ಶೀಘ್ರವೇ ಹೊಸ 2021 ಮಹಿಂದ್ರಾ ಬೊಲೆರೋ ಬಿಡುಗಡೆ ಸಾಧ್ಯತೆ
ಬೊಲೆರೋ ವಾಹನವು ಮಹೀಂದ್ರಾ ಕಂಪನಿಯ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಇದೀಗ ಕಂಪನಿಯು ಹೊಸ ಮಾದರಿಯ ಬೊಲೆರೋ ವಾಹನವನ್ನು ಭಾರತೀಯ ಮಾರುಕಟ್ಟೆಗೆ ಶೀಘ್ರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ವಿನ್ಯಾಸ ಹಾಗೂ ಎಂಜಿನ್ ವಿಷಯದಲ್ಲಿ ಹಲವು ಹೊಸತಗಳನ್ನು ಈ ಹೊಸ ಬೊಲೆರೋ ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೊಸ ಮಾದರಿಯ ಥಾರ್ ಎಸ್‌ಯುವಿ ಬಿಡುಗಡೆ ಮೂಲಕ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ ಮಹೀಂದ್ರಾ ಕಂಪನಿಯು ಶೀಘ್ರವೇ ಬೊಲೆರೋ ವಾಹನವನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ700 ಈ ವರ್ಷದ ನಂತರ ಬಿಡುಗಡ ಮಾಡಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ತನ್ನದೇ ಆದ ಪಾಲನ್ನ ಹೊಂದಿದೆ. ಪ್ರಯಾಣಿಕ ಮತ್ತು ವಾಣಿಜ್ಯ ಉದ್ದೇಶದ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಉಳಿದ ಕಂಪನಿಗಳಿಗೂ ತೀವ್ರ ಪೈಪೋಟಿ ನೀಡುತ್ತಿದೆ. ಪ್ರಯಾಣಿಕ ಕಾರುಗಳಲ್ಲಿ ಹಲವು ವೈವಿಧ್ಯ ಕಾರುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ. ಮಹೀಂದ್ರಾ ಕಂಪನಿ ಕಾರುಗಳ ಸುರಕ್ಷತೆಯ ದೃಷ್ಟಿಯಿಂದಲೂ ವಿಶೇಷ ಮನ್ನಣೆಯನ್ನು ಪಡೆದುಕೊಂಡಿವೆ. ಇದೀಗ ಕಂಪನಿ ಮತ್ತೊಂದು ಜನಪ್ರಿಯ ಬ್ರಾಂಡ್ ಆಗಿರುವ ಬೊಲೆರೋ ಹೊಸ ಮಾದರಿ ಯುಟಿಲಿಟಿ ವೆಹಿಕಲ್ ಬಿಡುಗಡೆಯಾಗಲಿದೆ ಎಂದು ವರದಿಗಳು ಹೇಳುತ್ತಿವೆ.
Oxygen On wheels: ಮಹೀಂದ್ರಾ ಕಂಪನಿಯಿಂದ ಆಕ್ಸಿಜನ್ ಪೂರೈಕೆ
ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಮಾರಾಟವಾಗಲಿರುವ ಹೊಸ ಎಕ್ಸ್‌ಯುವಿ 700 ಅನ್ನು ಹೊರತುಪಡಿಸಿ, ಮಹೀಂದ್ರಾ ಕಂಪನಿಯು ಹೊಸ 2021 ಬೊಲೆರೊ ಯುಟಿಲಿಟಿ ವಾಹನವನ್ನು ಪರಿಚಯಿಸಲು ಸಜ್ಜಾಗಿದೆ ಎನ್ನಲಾಗುತ್ತಿದೆ. ಸ್ವದೇಶಿ ಕಾರು ತಯಾರಕ ಕಂಪನಿಯಾಗಿರುವ ಮಹೀಂದ್ರಾ ಹೊಸ ಬೊಲೆರೊಕ್ಕೆ ಸಂಬಂಧಿಸಿದಂತೆ ಸಾಕಷ್ಟು ರಹಸ್ಯವಾಗಿ ಕೆಲಸ ಮಾಡುತ್ತಿದೆ. ನವೀಕರಿಸಿದ ಮಾದರಿಯು ಇತ್ತೀಚಿನ ದಿನಗಳಲ್ಲಿ 2021 ರ ಮಧ್ಯದ ಮುನ್ನ ಕೆಲವು ಬಾರಿ ಗುರುತಿಸಲಾಗಿದೆ.
ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಮಹೀಂದ್ರ ಕಂಪನಿಯ ಈ ಹೊಸ ಬೊಲೆರೋ ಡ್ಯುಯಲ್ ಟೋನ್ ಥೀಮ್‌ನೊಂದಿಗೆ ಕೆಂಪು ಬಾಡಿ ಕಲರ್ ಸ್ಕೀಮ್‌ನೊದಿಂಗೆ ನವೀಕರಿಸಲಾಗುತ್ತಿದೆ. ಬೊಲೆರೋ ಫ್ರಂಟ್‌ನ ಗ್ರಿಲ್ ಅನ್ನು ಸಿಲ್ವರ್ ಕಲರ್‌ನಿಂದ ಕವರ್ ಮಾಡಲಾಗಿದೆ. ಇನ್ನುಳಿದಂತೆ ಈ ವಾಹನದ ವಿನ್ಯಾಸದ ಅಪ್‌ಡೇಟ್ ಹೇಳಬೇಕಾದರೆ, ಮರುವಿನ್ಯಾಸಗೊಂಡ ಹೆಡ್‌ಲ್ಯಾಂಪ್ಸ್, ಫಾಗ್ ಲೈಟ್ಸ್ ಮತ್ತು ಬಾಡಿ ಕಲರ್ಡ್ ಒಆರ್‌ವಿಎಂಗಳಾಗಿವೆ ಎಂದು ಹೇಳಾಗುತ್ತಿದೆ.
