ಮೈಸೂರು(ಅ.05): ಎಪ್ಪತ್ತರ ದಶಕದಿಂದೀಚೆಗೆ ಸಾಂಪ್ರದಾಯಿಕ ವರ್ಸಸ್‌ ಪ್ರವಾಸೋದ್ಯಮ ದಸರಾ! ಅರಮನೆ ಒಳಗೆ ರಾಜವಂಶಸ್ಥರ, ಹೊರಗೆ ಅಧಿಕಾರಸ್ಥರ ದರ್ಬಾರ್‌!

- ಮೈಸೂರು ದಸರೆಯನ್ನು ಒಂದು ಸಾಲಿನಲ್ಲಿ ಈ ರೀತಿ ವ್ಯಾಖ್ಯಾನಿಸಬಹುದು. ಮೊದಲೆಲ್ಲಾ ‘ರಾಜರ ದರ್ಬಾರ್‌’. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರಸ್ಥರ ಅರ್ಥಾತ್‌ ‘ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ದರ್ಬಾರ್‌’ ಎಂಬಂತೆ ಆಗಿರುವುದು ಇದಕ್ಕೆ ಕಾರಣ.

ಮೈಸೂರು: ಕವಿಗೂ ಬಂದಿತೆ ಅತೃಪ್ತ, ಅನರ್ಹ ಪಟ್ಟ!

ರಾಜಮಹಾರಾಜರ ಕಾಲದಿಂದಲೂ ವೈಭವದಿಂದ ನಡೆದುಕೊಂಡು ಬಂದಿರುವ ದಸರಾ ಮಹೋತ್ಸವದಿಂದಲೇ ಮೈಸೂರು ವಿಶ್ವವಿಖ್ಯಾತಿ ಪಡೆದಿದೆ. ದೇಶದ ಪ್ರಮುಖ ಪ್ರವಾಸಿತಾಣ ಮಾತ್ರವಲ್ಲದೇ ವಿಶ್ವಪ್ರವಾಸಿ ಭೂಪಟದಲ್ಲೂ ಮಹತ್ವದ ಸ್ಥಾನ ಪಡೆದಿದೆ. ದಸರೆಯ ಕೇಂದ್ರಬಿಂದು ಅಂಬಾವಿಲಾಸ ಅರಮನೆ. ದಸರೆಗೆ ಬರುವ ಗಜಪಡೆಯನ್ನು ಸ್ವಾಗತಿಸುವುದು, ಆನೆ, ಮಾವುತರು, ಕಾವಾಡಿಗಳು ಬಿಡಾರ ಹೂಡುವುದು, ದಸರೆಯ ಕೊನೆಯ ದಿನ ಜಂಬೂ ಸವಾರಿ ಹೊರಡುವುದು, ರಾಜವಂಶಸ್ಥರು ಖಾಸಗಿ ದರ್ಬಾರ್‌ ಸೇರಿದಂತೆ ಎಲ್ಲ ಸಾಂಪ್ರದಾಯಿಕ ಪೂಜೆ, ಪುನಸ್ಕಾರ ನೆರವೇರಿಸಿ, ಗತಕಾಲದ ವೈಭವ ನೆನಪಿಗೆ ತರುವುದು ಈ ಅರಮನೆಯಲ್ಲಿಯೇ.

ಮೈಸೂರು: ಆರನೇ ತರಗತಿ ಅನಿರುದ್ಧನಿಗೆ 1 ಮಿಲಿಯನ್ ಗಿಡ ನೆಡುವ ಕನಸು..!

ಸಂಜೆ ವೇಳೆ ಸರಿಸುಮಾರು ಒಂದು ಲಕ್ಷ ಬಲ್ಬ್‌ಗಳ ಅಲಂಕಾರದಿಂದ ಹೊಂಬಣ್ಣದಲ್ಲಿ ಕಂಗೊಳಿಸುವ ಈ ಅರಮನೆಗೆ ವಿಶ್ವದ ಬೇರೆ ಯಾವುದೇ ಅರಮನೆ ಸಾಟಿ ಇಲ್ಲ. ಇದಕ್ಕಾಗಿಯೇ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಅಂದರೆ ವರ್ಷಕ್ಕೆ ಸುಮಾರು 37.40 ಲಕ್ಷದಷ್ಟುಪ್ರವಾಸಿಗರು (2017-18ರ ಸಾಲಿನಲ್ಲಿ ಪ್ರವಾಸಿಗರ ಸಂಖ್ಯೆ 38.61 ಲಕ್ಷ ತಲುಪಿತ್ತು) ಭೇಟಿ ನೀಡುತ್ತಾರೆ.

