40% ಭ್ರಷ್ಟಾಚಾರಕ್ಕೆ ಮಂತ್ರಿಸ್ಥಾನ ಕಳೆದುಕೊಂಡ ಈಶ್ವರಪ್ಪನಿಂದ ನಾನು ಪಾಠ ಕಲಿಬೇಕಾ?: ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟನಿಂದ ನಾನು ಮಾತು ಕೇಳಬೇಕು ಎಂದು ಜಾಡಿಸಿದ್ದಾರೆ.
ಬೆಂಗಳೂರು (ಜೂ.5): ಈಶ್ವರಪ್ಪ (Eshwarappa) ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈಶ್ವರಪ್ಪ ನಿಂದ ನಾನು ಪಾಠ ಕಲಿಬೇಕಾ.? ಈಶ್ವರಪ್ಪ ಏನಕ್ಕಾಗಿ ಮಂತ್ರಿ ಸ್ಥಾನ ಕಳೆದುಕೊಂಡಿದ್ದು, 40 ಪರ್ಸೆಂಟ್ ಭ್ರಷ್ಟಾಚಾರಕ್ಕೆ ತಾನೇ ಮಂತ್ರಿ ಸ್ಥಾನ ಕಳೆದುಕೊಂಡಿರೋದು. ಭ್ರಷ್ಟನಿಂದ ನಾನು ಮಾತು ಕೇಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಕಿಡಿಕಾರಿದ್ದಾರೆ.
ಪಠ್ಯಪುಸ್ತಕ (Textbook) ವಿಚಾರದಲ್ಲಿ ಸರ್ಕಾರ ಮೊಂಡಾಟ ಮಾಡಿದ್ರೆ ಜನ ತಕ್ಕ ಪಾಠ ಕಲಿಸುತ್ತಾರೆ. ಮಕ್ಕಳಿಗೆ ಜ್ಞಾನ ವಿಕಾಸ ಆಗಬೇಕು. ವೈಜ್ಞಾನಿಕ ಮನೋಭಾವ ಬೆಳಸಬೇಕು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸಬೇಕು. ಅವರ ಬಗ್ಗೆ ಸ್ಪೂರ್ತಿ ಬೆಳೆಸುವ ಕೆಲಸ ಆಗಬೇಕು. ಹೆಡ್ಗೆವಾರ್ ಭಾಷಣ ಯಾರಿಗೆ ಮಾಡಿದ್ರು. ? RSS ನವರಿಗೆ ಮಾಡಿದ ಭಾಷಣ ಬೇಕಾ. ಅದರ ಅಗತ್ಯವಿಲ್ಲ.
Textbook Revision Row: ಸಿಎಂ ಬೊಮ್ಮಾಯಿ ಸ್ಪಷ್ಟ ನಿರ್ಧಾರ ತಿಳಿಸಲಿ: ವಿಪಕ್ಷ ನಾಯಕ ಸಿದ್ದು
ಅಂಬೇಡ್ಕರ್ ಕುರಿತ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಎಂದು ತೆಗೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ನನ್ನ ಪ್ರಕಾರ ಪರಿಷ್ಕರಣೆ ಮಾಡಿರುವುದನ್ನು ಕೈಬಿಡಬೇಕು. ಹಳೆಯದನ್ನೇ ಮುಂದುವರೆಸಬೇಕು. ಹೊಸ ಕಮಿಟಿ ಮಾಡಿ ಅಗತ್ಯ ಇದ್ದರೆ ಪರಿಷ್ಕರಣೆ ಮಾಡಬೇಕು ಎಂದರು.
ಕಾಂಗ್ರೆಸ್ ನಿಂದ ಚಡ್ಡಿ ಸುಡುವ ಕಾರ್ಯಕ್ರಮ ವಿಚಾರವಾಗಿ ಬಿಜೆಪಿಯವರು ಮಾಡಿರುವ ಟೀಕೆಗೆ ಸಿದ್ದು ಪ್ರತಿಕ್ರಿಯೆ ನೀಡಿ. ಟೀಕೆ ಮಾಡೇ ಮಾಡ್ತಾರೆ. ಅವರು ಚಡ್ಡಿ ಇನ್ನೇನು ಮಾಡ್ತಾರೆ ಎಂದು ಹೇಳಿದ್ದಾರೆ.
ಭೋಪಾಲ್‌ನ ಅನಾಥ ಟಾಪರ್‌ಗೆ ಸಾಲ ವಸೂಲಾತಿ ನೋಟಿಸ್ !
