Asianet Suvarna News Asianet Suvarna News

ಈ ಟ್ರಾಕ್ಟರ್‌ಗೆ ಕ್ಲಚ್ಚೂ ಇಲ್ಲ, ಗಿಯರ್ ಇಲ್ಲ: ದೇಶದ ಮೊದಲ ಸಂಪೂರ್ಣ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್!

ಟ್ರಾಕ್ಟರ್ ಉತ್ಪಾದಕ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಪ್ರಾಕ್ಸೆಕ್ಟೋ ವಿಶಿಷ್ಟವಾದ ಟ್ರಾಕ್ಟರ್ ಅನ್ನು ಪರಿಚಯಿಸಿದೆ. ಈ ಟ್ರಾಕ್ಟರ್ ಸಂಪೂರ್ಣವಾಗಿ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಎನಿಸಿಕೊಂಡಿದೆ. ಈ ಟ್ರಾಕ್ಟರ್‌ಗೆ ಕ್ಲಚ್ ಆಗಲೀ, ಗಿಯರ್‌ಗಳಾಗಲೀ ಇಲ್ಲ. ಇದು ಸಂಪೂರ್ಣವಾಗಿ ಆಟೋಮ್ಯಾಟಿಕ್ ಆಗಿದ್ದು, ಹೊಲದಲ್ಲಿ ರೈತರಿಗೆ ನೆರವಾಗುವಂಥ ಹಲವು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ.

Proxecto company has launched India's first fully automatic hybrid tractor
Author
Bengaluru, First Published May 14, 2021, 4:11 PM IST

ಭಾರತದ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಈ ಟ್ರಾಕ್ಟರ್‌ಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ. ರೈತರ ವೆಚ್ಚವನ್ನು ತಗ್ಗಿಸಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೆಲಸವನ್ನು ಮಾಡಲು ಈ ಟ್ರಾಕ್ಟರ್‌ಗಳು ಬೇಕೇ ಬೇಕು. ಹಾಗೆಯೇ, ಸಾಂಪ್ರದಾಯಿಕ ಟ್ರಾಕ್ಟರ್‌ಗಳ ಜಾಗದಲ್ಲೀಗ ಅತ್ಯಾಧುನಿಕ ಟ್ರಾಕ್ಟರ್‌ಗಳು ಹೆಚ್ಚು ಗಮನ ಸೆಳೆಯುತ್ತಿವೆ.

ಇತ್ತೀಚಿನ ವರ್ಷಗಳಲ್ಲಿ ಹಲವು ಕಂಪನಿಗಳು ರೈತರಿಗೆ ಹೆಚ್ಚು ನೆರವು ನೀಡುವ, ಪವರ್‌ಫುಲ್ ಮತ್ತು ಕಡಿಮೆ ವೆಚ್ಚಕ್ಕೆ ಕಾರಣವಾಗುವ ತಂತ್ರಜ್ಞಾನಾಧರಿತ ಟ್ರಾಕ್ಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಈ ಸಾಲಿನಲ್ಲಿ ಭಾರತದ ಪ್ರಮುಖ ಟ್ರಾಕ್ಟರ್ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಪ್ರಾಕ್ಸೆಕ್ಟೋ ದೇಶದ ಮೊದಲ ಸಂಪೂರ್ಣ ಆಟೋಮ್ಯಾಟಿಕ್ ಹೈಬ್ರಿಡ್ ಟ್ರಾಕ್ಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಶೀಘ್ರವೇ ಹೊಸ 2021 ಮಹಿಂದ್ರಾ ಬೊಲೆರೋ ಬಿಡುಗಡೆ ಸಾಧ್ಯತೆ

