ಏಪ್ರಿಲ್‌ನಲ್ಲಿ ಗರಿಷ್ಠ ದ್ವಿಚಕ್ರವಾಹನ ಮಾರಿದ ಸುಜುಕಿ
ದ್ವಿಚಕ್ರವಾಹನ ಉತ್ಪಾದನಾ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ಮಾರಾಟ ದಾಖಲಿಸಿದೆ. ಒಟ್ಟಾರೆ 77,849 ದ್ವಿಚಕ್ರವಾಹನಗಳನ್ನು ಮಾರಿದೆ. ಇದೇ ಮೊದಲ ಬಾರಿಗೆ ಕಂಪನಿಯು ಇಷ್ಟೊಂದು ದ್ವಿಚಕ್ರವಾಹನಗಳನ್ನು ತಿಂಗಳೊಂದರಲ್ಲಿ ಮಾರಿದೆ. ಈ ಮೂಲಕ ಕಂಪನಿಯು ದಾಖಲೆ ಬರೆದಿದೆ.
ಭಾರತೀಯ ದ್ವಿಚಕ್ರವಾಹನಗಳ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳು ಪ್ರಮುಖವಾಗಿವೆ. ಆ ಪೈಕಿ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕೂಡ ತನ್ನದೇ ಮಾರುಕಟ್ಟೆಯ ಪಾಲನ್ನು ಹೊಂದಿದೆ. ಅಕ್ಸೆಸ್ 125 ಈ ಕಂಪನಿಯ ಜನಪ್ರಿಯ ಸ್ಕೂಟರ್ ಆಗಿದೆ. ವಿಶೇಷ ಏನೆಂದರೆ, ಏಪ್ರಿಲ್ ತಿಂಗಳಲ್ಲಿ ದಾಖಲೆಯ ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ.
3ನೇ ತಲೆಮಾರಿನ ಸುಜುಕಿ ಹಯಬುಸಾ ಬೈಕ್ ಲಾಂಚ್, ಬೆಲೆ 16.40 ಲಕ್ಷ ರೂ.!
ಸುಜುಕಿ ಮೋಟರಾಸೈಕಲ್ ಇಂಡಿಯಾ ಕಂಪನಿಯು 2021ರ ಏಪ್ರಿಲ್ ತಿಂಗಳಲ್ಲಿ ಒಟ್ಟು 77,849 ದ್ವಿಚಕ್ರವಾಹನಗಳನ್ನು ಮಾರಾಟ ವಿಕ್ರಮಗೈದಿದೆ. ದ್ವಿಚಕ್ರವಾಹನ ಉತ್ಪಾದನೆ ಮಾಡುವ ಈ ಕಂಪನಿಯು ಜನಪ್ರಿಯ ಅಕ್ಸೆಸ್ 125 ಸ್ಕೂಟರ್ ಮಾತ್ರವಲ್ಲದೇ, ಹಯಬುಸಾ, ವಿಸ್ಟಾರ್ಮ್ 650 ಎಕ್ಸ್‌ಟಿ, ಗಿಕ್ಸರ್ ಎಸ್‌ಎಫ್ 250, ಗಿಕ್ಸರ್, ಇಂಟ್ರೂಡರ್, ಅಕ್ಸೆಸ್ 125 ಬ್ಲೂಟೂತ್ ಸಕ್ರಿಯ ಎಡಿಷನ್, ಬರ್ಗಮನ್ ಸ್ಟ್ರೀಟ್ ಮತ್ತು ಬರ್ಗಮನ್ ಸ್ಟ್ರೀಟ್ ಬ್ಲೂಟೂಥ್ ಆಧರಿತ ಎಡಿಷನ್ ದ್ವಿಚಕ್ರವಾಹನಗಳನ್ನು ಹೊಂದಿದೆ.
2019ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ 2021ರ ಏಪ್ರಿಲ್ ತಿಂಗಳಲ್ಲಿ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿ ದ್ವಿಚಕ್ರವಾಹನಗಳ ಮಾರಾಟದಲ್ಲಿ ಒಟ್ಟಾರೆ ಶೇ.18 ಏರಿಕೆಯನ್ನು ಕಂಡಿದೆ. ಕಂಪನಿಯ ದೇಶಿ ಮಾರುಕಟ್ಟೆಯಲ್ಲಿ 63,879 ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದರೆ, 13,970 ದ್ವಿಚಕ್ರವಾಹನಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಆ ಮೂಲಕ ಒಟ್ಟಾರೆ ಶೇ.18 ಮಾರಾಟ ಏರಿಕೆಯನ್ನು ದಾಖಲಿಸಿದೆ ಎಂದು ಅಂಕಿ ಸಂಖ್ಯೆಗಳು ಹೇಳುತ್ತಿವೆ.