ಹೆಡ್ಗೆವಾರ್ ಭಾಷಣ ಶಾಲಾ ಮಕ್ಕಳಿಗೆ ಯಾಕ್ ಬೇಕ್ರಿ?: ‘ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೆವಾರ್ (Hedgewar) ಸ್ವಾತಂತ್ರ್ಯ ಹೋರಾಟಗಾರನಾ? ಅಥವಾ ಹುತಾತ್ಮನಾ? ಆತನ ಭಾಷಣ ಮಕ್ಕಳಿಗೆ ಏಕೆ ಬೇಕ್ರೀ?’ ಹೀಗೆಂದು ಪ್ರಶ್ನಿಸಿದವರು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಠ್ಯದಲ್ಲಿ ಹೆಡ್ಗೆವಾರ್ ಪಾಠ ಉಳಿಸಿಕೊಳ್ಳಲಾಗುವುದು ಎಂಬ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆಗೆ ತೀವ್ರ ಕಿಡಿಕಾರಿದರು.
ಪಠ್ಯದಲ್ಲಿ ಹೆಡ್ಗೆವಾರ್ ಪಾಠ ಸೇರ್ಪಡೆಗೆ ನಮ್ಮ ವಿರೋಧವಿದೆ. ಹೆಡ್ಗೆವಾರ್ ಆರೆಸ್ಸೆಸ್ ಬಗ್ಗೆ ಮಾತನಾಡಿದ್ದಾರೆ. ಬಸವ, ಬುದ್ಧ, ಅಂಬೇಡ್ಕರ್, ಗಾಂಧಿ, ನೆಹರು, ಪಟೇಲ್ ತ್ಯಾಗ ಮಾಡಿದ್ದಾರೆ. ಹೆಡ್ಗೆವಾರ್ ಏನು ಮಾಡಿದ್ದಾರೆ? ಆರೆಸ್ಸೆಸ್ ಸಂಸ್ಥಾಪಕರು ಎಂಬ ಕಾರಣಕ್ಕೆ ಪಠ್ಯ ಆಗಬೇಕೆ? ಕುವೆಂಪು ರಚಿತ ನಾಡಗೀತೆಯನ್ನು ತಿರುಚುವುದು, ಭಗತ್ ಸಿಂಗ್, ನಾರಾಯಣಗುರು ಪಾಠ ತೆಗೆಯುವುದು, ಇವೆಲ್ಲ ಏನು ತೋರಿಸುತ್ತದೆ? ನೀವು ಮಕ್ಕಳಿಗೆ ಯಾವ ಸಂದೇಶ ನೀಡುತ್ತಿದ್ದೀರಿ ಎಂದರು.
Textbookಗಳ ಮರು ಮುದ್ರಣ ಇಲ್ಲ; ಸಚಿವ ಬಿಸಿ.ನಾಗೇಶ್
ಕಾಂಗ್ರೆಸ್‌ಗೆ ಸಾಮಾಜಿಕ ನ್ಯಾಯದ ಬದ್ಧತೆಯಿದೆ. ಎಲ್ಲಾ ಜನಾಂಗದ ಏಳಿಗೆ ಬಯಸುತ್ತದೆ. ಬಸವಾದಿ ಶರಣರು, ಬುದ್ಧ, ಸಂತ, ಸೂಫಿಗಳು ಸಮ ಸಮಾಜ ಬಯಸಿದ್ದರು. ಅಧಿಕಾರ, ದೇಶದ ಸಂಪತ್ತು ಕೆಲವರ ಕೈಯಲ್ಲಿ ಮಾತ್ರ ಇರಬಾರದು. ಸರ್ವರಿಗೂ ಹಂಚಿಕೆ ಆಗಬೇಕೆಂಬ ವಿಚಾರ ಅಂಬೇಡ್ಕರ್ ಹೇಳಿದ್ದರು. ಕೆಲ ಪಕ್ಷದವರು ಸಂವಿಧಾನಕ್ಕೆ ಮಾರಕವಾಗಿದ್ದಾರೆ. ಯಾರು ಸಂವಿಧಾನದ ಆಶಯಗಳಿಗೆ ವಿರುದ್ಧವಿದ್ದಾರೋ ಅವರು ರಾಷ್ಟ್ರಪ್ರೇಮಿಗಳಲ್ಲ. ದೇಶದ್ರೋಹಿಗಳು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ದ ಹರಿಹಾಯ್ದರು.
ಇನ್ನು ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ವಾಗ್ಯುದ್ದ ಮುಂದುವರೆದಿದೆ. ಮಾತ್ರವಲ್ಲ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಕೂಡ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗುತ್ತಿದೆ. ರಾಜ್ಯ ಸರಕಾರದ ಮುಂದಿನ ನಿಲುವೇನು ಎಂಬುದನ್ನು ಕಾದು ನೋಡಬೇಕಿದೆ.