ದಕ್ಷಿಣ ಕೊರಿಯಾದ ಖ್ಯಾತ ಬಿಟಿಎಸ್‌ ಬ್ಯಾಂಡ್‌ನ ಸದಸ್ಯ ಜಿಮಿನ್ ರೀತಿ ಕಾಣಿಸಬೇಕು ಎಂದು ಬಯಸಿದ್ದ ಯುವಕ ಈಗ ಸಾವಿನ ಮನೆ ಸೇರಿದ್ದಾನೆ.  ಕೆನಡಿಯನ್ ನಟ 22 ವರ್ಷದ ಸೇಂಟ್ ವಾನ್ ಕೊಲುಸಿ ಮೃತಪಟ್ಟ ಯುವಕ.  

ದಕ್ಷಿಣ ಕೊರಿಯಾದ ಖ್ಯಾತ ಬಿಟಿಎಸ್‌ ಬ್ಯಾಂಡ್‌ನ ಸದಸ್ಯ ಜಿಮಿನ್ ರೀತಿ ಕಾಣಿಸಬೇಕು ಎಂದು ಬಯಸಿದ್ದ ಯುವಕ ಈಗ ಸಾವಿನ ಮನೆ ಸೇರಿದ್ದಾನೆ. ಕೆನಡಿಯನ್ ನಟ 22 ವರ್ಷದ ಸೇಂಟ್ ವಾನ್ ಕೊಲುಸಿ ಮೃತಪಟ್ಟ ಯುವಕ. ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ಈತ ಭಾನುವಾರ ಮೃತಪಟ್ಟಿದ್ದು, ಈತನ ಸಾವಿಗೆ ಪ್ಲಾಸ್ಟಿಕ್ ಸರ್ಜರಿಯೇ ಕಾರಣ ಎಂದು ತಿಳಿದು ಬಂದಿದೆ. ಕೆಲವು ತಿಂಗಳ ಹಿಂದೆ ಈತ 12 ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದು ಇದಾದ ನಂತರ ಆತನ ಆರೋಗ್ಯದಲ್ಲಿ ಏರುಪೇರಾಗಿತ್ತು. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. 

ಈ ಕೆನಡಿಯನ್ ನಟನ ಪ್ರಚಾರಕ ಎರಿಕ್ ಬ್ಲೇಕ್ (Eric Blake), ಈ ಬಗ್ಗೆ ಡೈಲಿಮೇಲ್‌ಗೆ ಪ್ರತಿಕ್ರಿಯಿಸಿದ್ದು, ಮೃತ ಸೇಂಟ್ ವಾನ್ ಕೊಲುಸಿ ಒಟ್ಟು 12 ಪ್ಲಾಸ್ಟಿಕ್ ಸರ್ಜರಿಗಾಗಿ 220,000 ಡಾಲರ್ ಅಂದರೆ 1,80,22,180 (ಭಾರತೀಯ ರೂಪಾಯಿ) ವೆಚ್ಚ ಮಾಡಿದ್ದ. ಸರ್ಜರಿಯ ನಂತರ ಅಮೆರಿಕದಲ್ಲಿ ಪ್ರಸಾರದಲ್ಲಿರುವ ಕೆ ಪಾಪ್ ಸ್ಟಾರ್ ಸೀರಿಸ್‌ನಲ್ಲಿ ನಟಿಸಲು ಆತ ಬಯಸಿದ್ದ. ಹಾಗೆಯೇ ಕಳೆದ ನವಂಬರ್‌ನಲ್ಲಿ ಈತ ಮಾಡಿಸಿಕೊಂಡಿದ್ದ ದವಡೆಯ ಕಸಿಯನ್ನು ತೆಗೆದು ಹಾಕಲು ಆತ ಮತ್ತೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿದ್ದ. ಆದರೆ ಶಸ್ತ್ರಚಿಕಿತ್ಸೆಯ ನಂತರ ಆತನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಶಸ್ತ್ರಚಿಕಿತ್ಸೆ ಅಪಾಯಕಾರಿ ಎಂಬುದು ಆತನಿಗೆ ತಿಳಿದಿದ್ದರು ಕೂಡ ಆತ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಆದರೆ ಇದಾಗಿ ಗಂಟೆಗಳ ನಂತರ ಸೋಂಕಿಗೊಳಗಾಗಿ ಆತ ಮೃತಪಟ್ಟಿದ್ದಾನೆ ಎಂದು ಬ್ಲೇಕ್ ಹೇಳಿದ್ದಾರೆ. 

ಖ್ಯಾತ ನಟಿಯಂತೆ ಕಾಣಲು 4 ಕೋಟಿ ಖರ್ಚು, 40 ಪ್ಲಾಸ್ಟಿಕ್​ ಸರ್ಜರಿ!