ಏಪ್ರಿಲ್ ತಿಂಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಉಲ್ಬಣಕ್ಕೆ ಸಂಬಂಧಿಸಿದ ಎಲ್ಲಾ ಸವಾಲುಗಳ ಹೊರತಾಗಿಯೂ, ನಾವು ದೇಶೀಯ ಮಾರುಕಟ್ಟೆಯಲ್ಲಿ ಶೇಕಡಾ 12ರಷ್ಟು ಬೆಳವಣಿಗೆಯನ್ನು ಮತ್ತು ನಮ್ಮ ರಫ್ತು ವಿಭಾಗದಲ್ಲಿ ಶೇಕಡಾ 57.5 ರಷ್ಟು ಅಸಾಧಾರಣ ಬೆಳವಣಿಗೆಯನ್ನು ದಾಖಲಿಸಿರುವುದು ಬಹಳ ತೃಪ್ತಿಕರವಾಗಿದೆ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (ಎಸ್‌ಎಂಐಪಿಎಲ್) ವ್ಯವಸ್ಥಾಪಕ ನಿರ್ದೇಶಕ ಕೊಯಿಚಿರೋ ಹಿರಾವ್ ಹೇಳಿದ್ದಾರೆ.
ಟಾಟಾ ಕಂಪನಿ ತೊರೆದ ಟಿಯಾಗೋ, ನೆಕ್ಸಾನ್, ಹ್ಯಾರಿಯರ್ ವಿನ್ಯಾಸದ ರೂವಾರಿ ಪ್ರತಾಪ್ ಬೋಸ್
ಭಾರತೀಯ ಮಾರುಕಟ್ಟೆಗೆ ಸುಜುಕಿ ಮೋಟಾರಸೈಕಲ್ ಇಂಡಿಯಾ ಕಂಪನಿಯ ಏಪ್ರಿಲ್ 16ರಂದು ಮೂರನೇ ತಲೆಮಾರಿನ ಹಯಬಸುಮಾ ಪ್ರೀಮಿಯಂ ದ್ವಿಚಕ್ರವಾಹನವನ್ನು ಲಾಂಚ್ ಮಾಡಿತು. ಈ ಹಯಬುಸಾ ಬೆಲೆ 16.40 ಲಕ್ಷ ರೂಪಾಯಿ(ದಿಲ್ಲಿ ಎಕ್ಸ್ ಶೂರೂಮ್ ಬೆಲೆ). ಈ ಹೊಸ ಸುಜುಕಿ ಹಯಬುಸಾ ಮೂರು ಬಣ್ಣಗಳಲ್ಲಿ ಮಾರಾಟಕ್ಕೆ ದೊರೆಯುತ್ತದೆ. ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್/ ಕ್ಯಾಂಡಿ ಬರ್ನಂಟ್ ಗೋಲ್ಡ್, ಮೆಟಾಲಿಕ್ ಮ್ಯಾಟ್ ಸಾವರ್ಡ್ ಸಿಲ್ವರ್/ ಕ್ಯಾಂಡಿ ಡೇರಿಂಗ್ ರೆಡ್ ಮತ್ತು ಪರ್ಲ್ ಬ್ರಿಲಿಯಂಟ್ ವೈಟ್/ ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ನೀಲಿ ಬಣ್ಣಗಳಲ್ಲಿ ಹಯಬುಸಾ ಗ್ರಾಹಕರಿಗೆ ದೊರೆಯುತ್ತಿದೆ. ಮೂರನೇ ತಲೆಮಾರಿನ ಈ ಪ್ರೀಮಿಯಂ ಬೈಕ್ ಮೊದಲಿನಿಂದಲೂ ಅತ್ಯುತ್ತಮ ಬೇಡಿಕೆ ಇದೆ.
ಹೊಸ ಹಣಕಾಸು ವರ್ಷದ ಮೊದಲ ತಿಂಗಳು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾಕ್ಕೆ ಬಹಳ ವಿಶೇಷ ಮಹತ್ವದ್ದಾಗಿತ್ತು, ಏಕೆಂದರೆ ನಾವು ನಮ್ಮ ಪ್ರಮುಖ ಸ್ಪೋರ್ಟ್ಸ್ ಬೈಕ್‌ನ ಎಲ್ಲ ಹೊಸ ಹಯಬುಸಾದ ಬಹುನಿರೀಕ್ಷಿತ ಥರ್ಡ್ ಜನರೇಷನ್ ಎಡಿಷನ್ ಅನ್ನು ಲಾಂಚ್ ಮಾಡಿದ್ದೇವೆ. ನಿಮ್ಮ ಮೊದಲ ಬ್ಯಾಚ್ 101 ದ್ವಿಚಕ್ರವಾಹನಗಳನ್ನು ಬುಕಿಂಗ್ ಪ್ರಾರಂಭವಾದ 2 ದಿನಗಳಲ್ಲಿ ಬುಕ್ ಮಾಡಲಾಗಿದೆ ಎಂದು ಹಿರಾವ್ ಹೇಳಿದರು. ಹಯಬುಸಾ ಪ್ರೀಮಿಯಂ ಬೈಕ್ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ.
Oxygen On wheels: ಮಹೀಂದ್ರಾ ಕಂಪನಿಯಿಂದ ಆಕ್ಸಿಜನ್ ಪೂರೈಕೆ
ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಹಯಬುಸಾ ದ್ವಿಚಕ್ರವಾಹನದಲ್ಲಿ 1,340 ಸಿಸಿ, 4 ಸ್ಟ್ರೋಕ್, ಫ್ಯೂಯಲ್ ಇಂಜೆಕ್ಟ್, ಲಿಕ್ವಿಟ್ ಕೂಲ್ಡ್ ಡಿಒಎಚ್‌ಸಿ, ನಾಲ್ಕು ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 190ಪಿಎಸ್ ಪವರ್ ಹಾಗೂ 150 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.