Asianet Suvarna News Asianet Suvarna News

​ನ​ಕಲಿ ಅಡ್ಮಿ​ಶ​ನ್‌: ಕೆನ​ಡಾ​ದಲ್ಲಿ 700 ಭಾರ​ತೀಯ ವಿದ್ಯಾ​ರ್ಥಿ​ಗಳು ಅತಂತ್ರ

ಕೆನಡಾದಲ್ಲಿ ನಕಲಿ ಶಿಕ್ಷಣ ಸಂಸ್ಥೆಯ ಅಡ್ಮಿ​ಶನ್‌ ಆಮಿ​ಷಕ್ಕೆ ಬಲಿ​ಯಾಗಿ 700 ಭಾರ​ತೀಯ ವಿದ್ಯಾ​ರ್ಥಿ​ಗಳು ಅತಂತ್ರ ಸ್ಥಿತಿ ಎದು​ರಿ​ಸು​ತ್ತಿ​ರುವ ಪ್ರಸಂಗ ಬೆಳ​ಕಿಗೆ ಬಂದಿದೆ. ಅಲ್ಲದೆ, ಈ ವಿದ್ಯಾ​ರ್ಥಿ​ಗಳು ಗಡಿ​ಪಾರು ಭೀತಿ​ಯ​ಲ್ಲಿ​ದ್ದಾ​ರೆ.

700 Indian Students struggles in Canada After Fake Admission akb
Author
First Published Jun 9, 2023, 8:28 AM IST

ನವ​ದೆ​ಹ​ಲಿ: ನಕಲಿ ಶಿಕ್ಷಣ ಸಂಸ್ಥೆಯ ಅಡ್ಮಿ​ಶನ್‌ ಆಮಿ​ಷಕ್ಕೆ ಬಲಿ​ಯಾಗಿ 700 ಭಾರ​ತೀಯ ವಿದ್ಯಾ​ರ್ಥಿ​ಗಳು ಅತಂತ್ರ ಸ್ಥಿತಿ ಎದು​ರಿ​ಸು​ತ್ತಿ​ರುವ ಪ್ರಸಂಗ ಬೆಳ​ಕಿಗೆ ಬಂದಿದೆ. ಅಲ್ಲದೆ, ಈ ವಿದ್ಯಾ​ರ್ಥಿ​ಗಳು ಗಡಿ​ಪಾರು ಭೀತಿ​ಯ​ಲ್ಲಿ​ದ್ದಾ​ರೆ.  ಈ ವಿದ್ಯಾ​ರ್ಥಿ​ಗಳನ್ನು ಅಕ್ರ​ಮ​ವಾಗಿ ಅಡ್ಮಿ​ಷನ್‌ ಮಾಡಿ​ಕೊ​ಳ್ಳ​ಲಾ​ಗಿತ್ತು. ಪಂಜಾ​ಬಿ​ಗಳೇ ಇವ​ರಲ್ಲಿ ಹೆಚ್ಚಿನ ಸಂಖ್ಯೆ​ಯ​ಲ್ಲಿ​ದ್ದಾ​ರೆ. ಇವರು ಕೆನ​ಡಾದ ಕಾಯಂ ನಿವಾ​ಸಿ​ಗ​ಳಾ​ಗಲು ಅರ್ಜಿ ಸಲ್ಲಿ​ಸಿ​ದಾಗ ಅಡ್ಮಿ​ಶನ್‌ ನಕಲಿ ಎಂದು ಬೆಳ​ಕಿಗೆ ಬಂದಿದೆ. ಇವರ ರಕ್ಷ​ಣೆಗೆ ಭಾರತ ಸರ್ಕಾರ ಧಾವಿ​ಸ​ಬೇಕು ಎಂದು ಪಂಜಾಬ್‌ ಎನ್‌​ಆ​ರ್‌ಐ (NRI)ಖಾತೆ ಸಚಿವ ಕುಲ​ದೀಪ್‌ ಸಿಂಗ್‌ ಧಾಲಿ​ವಾಲ್‌ ಆಗ್ರ​ಹಿಸಿದ್ದಾರೆ.

ಇದಕ್ಕೆ ಪ್ರತಿ​ಕ್ರಿ​ಯಿ​ಸಿ​ರುವ ಭಾರ​ತದ ವಿದೇ​ಶಾಂಗ ಸಚಿವ (Foreign Minister) ಎಸ್‌. ಜೈಶಂಕರ್‌ (S Jai shankar), ನಮ್ಮ ಸಚಿ​ವಾ​ಲಯ ಹಾಗೂ ಕೆನಡಾ ದೂತಾ​ವಾ​ಸವು ಈ ವಿಷ​ಯ​ವನ್ನು ಕೆನಡಾ ಸರ್ಕಾ​ರದ ಮುಂದೆ ಇರಿ​ಸ​ಲಿದೆ. ಕೆನಡಾ ಸರ್ಕಾರ (Canada Govt) ವಿದ್ಯಾ​ರ್ಥಿ​ಗ​ಳಿಗೆ ನ್ಯಾಯ ದೊರ​ಕಿ​ಸಿ​ಕೊ​ಡುವ ವಿಶ್ವಾ​ಸ​ವಿ​ದೆ ಎಂದಿ​ದ್ದಾ​ರೆ.

