ನಾಡಿನ ಜನರ ಚಡ್ಡಿ ಬಿಚ್ಚಿಸೋ ಕೆಲಸ ಮಾಡ್ಬೇಡಿ, ವಿಪಕ್ಷಕ್ಕೆ Kumaraswamy ಎಚ್ಚರಿಕೆ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೀವು ಯಾರದಾದರೂ ಚಡ್ಡಿ ಬಿಚ್ಚಿಸಿಕೊಳ್ಳಿ, ಆದರೆ ನಾಡಿನ ಜನರ ಚಡ್ಡಿ ಬಿಚ್ಚಿಸೋ ಕೆಲಸ ಈ ನಾಡಿನಲ್ಲಿ ಆಗಬಾರದು ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್, ಸುವರ್ಣನ್ಯೂಸ್
ಬಾಗಲಕೋಟೆ(ಜೂ.5): ನೀವು ಯಾರದಾದರೂ ಚಡ್ಡಿ ಬಿಚ್ಚಿಸಿಕೊಳ್ಳಿ, ಆದರೆ ನಾಡಿನ ಜನರ ಚಡ್ಡಿ ಬಿಚ್ಚಿಸೋ ಕೆಲಸ ಈ ನಾಡಿನಲ್ಲಿ ಆಗಬಾರದು ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.ಬಾಗಲಕೋಟೆ ನಗರಕ್ಕೆ ವಾಯುವ್ಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆ ಪ್ರಚಾರಾರ್ಥ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಿಮಗೆ ಕೈಜೋಡಿಸಿ ಮನವಿ ಮಾಡುತ್ತೇನೆ, ಈ ನಾಡಿನ ಜನರ ಗೌರವ ಉಳಿಸುವಂತಹ ಕೆಲಸ ಮಾಡಿ ಎಂದರು.
ಇನ್ನು ವಿಧಾನ ಪರಿಷತ್ ಚುನಾವಣೆ ಇನ್ನೂ ತುಂಬಾ ದೂರ ಇದೆ. ಜನರಲ್ ಚುನಾವಣೆಗೆ ಇನ್ನೂ ಸಾಕಷ್ಟು ಇಶುವ್ ಗಳು, ಸರಕುಗಳಿದ್ದಾವೆ ಎಂದ ಅವರು, ಚಡ್ಡಿ ಸುಡುವ ಅಭಿಯಾನ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಅದಕ್ಕೆ ಹೇಳಿದ್ದು, ನೀವು ನೀವು ಏನಾದರೂ ಮಾಡಿಕೊಳ್ಳಿ. ರಾಜ್ಯದ ಜನರ ವಿಷಯದಲ್ಲಿ ಅಗೌರವಿತವಾಗಿ ನಡೆದುಕೊಳ್ಳಬೇಡಿ ಎಂದು ನೀವೇನೋ ಮಾಡೋಕೆ ಹೋಗಿ, ಅದು ಜನತೆ ಮೇಲೆ ಪರಿಣಾಮ ಬೀರುವುದು ಬೇಡ ಎಂದರು.