ಈ ಹೊಸ ಮಹೀಂದ್ರಾ ಬೊಲೆರೋ ವಾಹನವನ್ನು ಬಿಎಸ್ 6 ನಿಯಮಗಳನುಸಾರ ರೂಪಿಸಲಾಗಿದೆ. ಈ ವಾಹನವು 1.5 ಲೀಟರ್, ಮೂರು ಸಿಲಿಂಡರ್, ಎಂಹಾವಕ್ ಡಿಸೇಲ್ ಎಂಜಿನ್ ಅನ್ನು ಒಳಗೊಂಡಿದೆ. ಈ ಎಂಜಿನ್ ಗರಿಷ್ಠ 75 ಬಿಎಚ್‌ಪಿ ಗರಿಷ್ಠ ಶಕ್ತಿ ಉತ್ಪಾದಿಸುತ್ತದೆ ಮತ್ತು 210 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಐದು ಸ್ಪೀಡ್ ಮ್ಯಾನುವಲ್ ಟ್ರಾನ್ಸಿಮಿಷನ್ ಸಿಸ್ಟಮ್ ಇರಲಿದೆ.
ಟಾಟಾ ಕಂಪನಿ ತೊರೆದ ಟಿಯಾಗೋ, ನೆಕ್ಸಾನ್, ಹ್ಯಾರಿಯರ್ ವಿನ್ಯಾಸದ ರೂವಾರಿ ಪ್ರತಾಪ್ ಬೋಸ್
ಮಹೀಂದ್ರಾ ಕಂಪನಿ ಹಲವು ಜನಪ್ರಿಯ ಕಾರು, ಎಸ್‌ಯುವಿ, ಯುಟಿಲಿಟಿ ವಾಹನಗಳನ್ನು ಉತ್ಪಾದಿಸಿದೆ. ಆ ಪೈಕಿ ಬೊಲೆರೋ ಕೂಡ ಮಹೀಂದ್ರಾ ಕಂಪನಿಯ ಜನಪ್ರಿಯ ಬ್ರ್ಯಾಂಡ್ ಆಗಿದೆ. ಬೊಲೆರೋ ವಾಹನಕ್ಕೆ ಈ ಸೆಗ್ಮೆಂಟ್‌ನಲ್ಲಿ ಬೇರೆ ಇನ್ನಾವುದೇ ಕಂಪನಿಗಳ ವಾಹನಗಳಿಂದ ತೀವ್ರ ಪೈಪೋಟಿ ಇಲ್ಲ. ಹಾಗಿದ್ದೂ, ಬೊಲೆರೋಗೆ ಮಾರುತಿಯ ಕಂಪನಿ ಎರ್ಟಿಗಾ ಮತ್ತು ರೆನೋ ಟ್ರೈಬರ್ ಅನ್ನು ಪೈಪೋಟಿ ಕಾರುಗಳಾಗಿ ಗುರುತಿಸಬಹುದು.
ಈಗ ಸದ್ಯ ಚಾಲ್ತಿಯಲ್ಲಿರುವ ಬೊಲೆರೋ ವಾಹನವು ನಿಮಗೆ 8.40 ಲಕ್ಷ ರೂಪಾಯಿಂದ 9.39 ಲಕ್ಷ ರೂ.ವರೆಗೂ ಸಿಗುತ್ತದೆ. ಶೀಘ್ರವೇ ಬಿಡುಗಡೆಯಾಗಲಿರುವ ಹೊಸ ಬೊಲೆರೋ ವಾಹನದ ಬೆಲೆ ಕೂಡ ತೀರಾ ಹೆಚ್ಚಿನ ಇರಲಾರದು ಎಂದು ಹೇಳಲಾಗುತ್ತಿದೆ. ಹೊಸ ಬೊಲೆರೋ ವಾಹನದ ಬೆಲೆ 8.50 ಲಕ್ಷ(ಎಕ್ಸ್ ಶೋರೂಮ್ ಬೆಲೆ) ರೂಪಾಯಿಯಿಂದ ಆರಂಭವಾಗುವ ನಿರೀಕ್ಷೆ ಇದೆ.
2021ರಲ್ಲಿ ಮಹೀಂದ್ರಾ ಕಂಪನಿ ಹಲವು ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಬೊಲೆರೋ ಮತ್ತು ಎಕ್ಸ್‌ಯುವಿ700 ಹೊರತಾಗಿಯೂ ಕಂಪನಿಯು ಈ ವರ್ಷ ಹೊಸ ಮಾದರಿಯ ಸ್ಕಾರ್ಪಿಯೋ, ಬೊಲೆರೋ ನಿಯೋ ಮತ್ತು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ ಎಂದು ಹೇಳಲಾಗುತ್ತಿದೆ.
3ನೇ ತಲೆಮಾರಿನ ಸುಜುಕಿ ಹಯಬುಸಾ ಬೈಕ್ ಲಾಂಚ್, ಬೆಲೆ 16.40 ಲಕ್ಷ ರೂ.!