Asianet Suvarna News Asianet Suvarna News

ಕೆನಡಾದಲ್ಲಿ ಮತ್ತೆ ದೇಗುಲದ ಮೇಲೆ ದಾಳಿ: ಗೋಡೆಯಲ್ಲಿ ಮೋದಿ & ಭಾರತ ವಿರೋಧಿ ಬರಹ

ಕೆನಡಾದಲ್ಲಿ ಹಿಂದೂ ದೇಗುಲಗಳ ಮೇಲಿನ ದಾಳಿ ಮುಂದುವರೆದಿದ್ದು, ಇದೀಗ ವಿಂಡ್ಸರ್‌ ನಗರದಲ್ಲಿನ ಸ್ವಾಮಿನಾರಾಯಣ ದೇಗುಲದ ಮೇಲೆ ದುಷ್ಕೃರ್ಮಿಗಳ ತಂಡ ದಾಳಿ ನಡೆಸಿದೆ. ದಾಳಿಯಲ್ಲಿ ದೇಗುಲಕ್ಕೆ ಹಾನಿಯಾಗಿದೆ.

Hindu Temple attacked in Canada anti India and anti modi slogans writing are found in wall akb
Author
First Published Apr 7, 2023, 10:01 AM IST

ವಿಂಡ್ಸರ್‌: ಕೆನಡಾದಲ್ಲಿ ಹಿಂದೂ ದೇಗುಲಗಳ ಮೇಲಿನ ದಾಳಿ ಮುಂದುವರೆದಿದ್ದು, ಇದೀಗ ವಿಂಡ್ಸರ್‌ ನಗರದಲ್ಲಿನ ಸ್ವಾಮಿನಾರಾಯಣ ದೇಗುಲದ ಮೇಲೆ ದುಷ್ಕೃರ್ಮಿಗಳ ತಂಡ ದಾಳಿ ನಡೆಸಿದೆ. ದಾಳಿಯಲ್ಲಿ ದೇಗುಲಕ್ಕೆ ಹಾನಿಯಾಗಿದೆ. ಜೊತೆಗೆ ದೇಗುಲದ ಗೋಡೆಗಳ ಮೇಲೆ ಭಾರತ ವಿರೋಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಂಶಗಳನ್ನು ಬರೆಯಲಾಗಿದೆ. ಮಧ್ಯರಾತ್ರಿ 12 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬ ಗೋಡೆಗೆ ಬಣ್ಣ ಬಳಿಯುತ್ತಿರುವುದು ಹಾಗೂ ಮತ್ತೊಬ್ಬ ವ್ಯಕ್ತಿ ರಸ್ತೆಯಲ್ಲಿ ನಿಂತು ನೋಡುತ್ತಿರುವ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿದೆ. ಈ ವಿಧ್ವಂಸಕ ಕೃತ್ಯವನ್ನು ದೇವಾಲಯದ ಆಡಳಿತ ಮಂಡಳಿ ಖಂಡಿಸಿದೆ. ಘಟನೆ ಹಿಂದೆ ಪ್ರತ್ಯೇಕತಾವಾದಿ ಖಲಿಸ್ತಾನಿಗಳ ಕೈವಾಡದ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲ ದಿನಗಳಿಂದ ಆಸ್ಪ್ರೇಲಿಯಾ, ಕೆನಡಾ, ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳಲ್ಲಿ ಖಲಿಸ್ತಾನಿಗಳು ಇದೇ ರೀತಿಯ ದುಷ್ಕೃತ್ಯ ನಡೆಸಿದ್ದಾರೆ.

