ಅಂಬೆಡ್ಕರ್‌ರನ್ನು ಕಡೆಗಣಿಸಿ BJP ಸರಕಾರ ವಿಕೃತಿ ಮೆರೆದಿದೆ; DK Shivakumar
ಸಂವಿಧಾನ ರಚನೆಗೆ ಅವರು ನೀಡಿದ ಕೊಡುಗೆಯನ್ನು ಕಡೆಗಣಿಸುವ ಮೂಲಕ BJP ಸರಕಾರ ವಿಕೃತಿ ಮೆರೆದಿದೆ. ನಾನು ಇದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಬೆಂಗಳೂರು (ಜೂ.5): 9ನೇ ತರಗತಿ ಪಠ್ಯದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂದು ಇದ್ದುದನ್ನು ಕಿತ್ತೆಸೆಯುವ, ಸಂವಿಧಾನ ರಚನೆಗೆ ಅವರು ನೀಡಿದ ಕೊಡುಗೆಯನ್ನು ಕಡೆಗಣಿಸುವ ಮೂಲಕ BJP ಸರಕಾರ ವಿಕೃತಿ ಮೆರೆದಿದೆ. ನಾನು ಇದನ್ನು ಉಗ್ರವಾಗಿ ಖಂಡಿಸುತ್ತೇನೆ. BJP ಪಕ್ಷ ಮತ್ತು BJP ಸರಕಾರ ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿ ಎಂಬುದಕ್ಕೆ ಮತ್ತೇನು ಸಾಕ್ಷಿ ಬೇಕು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( dk shivakumar) ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಇನ್ನು ಪಠ್ಯಪುಸ್ತಕ ಪರಿಷ್ಕರಣೆ (Textbook revision) ವಿಚಾರವಾಗಿ ಮಾತನಾಡಿದ ಡಿಕೆಶಿ, ನಾನು ರೋಹಿತ್ ಚಕ್ರತೀರ್ಥ ಬಗ್ಗೆ ಮಾತಾಡೋದ್ರಲ್ಲಿ ಅರ್ಥ ಇಲ್ಲ. ಇದು ಸರ್ಕಾರದ ಬೇಜವಾಬ್ದಾರಿ. ಇದು ಬಿಜೆಪಿಯ ಮುಖವಾಡ, ಬಿಜೆಪಿ ಮನಸ್ಥಿತಿ ಎಂದರು.
40% ಭ್ರಷ್ಟಾಚಾರಕ್ಕೆ ಮಂತ್ರಿಸ್ಥಾನ ಕಳೆದುಕೊಂಡ ಈಶ್ವರಪ್ಪನಿಂದ ನಾನು ಪಾಠ ಕಲಿಬೇಕಾ?
ಕುವೆಂಪು ಅವರು ಇರಬಹುದು, ಭಗವದ್ಗೀತೆ ಇರಬಹುದು, ಜೈನ ಸಮುದಾಯ ಇರಬಹುದು, ನಾರಾಯಣ್ ಗುರು ಸೇರಿದಂತೆ ಎಲ್ಲರನ್ನು ಗೌರವದಿಂದ ನಾವು ಕಾಣುತ್ತೇವೆ. ಅದನ್ನು ತಿರುಚಿ, ಸಾಮಾನ್ಯರ ವರ್ಗಕ್ಕೆ ಸೇರಿಸಿದ್ದಾರೆ. ಎಸ್‌ಟಿ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಬೆನ್ನೆಲುಬಾಗಿ ನಿಂತಿತ್ತು. ಬೇಕಾದಷ್ಟು ಕಾನೂನು ತಂದಿದ್ದೇವೆ. ಅವರೇನು ದಡ್ಡರಾ. ಕಾಡಿನಲ್ಲಿ ಜೀವನ ಮಾಡಿಕೊಂಡು, ನಮಗೆ ರಕ್ಷಣೆ ಕೊಟ್ಟಿದ್ದಾರೆ. ಪಾಳೆಗಾರಿಕೆ ಮಾಡಿದವರು ಇದ್ದಾರೆ. ಹೋರಾಟ ಮಾಡಿದವರು ಇದ್ದಾರೆ. ರಾಜ್ಯವನ್ನು ಆಳಿದವರು ಇದ್ದಾರೆ.