ಬ್ಯಾಟರಿ ಪ್ಯಾಕ್‌ಗಳಿಲ್ಲದ ಭಾರತದ ಮೊದಲ ಸಂಪೂರ್ಣ ಸ್ವಯಂಚಾಲಿತ ಹೈಬ್ರಿಡ್ ಟ್ರ್ಯಾಕ್ಟರ್ ಅನ್ನು ಬೇಸ್ ಎಚ್‌ಎವಿ ಎಸ್ 1 50 ಎಚ್‌ಪಿ ಮಾಡೆಲ್ 9.49 ಲಕ್ಷ ರೂ.ಗೆ ಪ್ರಾಕ್ಸೆಕ್ಟೊ ಬಿಡುಗಡೆ ಮಾಡಿದೆ ಮತ್ತು ಉನ್ನತ ಶ್ರೇಣಿಯ ಎಚ್‌ಎವಿ ಎಸ್ 1 + 50 ಎಚ್‌ಪಿ ಜೊತೆ 11.99 ಲಕ್ಷ ರೂ. (ಎರಡೂ ಎಕ್ಸ್ ಶೋರೂಮ್ ಬೆಲೆ) ಎಸಿ ಕ್ಯಾಬಿನ್ ವೆರಿಯೆಂಟ್ ಟ್ರಾಕ್ಟರ್ ಕೂಡ ಇರಲಿದೆ.

ನವೆಂಬರ್ 2019ರಲ್ಲಿ ಜರ್ಮನಿಯಲ್ಲಿ ನಡೆದ ವಿಶ್ವದ ಅತಿದೊಡ್ಡ ಅಗ್ರಿಟೆಕ್ನಿಕಾ ಈವೆಂಟ್‌ನಲ್ಲಿ ಎಚ್‌ಎವಿ ಟ್ರಾಕ್ಟರ್ ಅನ್ನು ಮೊದಲು ಪ್ರದರ್ಶಿಸಲಾಯಿತು. ಈ ವ್ಯಾಪ್ತಿಯ ಟ್ರಾಕ್ಟರ್‌ಗಳಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಅನುಕೂಲಕರ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಎಚ್ಎವಿ ಟ್ರಾಕ್ಟರ್ ಸೀರೀಸ್‌ನಲ್ಲಿ ಎರಡು ಮಾಡೆಲ್‌ಗಳಿವೆ. 50 ಎಸ್1 ಮಾಡೆಲ್ ಡಿಸೇಲ್ ಹೈಬ್ರಿಡ್ ಟ್ರಾಕ್ಟರ್ ಎನಿಸಿಕೊಂಡರೆ ಮತ್ತೊಂದು 50 ಎಸ್2 ಸಿಎನ್‌ಜಿ ಹೈಬ್ರಿಡ್ ಟ್ರಾಕ್ಟರ್ ಆಗಿದೆ. ಕಂಪನಿ ಹೇಳಿಕೊಂಡಿರುವ ಪ್ರಕಾರ, ಎಸ್ 2 ಮಾಡೆಲ್ ಟ್ರಾಕ್ಟರ್‌ಗೆ ಹೋಲಿಸಿದರೆ ಎಸ್ 1 ಮಾಡೆಲ್ ಟ್ರಾಕ್ಟರ್ ಶೇ.28ರಷ್ಟು ಇಂಧನವನ್ನು ಉಳಿತಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಏಪ್ರಿಲ್‌ನಲ್ಲಿ ಗರಿಷ್ಠ ದ್ವಿಚಕ್ರವಾಹನ ಮಾರಿದ ಸುಜುಕಿ

