ಭೋಪಾಲ್‌ನ ಅನಾಥ ಟಾಪರ್‌ಗೆ ಸಾಲ ವಸೂಲಾತಿ ನೋಟಿಸ್ !
ಅಪ್ಪ ಅಮ್ಮನನ್ನು ಕಳೆದುಕೊಂಡಿರುವ ಹತ್ತನೇ ತರಗತಿಯ ಬೋರ್ಡ್‌ನಲ್ಲಿ 99.8% ಅಂಕ ಗಳಿಸಿದ ಭೋಪಾಲ್ ನ ವನಿಶಾಗೆ ಈಗ ತಂದೆ ತೆಗೆದುಕೊಂಡಿದ್ದ ಮನೆ ಸಾಲ ವಿಚಾರವಾಗಿ ಲೀಗಲ್ ನೋಟಿಸ್.
ಭೋಪಾಲ್ (ಜೂ.5): ತನ್ನ ತಂದೆ-ತಾಯಿ ಇಬ್ಬರನ್ನೂ ಕೋವಿಡ್‌ನಿಂದ ಕಳೆದುಕೊಂಡ ತಿಂಗಳೊಳಗೆ ಹತ್ತನೇ ತರಗತಿಯ ಬೋರ್ಡ್‌ನಲ್ಲಿ 99.8% ಅಂಕಗಳನ್ನು ಗಳಿಸಿ 'ಅಪ್ಪಾ ನೀನಿಲ್ಲದೆ ನಾನು ಎತ್ತರವಾಗಿ ನಿಲ್ಲುತ್ತೇನೆ' ಎಂಬ ಕವಿತೆಯನ್ನು ಬರೆದ ಭೋಪಾಲ್ ಟಾಪರ್ ವನಿಶಾ ಪಾಠಕ್ ತಂದೆ ತೆಗೆದುಕೊಂಡಿದ್ದ ಮನೆ ಸಾಲ ವಿಚಾರವಾಗಿ ಕಾನೂನು ನೋಟಿಸ್ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ವನಿಶಾ ತಂದೆ ಜೀತೇಂದ್ರ ಪಾಠಕ್ ಎಲ್ಐಸಿ ಏಜೆಂಟ್ ಆಗಿದ್ದರು. ಸಾವಿಗೂ ಮುನ್ನ ಕಚೇರಿಯಿಂದ ಸಾಲ ಪಡೆದಿದ್ದರು. ವನಿಶಾ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಎಲ್‌ಐಸಿ ತಂದೆಯ ಎಲ್ಲಾ ಉಳಿತಾಯ ಮತ್ತು ಪ್ರತಿ ತಿಂಗಳು ಪಡೆಯುತ್ತಿದ್ದ ಕಮಿಷನ್‌ಗಳನ್ನು ನಿರ್ಬಂಧಿಸಿದೆ. ತನಗೆ 17 ವರ್ಷವಾಗಿರುವುದರಿಂದ ಸಾಲವನ್ನು ಮರುಪಾವತಿಸಲು ಸಮಯ ನೀಡುವಂತೆ ಅಧಿಕಾರಿಗಳಿಗೆ ಹಲವಾರು ಬಾರಿ ಪತ್ರ ಬರೆದಿದ್ದೇನೆ ಆದರೆ ಇದಕ್ಕೆ ಮೌನವೇ ಉತ್ತರವಾಗಿದೆ ಎಂದು ವನಿಶಾ ಹೇಳಿಕೊಂಡಿದ್ದಾರೆ.
Textbookಗಳ ಮರು ಮುದ್ರಣ ಇಲ್ಲ; ಸಚಿವ ಬಿಸಿ.ನಾಗೇಶ್
ವನಿಷಾ ಅವರ ಅರ್ಜಿಯನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಎಲ್‌ಐಸಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವನಿಶಾ ಈ ವಿಚಾರದಲ್ಲಿ ಏನು ಮಾಡಬೇಕೆಂದು ತಿಳಿಯದಾಗಿದ್ದಾಳೆ. ಬಾಕಿಯನ್ನು ಪಾವತಿ ಅಥವಾ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿರಿ ಎಂದು ವನಿಷಾ ತನ್ನ ತಂದೆಯ ಹೆಸರಿನಲ್ಲಿ ಲೀಗಲ್ ನೋಟಿಸ್‌ಗಳನ್ನು ಪಡೆಯಲಾರಂಭಿಸಿದಳು. ಕೊನೆಯದಾಗಿ 2 ಫೆಬ್ರವರಿ 2022 ರಂದು 29 ಲಕ್ಷ ರೂಪಾಯಿಗಳನ್ನು ಪಾವತಿಸಲು ಲೀಗಲ್ ನೋಟಿಸ್ ಬಂದಿತ್ತು.
