗದಲ್ಲಿ‌ ಶೇಕಾಡ 82.54% 
ಒಟ್ಟು 73.45% 

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌
1.ಸಂಜನಾಬಾಯಿ 597 ಅಂಕ ಇಂದೂ ಪಿಯು ಕಾಲೇಜು ವಿಜಯನಗರ ಜಿಲ್ಲೆ
2.ನಿರ್ಮಾಲಾ 598 ಅಂಕ ಪಂಚಮಸಾಲಿ ಪಿಯು ಕಾಲೇಜು ಹೂವಿನಹಡಗಲಿ

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌
1.ದೀಪಶ್ರೀ 599 ಕೆನರಾ ಪಿಯು ಕಾಲೇಜು ಮಂಗಳೂರು
2.ತೇಜಸ್ವಿನಿ 598 ಭಾರತಮಾತಾ ಪಿಯು ಕಾಲೇಜು ಕೊಪ್ಪ, ಮೈಸೂರು

ವಿಜ್ಞಾನ ವಿಭಾಗ ರಾಜ್ಯಕ್ಕೆ ಟಾಪರ್‌
ಮೊದಲ ಸ್ಥಾನ ಇಬ್ಬರ ಪಾಲಾಗಿದೆ
ಅಮೂಲ್ಯ ಕಾಮತ್ - 599 ಎಕ್ಸ್‌ಫರ್ಟ್ ಪಿಯು ಕಾಲೇಜು ಮಂಗಳೂರು
ದೀಕ್ಷಾ ಆರ್‌ -599 ವಾಗ್ದೇವಿ ಪಿಯು ಕಾಲೇಜು ಶಿವಮೊಗ್ಗ
ಎರಡನೇ ಸ್ಥಾನ ಮೂವರ ಪಾಲಾಗಿದೆ
ಬಿಂದು ನಾವಳೆ -598 ಆಳ್ವಾಸ್‌ ಕಾಲೇಜು ಮೂಡಬಿದಿರೆ
ರಾಜ ಯದುವಂಶಿ - 598 ಆಳ್ವಾಸ್‌ ಕಾಲೇಜು ಮೂಡಬಿದಿರೆ
ವಿಜೇತ್ ಗೌಡ- 598 ಆಳ್ವಾಸ್‌ ಕಾಲೇಜು ಮೂಡಬಿದಿರೆ

ಜಿಲ್ಲೆಗಳ ಶೇಕಾಡಾವರು ಉತ್ತೀರ್ಣ ಫಲಿತಾಂಶ
ಒಟ್ಟು ರಾಜ್ಯ 73.45
1. ಉಡುಪಿ 93.90
2. ದ.ಕನ್ನಡ 93.57
3. ಬೆಂಗಳೂರು ದಕ್ಷಿಣ 85.36
4. ಕೊಡಗು 83.84
5. ಬೆಂಗಳೂರು ಉತ್ತರ 83.31
6. ಉತ್ತರ ಕನ್ನಡ 82.93
7. ಶಿವಮೊಗ್ಗ 79.91
8. ಬೆಂಗಳೂರು ಗ್ರಾ. 79.70
9. ಚಿಕ್ಕಮಗಳೂರು 79.56
10. ಹಾಸನ 77.56
11. ಚಿಕ್ಕಬಳ್ಳಾಪುರ 75.80
12. ಮೈಸೂರು 74.30
13. ಚಾಮರಾಜನಗರ 73.97
14. ಮಂಡ್ಯ 73.27
15. ಬಾಗಲಕೋಟೆ 72.83
16. ಕೋಲಾರ 72.45
17. ಧಾರವಾಡ 72.32
18. ತುಮಕೂರು 72.02
19. ರಾಮನಗರ 69.71
20. ದಾವಣಗೆರೆ 69.45
21. ಹಾವೇರಿ 67.56
22. ಬೀದರ್​ 67.31
23. ಕೊಪ್ಪಳ 67.20
24. ಚಿಕ್ಕೋಡಿ 66.76
25. ಗದಗ 66.64
26. ಬೆಳಗಾವಿ 65.37
27. ಬಳ್ಳಾರಿ 64.41
28. ಚಿತ್ರದುರ್ಗ 59.87
29. ವಿಜಯಪುರ 58.81
30. ರಾಯಚೂರು 58.75
31. ಕಲಬುರುಗಿ 55.70
32. ಯಾದಗಿರಿ 48.45