ಪ್ರತಿ ಸಿಗರೇಟ್ ಮೇಲೂ ಎಚ್ಚರಿಕೆಯ ಸಂದೇಶ ಮುದ್ರಿಸಲು ಕೆನಡಾ ಸರ್ಕಾರ ನಿರ್ಧಾರ

ಕೆನ​ಡಾ​ದಲ್ಲಿ ಇಂದಿರಾ ಹತ್ಯೆ ಸಂಭ್ರ​ಮಾ​ಚ​ರ​ಣೆ

ಕೆನ​ಡಾ​ದಲ್ಲಿ ಇತ್ತೀ​ಚೆಗೆ ಸಿಖ್‌ ಪ್ರತ್ಯೇ​ಕ​ತಾ​ವಾದಿ (Sikh separatist) ಖಲಿ​ಸ್ತಾ​ನಿ​ಗಳು ಭಾರ​ತ​ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಸಂಭ್ರ​ಮಾ​ಚ​ರಣೆ ನಡೆ​ಸಿದ ಘಟನೆ ನಡೆ​ದಿದೆ. ಮೆರ​ವ​ಣಿ​ಗೆ​ಯೊಂದ​ರಲ್ಲಿ ಇಂದಿರಾ ಹತ್ಯೆಯ (Indira Gandhi Murder case) ದೃಶ್ಯದ ಸ್ತಬ್ಧ​ಚಿ​ತ್ರ​ವನ್ನು ನಿರ್ಮಿಸಿ ಖಲಿ​ಸ್ತಾ​ನಿ​ಗಳು ಪ್ರದ​ರ್ಶಿ​ಸಿ​ದ್ದಾರೆ. ಇದು ಭಾರತ ಸರ್ಕಾ​ರದ ಕೆಂಗ​ಣ್ಣಿಗೆ ಕಾರ​ಣ​ವಾ​ಗಿದ್ದು, ‘ಇಂಥ ಪ್ರತ್ಯೇ​ಕ​ತಾ​ವಾ​ದಿ​ಗಳು ಹಾಗೂ ಉಗ್ರ​ವಾದಿ ಶಕ್ತಿ​ಗ​ಳಿಗೆ ಕೆನಡಾ ಆಶ್ರಯ ನೀಡು​ತ್ತಿ​ರು​ವುದು ಏಕೆ?’ ಎಂದು ಖಾರ​ವಾಗಿ ಪ್ರಶ್ನಿ​ಸಿ​ದೆ.

BTS Band ಜಿಮಿನ್ ತರ ಕಾಣಲು 12 ಸರ್ಜರಿ ಮಾಡಿಸಿಕೊಂಡ ಕೆನಡಿಯನ್‌ ನಟ ಸಾವು

ಸಾಮಾ​ಜಿಕ ಮಾಧ್ಯ​ಮ​ಗ​ಳ​ಲ್ಲಿವ ವಿಡಿ​ಯೋ​ವೊಂದು ಪ್ರತ್ಯ​ಕ್ಷ​ವಾ​ಗಿದ್ದು, ಕೆನ​ಡಾದ ಬ್ರಾಂಪ್ಟನ್‌ ಎಂಬಲ್ಲಿ ಇತ್ತೀ​ಚೆಗೆ ಖಲಿ​ಸ್ತಾ​ನಿ​ಗಳು 5 ಕಿ.ಮೀ.ನಷ್ಟು ಮೆರ​ವ​ಣಿಗೆ ನಡೆ​ಸಿದ್ದು ಕಂಡು​ಬ​ರು​ತ್ತದೆ. ಅದ​ರಲ್ಲಿ ಅವರು ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧ​ಚಿ​ತ್ರದ ಮೆರ​ವ​ಣಿಗೆ ಮಾಡಿ​ದ್ದಾರೆ. ಸ್ತಬ್ಧಚಿ​ತ್ರ​ದಲ್ಲಿ ಸಿಖ್‌ ಗನ್‌​ಮ್ಯಾನ್‌ ಒಬ್ಬಾತ, ಇಂದಿರಾ ಗಾಂಧಿ ಅವರ ಕಡೆ ಗನ್‌ ಹಿಡಿದು ನಿಂತಿ​ರು​ವುದು ಕಂಡು​ಬ​ರು​ತ್ತದೆ. ಸಿಖ್‌ ಅಂಗ​ರ​ಕ್ಷ​ಕ​ನಿಂದಲೇ ಇಂದಿರಾ ಅವರು ನಿಜ​ಜೀ​ವ​ನ​ದಲ್ಲಿ ಹತ್ಯೆ ಆಗಿದ್ದು ಇಲ್ಲಿ ಗಮ​ನಾ​ರ್ಹ. ಈ ಬಗ್ಗೆ ಕಿಡಿ​ಕಾ​ರಿ​ರುವ ಕಾಂಗ್ರೆಸ್‌ ಪಕ್ಷ, ‘ಇದು ಖಂಡ​ನಾರ್ಹ ನಡ​ವ​ಳಿಕೆ. ಭಾರತ ಸರ್ಕಾ​ರವು ಇದನ್ನು ಕೆನಡಾ ಸರ್ಕಾ​ರದ ಬಳಿ ಪ್ರಸ್ತಾ​ಪಿಸಿ ಪ್ರತಿ​ಭ​ಟನೆ ಸಲ್ಲಿ​ಸ​ಬೇಕು. ಕ್ರಮಕ್ಕೆ ಆಗ್ರ​ಹಿ​ಸ​ಬೇ​ಕು’ ಎಂದಿ​ದೆ.