ಪಠ್ಯ ಪರಿಷ್ಕರಣೆ ವಿವಾದ: ಸಚಿವ ಬಿಸಿ ನಾಗೇಶ್ಗೆ ಸಿದ್ದರಾಮಯ್ಯ ಸಾಲು-ಸಾಲು ಪ್ರಶ್ನೆ
ಅಡ್ಡಮತ ಸೆಳೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ನಿಸ್ಸಿಮರು: ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ ಸೆಳೆಯುವ ವಿಚಾರವಾಗಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಅದರಲ್ಲಿ ಅವರೆಲ್ಲಾ ಪರಿಣಿತರಿದ್ದಾರೆ, ಈಗಾಗಲೇ ಆ ಪ್ರಯತ್ನ ಶುರುವಾಗಿದೆ. ಜೆಡಿಎಸ್ ಮತ ಒಡೆಯಬೇಕೆನ್ನೋದು ಎರಡೂ ಪಕ್ಷದಲ್ಲಿ ನಡೆಯುತ್ತಿದೆ. ನಾನು ಆರಾಮವಾಗಿದ್ದೇನೆ ಎಂದ ತಿರುಗೇಟು ನೀಡಿದ ಕುಮಾರಸ್ವಾಮಿ, ನಮ್ಮ ಪಕ್ಷದ ಕೆಲವು ಶಾಸಕರಲ್ಲಿ ಭಿನ್ನಾಭಿಪ್ರಾಯ ಇರೋದು ನಿಜ,ಆ ಭಿನ್ನಾಭಿಪ್ರಾಯ ಹೊರತುಪಡಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಕಾಂಗ್ರೆಸ್ ಏನೇ ಆಸೆ ಆಮಿಷ ತೋರಿಸಿದ್ರೂ ನಮ್ಮ ಮತ ಗಟ್ಟಿಯಾಗಿವೆ ಅನ್ನೋ ವಿಶ್ವಾಸ ನನಗಿದೆ ಎಂದರು.
"
ಜೆಡಿಎಸ್ ಪಕ್ಷದಿಂದ ಶಾಸಕರಿಗೆ ಯಾವ ನಾಯಕರನ್ನು ಸಹ ಭೇಟಿ ಮಾಡಿ ಅಂತ ಹೇಳಿಲ್ಲ: ಜೆಡಿಎಸ್ ಕೆಲ ಶಾಸಕರು ಸಿದ್ದರಾಮಯ್ಯ ಭೇಟಿ ಮಾಡ್ತಿರೋ ವಿಚಾರವಾಗಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ಯಾರನ್ನು ಯಾರಾದ್ರೂ ಸಹ ವೈಯಕ್ತಿಕವಾಗಿ ಭೇಟಿ ಮಾಡಬಹುದು. ಅದಕ್ಕೂ ಚುನಾವಣೆಗೂ ಸಂಭಂದ ಇಲ್ಲ.
40% ಭ್ರಷ್ಟಾಚಾರಕ್ಕೆ ಮಂತ್ರಿಸ್ಥಾನ ಕಳೆದುಕೊಂಡ ಈಶ್ವರಪ್ಪನಿಂದ ನಾನು ಪಾಠ ಕಲಿಬೇಕಾ?:
ನಾವು ಯಾರಿಗೂ ಅಥರೈಸಡ್ ಮಾಡಿಲ್ಲ. ಪಕ್ಷದ ಮುಖಂಡರು, ಶಾಸಕರಿಗೆ ರಾಜ್ಯಸಭಾ ಚುನಾವಣೆ ಸಂಭಂದ ಬೇರೆ ಇರುತ್ತದೆ. ಆದರೆ ನಾಯಕರ ಭೇಟಿಗೆ ಒಪ್ಪಿಗೆ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿ, ಆದರೆ ಅವರ ವೈಯಕ್ತಿಕ ವಿಷಯಕ್ಕೆ ಭೇಟಿ ಮಾಡಬಹುದು, ಅದು ನನಗೆ ಸಂಭಂಧ ಇಲ್ಲ ಎಂದು,ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವುದು ನಿಜ ಎಂದು ಒಪ್ಪಿಕೊಂಡರು.ಆ ಭಿನ್ನಾಭಿಪ್ರಾಯ ಹೊರತುಪಡಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕ್ತಾರೆ ಅನ್ನೋ ವಿಶ್ವಾಸ ಇದೆ ಎಂದರು. ಬಿಜೆಪಿ ಕಾಂಗ್ರೆಸ್ ಏನೇ ಆಸೆ ಆಮಿಷ ತೋರಿಸಿದ್ರೂ ನಮ್ಮ ಮತ ಗಟ್ಟಿಯಾಗಿವೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷಕ್ಕೆ ಬರಲು ಯಾರಿಗೂ ಅಹ್ವಾನಿಸಿಲ್ಲ, ಚರ್ಚೆನೂ ಮಾಡಿಲ್ಲ: ಇದೇ ಸಮಯದಲ್ಲಿ ಕಾಂಗ್ರೆಸ್ ನಿಂದ ಕೆಲವರು ಜೆಡಿಎಸ್ ಸೇರುವ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಇಬ್ರಾಹಿಂ ಅವರು ಕಳೆದ ಏಳೆಂಟು ವರ್ಷ ಕಾಂಗ್ರೆಸ್ ನಲ್ಲಿ ಇದ್ದಂತವರು. ಅವರಿಗೆ ಯಾರ್ಯಾರು ಬರಬಹುದಂತ ಮಾಹಿತಿಗಳಿರಬಹುದು, ಇಬ್ರಾಹಿಂ ಅವರ ಬಳಿ ವಿಷಯ ಪಡೆಯೋದು ಸೂಕ್ತ ಎಂದರಲ್ಲದೆ, ನಾನು ಈ ಬಗ್ಗೆ ಇಲ್ಲಿಯವರೆಗೆ ಯಾರೊಂದಿಗೆಯೂ ಚರ್ಚೆ ಮಾಡಿಲ್ಲ, ಬೇರೆ ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿಲ್ಲ.