ಈ ಟ್ರಾಕ್ಟರ್‌ನ ಎಂಜಿನ್‌ ಮುಖ್ಯ ಕೆಲಸ ಎಂದರೆ ಎಲೆಕ್ಟ್ರಾನಿಕ್ ಮೋಟಾರ್ಸ್ ಮತ್ತು ಇತರ ಭಾಗಗಳಿಗೆ ವಿದ್ಯುತ್  ಪೂರೈಸುವುದು. ಇದು ಸ್ವಯಂ ಶಕ್ತಿ ಉತ್ಪಾದಿಸುವ ತಂತ್ರವಾಗಿದೆ. ಈ ಟ್ರಾಕ್ಟರ್ ಆಲ್ ವ್ಹೀಲ್ ಎಲೆಕ್ಟ್ರಿಕ್ ಡ್ರೈವ್ ಟೆಕ್ನಾಲಜಿ(ಎಡಬ್ಲ್ಯೂಇಡಿ)ಯನ್ನು ಬಳಸಿಕೊಂಡು ಸಂಪೂರ್ಣವಾಗಿ ಆಟೋಮ್ಯಾಟಿಕ್ ಆಗಿದೆ. ಈ ಟ್ರಾಕ್ಟರ್‌ಗೆ ಕ್ಲಚ್ ಆಗಲಿ, ಗಿಯರ್‌ಗಳಾಗಲಿ. ಮೂರು ಸಿಂಪಲ್ ಡ್ರೈವಿಂಗ್ ಮೋಡ್‌ಗಳಿವೆ. ಅಂದರೆ, ಫಾರ್ವರ್ಡಿಂಗ್, ನ್ಯೂಟ್ರಲ್ ಮತ್ತು ರಿವರ್ಸ್ ಮೋಡ್‌ಗಳು. ಅಂದರೆ, ಚಾಲಕ ಫಾರ್ವರ್ಡಿಂಗ್ ಮೋಡ್‌ ಹಾಕಿದರೆ ಟ್ರಾಕ್ಟರ್ ಮುಂದೆ ಚಲಿಸಲಾರಂಭಿಸುತ್ತದೆ. ನ್ಯೂಟ್ರಲ್ ಮೋಡ್‌ಗೆ ತಂದರೆ ಟ್ರಾಕ್ಟರ್ ಚಾಲನೆ ಕಳೆದುಕೊಳ್ಳುತ್ತದೆ ಮತ್ತು ರಿವರ್ಸ್ ಮೋಡ್‌ಗೆ ತಂದೆ ಟ್ರಾಕ್ಟರ್ ಹಿಂಬರ್ಕಿ ಹೋಗುತ್ತದೆ. ಇಲ್ಲಿ ಯಾವುದೇ ರೀತಿಯ ಗೇರ್‌ಗಳು ಇರುವುದು ಇಲ್ಲ. ಹಾಗಾಗಿ ಇದರ ಚಾಲನೆಯೂ ಸುಲಭವಾಗಲಿದೆ.

Proxecto company has launched India's first fully automatic hybrid tractor

ಮ್ಯಾಕ್ಸ್ ಕವರ್ ಸ್ಟೀರಿಂಗ್(ಎಂಸಿಎಸ್) ಎಂದ ವಿಶಿಷ್ಟ ಮತ್ತು ವಿಶೇಷ ಸ್ಟೀರಿಂಗ್ ಸಿಸ್ಟಮ್ ಅನ್ನು ಈ ಟ್ರಾಕ್ಟರ್‌ಗೆ ಅಳವಡಿಸಲಾಗಿದ್ದು, ಇದು 2.7 ಮೀಟರ್‌ ವ್ಯಾಪ್ತಿಯೊಳಗೆ ತಿರುಗುವ(ಟರ್ನಿಂಗ್ ರೇಡಿಯಸ್) ಸಾಮರ್ಥ್ಯವನ್ನು ಹೊಂದಿದೆ.  ಎತ್ತರ ಹೊಂದಾಣಿಕೆಯಾಗಲು ಅನುಕೂರವಾಗುವಂತೆ ಸ್ವತಂತ್ರ ಸಸ್ಪೆನ್ಷನ್ ಒಳಗೊಂಡಿದೆ. ಸ್ಟೀರಿಂಗ್ ಮೌಂಟೆಡ್ ಎಚ್ಎಂಐ ಡಿಸ್‌ಪ್ಲೇಯನ್ನು ಕಂಪನಿ ಪರಿಚಯಿಸಿದ್ದು, ಫೀಚರ್‌ಗಲನ್ನು ಆಪರೇಟ್ ಮಾಡಲು ಇದರಿಂದ ಸಹಾಯವಾಗುತ್ತದೆ.

Oxygen On wheels: ಮಹೀಂದ್ರಾ ಕಂಪನಿಯಿಂದ ಆಕ್ಸಿಜನ್ ಪೂರೈಕೆ

ಹೊಲದಲ್ಲಿ ಟ್ರಾಕ್ಟರ್ ಮೂಲಕ ಕೆಲಸ ಮಾಡುವಾಗ ರೈತರಿಗೆ ನೆರವಾಗುವ ಅನೇಕ ಫೀಚರ್‌ಗಳನ್ನು ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ವಿಶೇಷ ಏನೆಂದರೆ, ಕಂಪನಿಯು ಈ ಟ್ರಾಕ್ಟರ್ ಮೇಲೆ 10 ವರ್ಷದ ವಾರಂಟೆ ಕೂಡ ನೀಡುತ್ತಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಟ್ರಾಕ್ಟರ್ ವೆಚ್ಚ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಗಮನ ಸೆಳೆಯುತ್ತದೆ.

Follow Us:
Download App:
  • android
  • ios