ಭಾರತ ಆಕ್ರೋ​ಶ:

ಈ ಬಗ್ಗೆ ಗುರು​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಭಾರ​ತದ ವಿದೇ​ಶಾಂಗ ಸಚಿವ ಎಸ್‌. ಜೈಶಂಕರ್‌, ‘ಭಾರತ ವಿರೋಧಿ ಶಕ್ತಿ​ಗ​ಳಿಗೆ ಮಣೆ ಹಾಕುತ್ತಿ​ರುವ ಕೆನಡಾ ಸರ್ಕಾ​ರದ ಈ ನಡೆ ಖಂಡ​ನಾರ್ಹ. ದ್ವಿಪ​ಕ್ಷೀ​ಯ ಸಂಬಂಧದ ದೃಷ್ಟಿ​ಯಿಂದ ಈ ವಿದ್ಯ​ಮಾನ ಒಳ್ಳೆ​ಯ​ದಲ್ಲ. ಕೆನ​ಡಾಗೂ ಒಳ್ಳೆ​ಯ​ದ​ಲ್ಲ. ಆದರೆ ಕೆನ​ಡಾ​ದಲ್ಲಿ ಸತ​ತ​ವಾಗಿ ಇಂಥ ಘಟ​ನೆ​ಗಳು ಪುನ​ರಾ​ವ​ರ್ತನೆ ಆಗು​ತ್ತಿ​ರುವ ಕಾರ​ಣ, ಇದರ ಹಿಂದೆ ಬೇರೆ ವಿಚಾ​ರವೇ ಇದೆ ಎಂದು ನನಗೆ ಎನ್ನಿ​ಸು​ತ್ತದೆ. ಅದು ಮತ ಬ್ಯಾಂಕ್‌ ರಾಜ​ಕೀಯ ಇರ​ಬ​ಹು​ದು ಎಂದು ಆಕ್ರೋ​ಶ ವ್ಯಕ್ತ​ಪ​ಡಿ​ಸಿ​ದ​ರು.

ಕೆನಡಾದಲ್ಲಿ ಮತ್ತೆ ದೇಗುಲದ ಮೇಲೆ ದಾಳಿ: ಗೋಡೆಯಲ್ಲಿ ಮೋದಿ & ಭಾರತ ವಿರೋಧಿ ಬರಹ

ಕೆನಡಾ ದೂತಾವಾಸ ಖಂಡ​ನೆ:

ಭಾರ​ತ​ದ​ಲ್ಲಿನ ಕೆನಡಾ ರಾಯ​ಭಾರಿ ಕೆಮೆ​ರಾನ್‌ ಮೆಕಾರ್ತಿ ಟ್ವೀಟ್‌ ಮಾಡಿ, ‘ಕೆ​ನ​ಡಾ​ದಲ್ಲಿ ದ್ವೇಷದ ವೈಭ​ವೀ​ಕ​ರ​ಣಕ್ಕೆ ಅವ​ಕಾ​ಶ​ವಿಲ್ಲ. ಆದರೆ ಇಂದಿರಾ ಹತ್ಯೆಯ ಸಂಭ್ರ​ಮಾ​ಚ​ರಣೆ ವರದಿ ನೋಡಿ ಆಘಾ​ತ​ವಾ​ಗಿದೆ. ಇದು ಖಂಡ​ನಾ​ರ್ಹ’ ಎಂದಿ​ದ್ದಾ​ರೆ.

Follow Us:
Download App:
  • android
  • ios