ದಕ್ಷಿಣ ಕೊರಿಯಾದ (South Korea) ಮ್ಯೂಸಿಕ್ ಇಂಡಸ್ಟ್ರಿ ಸೇರಲು 2019ರಲ್ಲಿ ಸೇಂಟ್ ವಾನ್ ಕೊಲುಸಿ ಕೆನಡಾದಿಂದ ದಕ್ಷಿಣ ಕೊರಿಯಾಗೆ ತೆರಳಿದ್ದ. ಅಲ್ಲದೇ ಅಲ್ಲಿನ ಮೂರು ಅತ್ಯಂತ ದೊಡ್ಡ ಎಂಟರ್‌ಟೈನ್‌ಮಂಟ್‌ ಸಂಸ್ಥೆಗಳಲ್ಲಿ ಒಂದರಲ್ಲಿ ಟ್ರೈನಿಯಾಗಿ ಕೆಲಸಕ್ಕೆ ಸೇರಿದ್ದ ಎಂದು ಬ್ಲೇಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದೊಂದು ದುರಂತ ಹಾಗೂ ದುರಾದೃಷ್ಟಕರ ಘಟನೆ. ಆತ ಮಾರ್ಚ್‌ 2022ರಲ್ಲಿ ನಟನಾಗಿ ಕೆಲಸ ಮಾಡಲು ಶುರು ಮಾಡಿದ್ದ. ಆದರೆ ಆತನಿಗೆ ಆತನ ರೂಪದ ಬಗ್ಗೆ ಕೀಳರಿಮೆ ಇತ್ತು. ತುಂಬಾ ಅಗಲವಾದ ದವಡೆ ಮತ್ತು ಗಲ್ಲವನ್ನು ಹೊಂದಿದ್ದ ಆತ ಅದರ ಆಕಾರವನ್ನು ಇಷ್ಟಪಟ್ಟಿರಲಿಲ್ಲ. ಆತ ಏಷ್ಯನ್ನರಂತೆ ವಿ ಆಕಾರದ ಮುಖವನ್ನು ಬಯಸಿದ್ದ. ಹೀಗಾಗಿ ಆತ ಕಳೆದ ವರ್ಷ ಮಹತ್ವದ ದವಡೆ ಸರ್ಜರಿಗೆ ಒಳಗಾಗಿದ್ದ. ಆತನಿಗೆ ಅದರ ಅಡ್ಡಪರಿಣಾಮಗಳ ಬಗ್ಗೆ ತಿಳಿದಿತ್ತು. 

ಈತ ದಕ್ಷಿಣ ಕೊರಿಯಾದಲ್ಲಿ (South Korea) ಆತ ಬಯಸಿದ್ದ ನಟನಾ ವೃತ್ತಿ ಆತನಿಗೆ ಸಿಕ್ಕಿರಲಿಲ್ಲ. ಆತನ ರೂಪದ ಕಾರಣಕ್ಕೆ ಆತ ತಾರತಮ್ಯಕ್ಕೆ ಒಳಗಾಗಿದ್ದ, ಇದರಿಂದ ತೀವ್ರವಾಗಿ ಒತ್ತಡಕ್ಕೊಳಗಾಗಿದ್ದ ಆತ ಜೀವಕ್ಕೆ ಅಪಾಯ ತರುವ ಸರ್ಜರಿ ಮಾಡಿಸಿಕೊಂಡಿದ್ದ. ಈತ ಕೊರಿಯನ್ ಡ್ರಾಮಾ (Korean drama series) ಪ್ರಿಟಿ ಲೈಸ್‌ನ (Pretty Lies) 8 ಎಪಿಸೋಡ್‌ಗಳಲ್ಲಿ ಭಾಗವಹಿಸಿದ್ದ. ಈ ಸಿರೀಸ್‌ನಲ್ಲಿ ಪ್ರಮುಖ ಪಾತ್ರವಾದ ಅಂತಾರಾಷ್ಟ್ರೀಯ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದ. ಈ ಪ್ರದರ್ಶನದ ಕುರಿತು ಹೆಚ್ಚಿನ ವಿವರಗಳು ಪ್ರಸ್ತುತ ರಹಸ್ಯವಾಗಿದ್ದು, ಇದು ಅಕ್ಟೋಬರ್‌ನಲ್ಲಿ ಪ್ರಮುಖ US ಸ್ಟ್ರೀಮಿಂಗ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುವ ನಿರೀಕ್ಷೆಯಿದೆ.

ನಟಿ ಚೇತನಾ ರಾಜ್ ನಿಧನ: ಬಣ್ಣದ ಜಗತ್ತಿನ ಕಹಿ ಸತ್ಯ ಬಿಚ್ಚಿಟ್ಟ ಮೋಹಕ ತಾರೆ ರಮ್ಯಾ!

ಸಿನಿಮಾ ಅಥವಾ ಮನೋರಂಜನಾ ವೃತ್ತಿಯಲ್ಲಿ ಇರುವವರು ಹೀಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸಾವನ್ನಪ್ಪಿರುವುದು ಇದೇ ಮೊದಲೇನಲ್ಲ, ಸಿನಿಮಾ ರಂಗದಲ್ಲಿ ಸೌಂದರ್ಯಕ್ಕೆ ಮೊದಲ ಆದ್ಯತೆಯಾಗಿರುವುದರಿಂದ ಈ ರಂಗದಲ್ಲಿ ಹೆಸರು ಮಾಡಬೇಕೆಂದು ಬಯಸಿದ ಅನೇಕರು ಸರ್ಜರಿ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಇದ್ದ ಸೌಂದರ್ಯವನ್ನು ಕಳೆದುಕೊಂಡು ವಿರೂಪಗೊಂಡಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಕನ್ನಡದ ಕಿರುತೆರೆ ನಟಿ ಮೇಘನಾ ರಾಜ್ ಸಿನಿಮಾ ಜಗತ್ತಿನಲ್ಲಿ ಮಿಂಚಬೇಕು ಎಂದು ಬೊಜ್ಜು ಕರಗಿಸೋ ಟ್ರೀಟ್ಮೆಂಟ್ ಪಡೆದಿದ್ದರು. ಆದರೆ ಇದು ಅಡ್ಡ ಪರಿಣಾಮ ಬೀರಿದ್ದು, 21ರ ಹರೆಯದಲ್ಲೇ ಮೇಘನಾ ರಾಜ್ ಪ್ರಾಣ ಕಳೆದುಕೊಂಡಿದ್ದರು.