Asianet Suvarna News Asianet Suvarna News

18 ಚಿನ್ನದ ಪದಕ ಗೆದ್ದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ: ವಿಟಿಯು ಇತಿಹಾಸದಲ್ಲೇ ಮೊದಲು!

ಚಿನ್ನದ ಬೇಟೆಯಾಡಿದ ಚಿನ್ನದ ಹುಡುಗ ಕಾಲೇಜಿನ ಉಪನ್ಯಾಸಕರ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾಗಿದ್ದ ಮುರಳಿ ಕಾಲೇಜಿಗೆ ಕೀರ್ತಿ ತಂದಿದ್ದಾನೆ.ಹೌದು, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಯಾಗಿದ್ದ ಮುರಳಿ 2022 ರಲ್ಲಿ ಇಂಜಿನಿಯರಿಂಗ್ ಕೋರ್ಸ್‌ ಮುಗಿಸಿ ಪದವಿ ಪಡೆದುಕೊಂಡಿದ್ದಾನೆ

18 gold medal winning engineering student muruli koalar muneshwar block rav
Author
First Published Feb 28, 2023, 12:42 AM IST

ಬೆಂಗಳೂರು (ಫೆ.27): ಚಿನ್ನದ ಬೇಟೆಯಾಡಿದ ಚಿನ್ನದ ಹುಡುಗ ಕಾಲೇಜಿನ ಉಪನ್ಯಾಸಕರ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾಗಿದ್ದ ಮುರಳಿ ಕಾಲೇಜಿಗೆ ಕೀರ್ತಿ ತಂದಿದ್ದಾನೆ.ಹೌದು, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಯಾಗಿದ್ದ ಮುರಳಿ 2022 ರಲ್ಲಿ ಇಂಜಿನಿಯರಿಂಗ್ ಕೋರ್ಸ್‌ ಮುಗಿಸಿ ಪದವಿ ಪಡೆದುಕೊಂಡಿದ್ದಾನೆ.

ಸಿವಿಲ್ ಇಂಜಿನಿಯರಿಂಗ್(Civil Engineering) ವಿಭಾಗದಲ್ಲಿ ಫಸ್ಟ್ ರ್ಯಾಂಕ್(First rank) ಪಡೆಯುವ ಮೂಲಕ ಬಿಐಟಿ ಕಾಲೇಜಿ(BIT Collage)ಗೆ ಕೀರ್ತಿ ತಂದಿದ್ದಾನೆ..ಸಿವಿಲ್ ಇಂಜಿನಿಯರಿಂಗ್ ‌ನ ಎಲ್ಲಾ ವಿಷಯಗಳಲ್ಲೂ ಅತಿ ಹೆಚ್ಚು ಅಂಕ ಪಡೆಯುವ ಮೂಲಕ‌ 17 ಗೋಲ್ಡ್ ಮೆಡಲ್ ಹಾಗೂ ಫಸ್ಟ್ ರ್ಯಾಂಕ್ ಸೇರಿ ಒಟ್ಟು 18 ಪದಕಗಳನ್ನು ತನ್ನ ಮುಡಿಗೇರಿಸಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಮೊದಲಿಗ ಎಂಬ ಕೀರ್ತಿಗೆ ಮುರಳಿ ಪಾತ್ರನಾಗಿದ್ದಾನೆ.

Karnataka 5th and 8th Public Exam : 5ನೇ ಮತ್ತು 8ನೇ ತರಗತಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಮೂಲತಃ ಕೋಲಾರ(Kolar)ದ ಮುನೇಶ್ವರ ಬ್ಲಾಕ್ ನಿವಾಸಿಯಾಗಿರುವ ಮುರಳಿ(Muruli Gold Medalist), ಬೆಂಗಳೂರಿನಲ್ಲಿ ತಂದೆ ತಾಯಿ ಜೊತೆ‌ ನೆಲೆಸಿದ್ದಾನೆ.

ಕಾಲೇಜಿನಲ್ಲಿ ಉಪನ್ಯಾಸಕರು ಮಾಡುತ್ತಿದ್ದ ಪಾಠ ಹಾಗೂ ‌ಮನೆಯಲ್ಲಿ ಸತತ ಓದಿನಿಂದಾಗಿ ಈ ಸಾಧನೆ ಮಾಡಿದ್ದೇನೆ ಎಂದು ಮುರಳಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ

ಇನ್ನೂ ಇಂಜಿನಿಯರಿಂಗ್ ಮುಗಿಸಿ ಎಂಟೆಕ್ ಸ್ಟ್ರಕ್ಚರಲ್ ಇಂಜಿನಿಯರಿಂಗ್ ‌ಕೋರ್ಸ್(M.Tech Structural Engineering Course) ಗೆ ಸೇರಿಕೊಂಡಿರುವ ಮುರಳಿ ಪಿಹೆಚ್‌ಡಿ ‌ಮಾಡುವ ಕನಸು ಕಂಡಿದ್ದಾನೆ.

 

ಕರ್ನಾಟಕದ ಕಾಲೇಜನ್ನು ಆಯ್ಕೆ ಮಾಡದ ಸಿಇಟಿ ಟಾಪರ್ಸ್‌!

ಬಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಅಶ್ವಥ್ ಎಂ.ಯು ಅವರು ಮಾತನಾಡಿ ಮುರಳಿ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.ನಮ್ಮ ಕಾಲೇಜಿನ ವಿದ್ಯಾರ್ಥಿ ಇಂತ ಸಾಧನೆ ಮಾಡಿರೋದು‌ ನಮಗೆಲ್ಲಾ ಖುಷಿ ತಂದಿದೆ.ಅವನ ಪರಿಶ್ರಮ ಹಾಗೂ ಅವನ ಓದಿನಲ್ಲಿ ಆಸಕ್ತಿಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ..ವಿಟಿಯು ಇತಿಹಾಸದಲ್ಲೇ ಒಬ್ಬ ವಿದ್ಯಾರ್ಥಿ 18 ಗೋಲ್ಡ್ ‌ಮೆಡಲ್ ಪಡೆದುಕೊಂಡಿರೋದು ಇದೇ ಮೊದಲು..ಹೀಗಾಗಿ ಅವನ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಎಂದು ಬಿಐಟಿ ಪ್ರಾಂಶುಪಾಲರಾದ ಡಾ.ಅಶ್ವಥ್ ಎಂಯು ಅವರು ಹಾರೈಸಿದ್ದಾರೆ.

Follow Us:
Download App:
  • android
  • ios