ನಾಡಿನ ಜನರ ಚಡ್ಡಿ ಬಿಚ್ಚಿಸೋ ಕೆಲಸ ಮಾಡ್ಬೇಡಿ, ವಿಪಕ್ಷಕ್ಕೆ Kumaraswamy ಎಚ್ಚರಿಕೆ
ರಾಮಯಾಣ ಬರೆದ ವಾಲ್ಮೀಕಿ ಸಮುದಾಯವನ್ನು ತುಚ್ಛವಾಗಿ ನೋಡೋದು ನಮ್ಮ ಮನಸ್ಸಿಗೆ ನೋವು ಉಂಟು ಮಾಡಿದೆ. ಸಿಎಂ ಅವರ ಪತ್ರಿಕಾ ಹೇಳಿಕೆ ದ್ವಂದ್ವವಾಗಿದೆ. ಡಬಲ್ ಸ್ಟ್ಯಾಂಡರ್ಡ್ ಆಗಿದೆ. ಸಮಿತಿ ಕ್ಲೋಸ್ ಆದ ನಂತರ ಮೇಲೆ , ಎಲ್ಲವೂ ಕೂಡ ಕ್ಲೋಸ್ ಆಗಬೇಕಲ್ಲ? ಬಸವಣ್ಣ, ಹಾಗೂ ಕೆಂಪೇಗೌಡರ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಎಲ್ಲಾ ಶ್ರೀಗಳನ್ನು ನಾನು ಅಭಿನಂದಿಸುತ್ತೇನೆ. ಸಾಹಿತಿಗಳು, ಬರಹಗಾರ ದಿಕ್ಕಾರ ಕೂಗಿದ್ದಕ್ಕೆ ನಾನು ಅಭಿನಂದಿಸುತ್ತೇನೆ. ನಾವು ನಿಮ್ಮ ಜೊತೆ ಹೆಜ್ಜೆ ಹಾಕುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇನ್ನು ವಿಧಾನ ಸಭೆ ಮತ್ತು ವಿಧಾನ ಪರಿಷತ್ ಮತದಾನದ ಹಿನ್ನೆಲೆ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆತ್ಮ ಸಾಕ್ಷಿಯ ಮತಗಳು ಪಕ್ಷಕ್ಕೆ ಬರಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಭೋಪಾಲ್‌ನ ಅನಾಥ ಟಾಪರ್‌ಗೆ ಸಾಲ ವಸೂಲಾತಿ ನೋಟಿಸ್ !
ಯಾರು ಜಾತ್ಯಾತೀತತೆ ಮೇಲೆ ನಂಬಿಕೆ ಇಟ್ಟಿದ್ದಾರೋ ಅವರು ಮತ ಹಾಕುತ್ತಾರೆ. ಯಾರ್ಯಾರು ಏನೇನು ಮಾತನ್ನಾಡಿದ್ದಾರೆ ಅನ್ನೋದು ಗೊತ್ತಿದೆ. ಬೀದಿಯಲ್ಲಿ ನಿಂತು ಸೀರೆ ಉಡಲಿ ಅಂತಾ ಕೆಲವರು ಏನೇನೋ ಮಾತನಾಡಿದ್ದಾರೆ. ಅಭ್ಯರ್ಥಿ ಆಯ್ಕೆಯಲ್ಲಿ ಎಲ್ಲಾ ಹಿರಿಯ ನಾಯಕರ ಸಹಮತ ಇದೆ. ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್ ಎಲ್ಲರೂ ಸೇರಿಯೇ ತೀರ್ಮಾನ ಮಾಡಿರೋದು ಎಂದಿದ್ದಾರೆ.
"