ಲಂಡನ್‌ನಲ್ಲಿ ಮತ್ತೆ ಖಲಿಸ್ತಾನಿ ಕಿತಾಪತಿ: ಕಚೇರಿ ಮೇಲೆ ನೀರಿನ ಬಾಟಲ್‌ ಎಸೆದು ಪುಂಡಾಟ

ಬ್ರಿಟನ್‌ನಲ್ಲಿ ಖಲಿಸ್ತಾನಿ ಹೋರಾಟಗಾರರ ಪುಂಡಾಟ ಮುಂದುವರೆದಿದೆ. ಲಂಡನ್‌ನ ಭಾರತೀಯ ರಾಯಭಾರ ಕಚೇರಿ ಎದುರು 2000ಕ್ಕೂ ಹೆಚ್ಚು ಖಲಿಸ್ತಾನಿಗಳು  ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೇ ನೀರಿನ ಬಾಟೆಲ್‌ಗಳನ್ನು ಕಚೇರಿಯತ್ತ ಎಸೆದಿದ್ದಾರೆ. ಬ್ರಿಟನ್‌ನ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿಭಟನಾಕಾರರು ರಾಯಭಾರಿ ಕಚೇರಿ ಎದುರು ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಪ್ರತಿಭಟನೆಯ ಕುರಿತಾಗಿ ಮೊದಲೇ ಮಾಹಿತಿ ಪಡೆದುಕೊಂಡಿದ್ದ ಭದ್ರತಾ ಪಡೆಗಳು ರಾಯಭಾರ ಕಚೇರಿಗೆ ಭದ್ರತೆ ಒದಗಿಸಿದ್ದಾರೆ. ಇದಕ್ಕೂ ಮೊದಲು ಭಾನುವಾರ ದಾಳಿ ನಡೆಸಿದ್ದ ಖಲಿಸ್ತಾನಿ ಬೆಂಬಲಿಗರು (Khalistani supporters) ಭಾರತದ ಧ್ವಜವನ್ನು (Indian flag) ಕೆಳಗಿಳಿಸಿ ಪುಂಡಾಟ ಮಾಡಿದ್ದರು.

ಸೇಡಿಗೆ ಸೇಡು: ದೆಹಲಿಯ ಯುಕೆ ಹೈಕಮೀಷನ್‌ಗೆ ವಿಶೇಷ ಭದ್ರತೆ ರದ್ದು, ಬ್ಯಾರಿಕೇಡೂ ಇಲ್ಲ..!

ಭಾರತದ ಬಿಸಿಗೆ ಬೆಚ್ಚಿದ ಬ್ರಿಟನ್‌

ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ಕುರಿತಾಗಿ ಭಾರತ ಪ್ರತಿಭಟನೆ ವ್ಯಕ್ತಪಡಿಸಿದ ಬೆನ್ನಲ್ಲೇ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಕಚೇರಿಗೆ 2 ಸ್ಥರದ ಭದ್ರತೆಯನ್ನು ಒದಗಿಸಲಾಗಿದೆ. ಖಲಿಸ್ತಾನಿ ಬೆಂಬಲಿಗರು ಬುಧವಾರ ಮತ್ತೊಮ್ಮೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಬ್ರಿಟನ್‌ ರಾಯಭಾರಿ ಕಚೇರಿ (British Embassy) ಎದುರು ಅಳವಡಿಸಲಾಗಿದ್ದ ತಡೆಗೋಡೆಗಳನ್ನು ಭಾರತ ತೆರವುಗೊಳಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಬ್ರಿಟನ್‌ ಆಡಳಿತ ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಭದ್ರತೆಯನ್ನು ಹೆಚ್ಚು ಮಾಡಿದೆ. ಭದ್ರತಾ ಪಡೆಗಳನ್ನು ನೇಮಕ ಮಾಡಲಾಗಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಕಚೇರಿಗೆ 3 ಸ್ಥರದ ಭದ್ರತೆಯನ್ನು ಒದಗಿಸಲಾಗಿದೆ ಎಂದು ಬ್ರಿಟನ್‌ ಆಡಳಿತ (British administration) ಹೇಳಿದೆ. ಅಲ್ಲದೇ ಭಾರತದ ರಾಯಭಾರ ಕಚೇರಿ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಕ್ಲೆವರ್ಲೀ (British Foreign Secretary Cleverley), ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Follow Us:
Download App:
  • android
  • ios