ನಾನು ಯಾರಿಗೂ ನಮ್ಮ ಪಕ್ಷಕ್ಕೆ ಬನ್ನಿ ಅಂತ ಆಹ್ವಾನ ಮಾಡಿಲ್ಲ. ನಮ್ಮ ಪಕ್ಷದ ಸಂಘಟನೆ ಮಾಡಿ ಭದ್ರಗೊಳಿಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು. ಇನ್ನು ಚುನಾವಣೆಯಲ್ಲಿ, ನನ್ನ ಗುರಿ 123, ಅದಕ್ಕೆ ಯಾವ ರೀತಿ ಹೋಗಬೇಕೆನ್ನೋದರ ಕಡೆ ನನ್ನ ಗಮನ ಇದೆ, ಬೇರೆ ಪಕ್ಷದ ಇಟ್ಟಿಗೆ ಕಸಿದುಕೊಳ್ಳುವಂತಹ ಕೆಲಸಕ್ಕೆ ನಾನು ಹೋಗಿಲ್ಲ,ಆದ್ರೆ ಬಿಜೆಪಿ , ಕಾಂಗ್ರೆಸ್ ಅವರಿಗೆ ಬಿಟ್ಟಿದ್ದೀನಿ ಎಂದ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟ ಪಡಿಸಿದರು.
ಜೆಡಿಎಸ್ ಪಕ್ಷಕ್ಕೆ ಬರುವಂತೆ ಎಸ್.ಆರ್.ಪಾಟೀಲಗೆ ಆಹ್ವಾನಿಸಿಲ್ಲ: ಇದೇ ಸಮಯದಲ್ಲಿ ಅಸಮಾಧಾನಿತ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಸಂಪರ್ಕ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇಲ್ಲಿಯವರೆಗೆ ನಾನು ಅವರ ಜೊತೆ( ಎಸ್ ಆರ್ ಪಾಟೀಲ್ ) ಚರ್ಚೆ ಮಾಡಿಲ್ಲ.ಎಸ್ ಆರ್ ಪಾಟೀಲ್ ಮನೆಗೆ ಊಟಕ್ಕೆ ಹೋಗ್ತೀರಾ ಎಂಬ ಪ್ರಶ್ನೆಗೆ, ಇಲ್ಲ , ಇಲ್ಲ ನನಗೆ ಆಹ್ವಾನ ಇಲ್ಲ ಎಂದರು.ಈಗ ನಾನು ಅವರನ್ನ ಭೇಟಿ ಮಾಡಿದ್ರೆ ಅದು ನನ್ನ ಸ್ವಾರ್ಥ ಆಗುತ್ತೆ,ವಿಧಾನ ಪರಿಷತ್ ಚುನಾವಣೆ ಮುಗಿದ ಮೇಲೆ ಸಂಧರ್ಭ ಬಂದ್ರೆ ನೋಡೋಣ ಎಂದು ತಿಳಿಸಿದರು.