ಕೋವಿಡ್ 19 ಎರಡನೇ ಅಲೆಯ ಸಮಯದಲ್ಲಿ ಮೇ 2021ರಲ್ಲಿ ಆಕೆಯ ಪೋಷಕರು ಮೃತಪಟ್ಟರು. ಆಘಾತ ಮತ್ತು ಸಂಕಟದ ಮೂಲಕ ಹೋರಾಡುತ್ತಾ, ಅವಳು ತನ್ನ 11 ವರ್ಷದ ಕಿರಿಯ ಸಹೋದರ ವಿವಾನ್ ನನ್ನು ಕೂಡ ನೋಡಿಕೊಳ್ಳುತ್ತಿದ್ದಾಳೆ. ವನಿಶಾ ಸದ್ಯ ತನ್ನ ತಾಯಿಯ ಚಿಕ್ಕಪ್ಪ, ಪ್ರೊಫೆಸರ್ ಅಶೋಕ್ ಶರ್ಮಾ ಅವರ ಆರೈಕೆಯಲ್ಲಿದ್ದಾಳೆ. ಎಲ್‌ಐಸಿಗೆ ಬರೆದ ಪತ್ರದಲ್ಲಿ ನನ್ನ ತಂದೆ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಕ್ಲಬ್ ಎಂಬ ಪ್ರಸಿದ್ಧ ವಿಮಾ ಕ್ಲಬ್‌ನ ಸದಸ್ಯರಾಗಿದ್ದರು ಎಂದು ಬರೆದಿದ್ದಾರೆ. ಆದರೆ ಎಲ್‌ಐಸಿ ಮಾತ್ರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
CDS Examnನಲ್ಲಿ ಚಾಲಕನ ಪುತ್ರ ದೇಶಕ್ಕೆ ಫಸ್ಟ್ ರ‍್ಯಾಂಕ್
ಹಿಜಾಬ್ ವಿವಾದಕ್ಕೆ ಡೋಂಟ್ ಕೇರ್ ಎಂದ ಮುಸ್ಲಿಂ ವಿದ್ಯಾರ್ಥಿನಿಯರು: ಹಿಜಾಬ್ ಹೋರಾಟದ ಮೂಲಕ ವಿಶ್ವದ ಗಮನ ಸೆಳೆದಿದ್ದ ಉಡುಪಿಯ ಸರಕಾರಿ ಪದವಿಪೂರ್ವ ಹೆಮ್ಮಕ್ಕಳ ಕಾಲೇಜು ಸದ್ದಿಲ್ಲದೆ ಸಾಧನೆ ಮಾಡಿದೆ. ಕಳೆದ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯವೇ ಮೆಚ್ಚುವ ದಾಖಲೆ ಬರೆದಿದ್ದು, ನೂತನ ಶೈಕ್ಷಣಿಕ ವರ್ಷದ ಪಿಯುಸಿ ಅಡ್ಮಿಷನ್‌ನಲ್ಲಿ ಹಿಂದೆಂದೂ ಕಾಣದ ಹೆಚ್ಚಳ ಕಂಡುಬಂದಿದೆ. ವಿವಾದ ನಿಮಗೆ ಶಿಕ್ಷಣ ನಮಗೆ, ಎಂದು ಈ ಕಾಲೇಜಿನ ವಿದ್ಯಾರ್ಥಿಗಳು ಘಂಟಾಘೋಷವಾಗಿ ಸಾರಿದ್ದಾರೆ!
ಉಡುಪಿಯ ಸರಕಾರಿ ಹೆಣ್ಮಕ್ಕಳ ಪದವಿಪೂರ್ವ ಕಾಲೇಜು ಯಾರಿಗೆ ಗೊತ್ತಿಲ್ಲ ಹೇಳಿ? ! ಅನೇಕ ದಶಕಗಳಿಂದ ಶೈಕ್ಷಣಿಕ ಸಾಧನೆಗಳನ್ನು ಮಾಡಿದ್ದರೂ ಗಮನಿಸದ ಜನರು, ಹಿಜಾಬ್ ಗದ್ದಲ ಆರಂಭವಾದ ನಂತರ ಕಾಲೇಜಿನ ಮಾನ ಹರಾಜು ಮಾಡಿದ್ದರು. ದೇಶ-ವಿದೇಶಗಳಲ್ಲೂ ಈ ಕಾಲೇಜು ಖ್ಯಾತಿ ಮತ್ತು ಅಪಖ್ಯಾತಿಗೆ ತುತ್ತಾಗಿದ್ದು. ವಿವಾದಗಳು ಏನೇ ಇರಲಿ ನೂತನ ಶೈಕ್ಷಣಿಕ ವರ್ಷದಲ್ಲಿ ಕಾಲೇಜ್ ನಲ್ಲಿ ಭರ್ಪೂರ್ ಅಡ್ಮಿಶನ್ ಆಗಿದೆ.
ಕರ್ನಾಟಕದಲ್ಲಿ ಕೊರೋನಾ ಬಳಿಕ ಶಾಲೆ ಬಿಡ್ತಿರೋ ಮಕ್ಕಳು: ಕಾರಣ?
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಾಲೇಜು ಸೇರ್ಪಡೆ ಯಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇಷ್ಟೆಲ್ಲಾ ಗದ್ದಲ ವಾದ ನಂತರ ಈ ಕಾಲೇಜಿಗೆ ವಿದ್ಯಾರ್ಥಿನಿಯರು ಬರಬಹುದೇ ಎಂಬ ಕುತೂಹಲವಂತೂ ಎಲ್ಲರಿಗೂ ಇತ್ತು. ಸದ್ಯ ಈ ಕಾಲೇಜಿನಿಂದ ದ್ವಿತೀಯ ಪಿಯುಸಿ ಮುಗಿಸಿ ತೆರಳಿದ ವಿದ್ಯಾರ್ಥಿಗಳ ಸಂಖ್ಯೆ 253, ಆದರೆ ಈ ಬಾರಿ ಪ್ರಥಮ ಪಿಯುಸಿಗೆ 335 ವಿದ್ಯಾರ್ಥಿನಿಯರು!