ವಿಜಯನಗರ ಅರಸರ ಕಾಲದಲ್ಲಿ ನಡೆಯುತ್ತಿದ್ದ ದಸರೆಯನ್ನು ಕ್ರಿ.ಶ.1610 ರಲ್ಲಿ ಶ್ರೀರಂಗಪಟ್ಟಣದಲ್ಲಿ ಆರಂಭಿಸಿದ್ದು ಕೂಡ ಮೈಸೂರಿನ ಅರಸರಾಗಿದ್ದ ರಾಜ ಒಡೆಯರ್‌ ಅವರು. ನಂತರ ಮೈಸೂರಿಗೆ ಸ್ಥಳಾಂತರಿಸಿ, ಅಂದಿನಿಂದಲೂ ವೈಭವದಿಂದ ನಡೆಸಿಕೊಂಡು ಬರಲಾಗುತ್ತಿದೆ. 409 ವರ್ಷಗಳ ನಂತರವೂ ರಾಜವಂಶಸ್ಥರು ಅರಮನೆಯಲ್ಲಿ ಅದೇ ರೀತಿ ಸಾಂಪ್ರದಾಯಿಕವಾಗಿ ದಸರೆ ಆಚರಿಸಿಕೊಂಡು ಬರುತ್ತಿದ್ದಾರೆ.

ಮೈಸೂರು: ಬೆಂಕಿ ಇಲ್ಲದೆ ರುಚಿಕರ ಅಡುಗೆ ಮಾಡಿದ ಅತ್ತೆ, ಸೊಸೆ..!

‘ರಾಜರ ಆಳ್ವಿಕೆ’ ಹೋಗಿ ‘ಪ್ರಜಾ ಆಳ್ವಿಕೆ’ಗೆ ಒಳಪಟ್ಟನಂತರ ದಸರಾ ’ನಾಡಹಬ್ಬ’ವಾಗಿದೆ. ರಾಜರ ಕಾಲದ ಜಂಬೂಸವಾರಿ, ಪಂಜಿನ ಕವಾಯತು, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಪೊಲೀಸ್‌ ಸಮೂಹ ವಾದ್ಯವೃಂದ, ಕುಸ್ತಿಯ ಜೊತೆಗೆ ನಾಡಿನ ಕಲೆ, ಪರಂಪರೆ, ಸಾಹಿತ್ಯ, ಸಂಗೀತ, ಕ್ರೀಡೆ, ನೃತ್ಯ, ಜಾನಪದ ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ದೇಶ- ವಿದೇಶಿ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ.

ಮೈಸೂರು: ಜಂಬೂ ಸವಾರಿಯಲ್ಲಿ 39 ಆಕರ್ಷಕ ಸ್ತಬ್ಧಚಿತ್ರಗಳು

ಈಗ ಯುವ ದಸರಾ, ಆಹಾರ ಮೇಳ, ವೈಮಾನಿಕ ಪ್ರದರ್ಶನ, ದೀಪಾಲಂಕಾರ, ಕ್ರೀಡಾಕೂಟ, ಕವಿಗೋಷ್ಠಿ, ಚಲನಚಿತ್ರೋತ್ಸವ, ಸಾಹಸ ಕ್ರೀಡೆ, ರೈತ, ಮಹಿಳಾ, ಮಕ್ಕಳ ದಸರಾ, ದಸರಾ ದರ್ಶನ, ಮನೆ ಮನೆ ದಸರಾ, ಪುಸ್ತಕ ಮೇಳ. ಗ್ರಾಮೀಣ ದಸರಾ, ಯೋಗ ದಸರಾ, ಪಾರಂಪರಿಕ ನಡಿಗೆ, ಮತ್ಸ್ಯಮೇಳ, ಹಸುಗಳ ಹಾಲು ಕರೆಯುವ ಸ್ಪರ್ಧೆ, ಜಾನಪದ ಸೀರಿ, ಕರಕುಶಲ ಮೇಳ, ಚಿತ್ರ ಸಂತೆ, ಹಸಿರು ಸಂತೆ, ಸೈಕ್ಲೋಥಾನ್‌, ಮ್ಯಾರಥಾನ್‌, ಹೆಲಿರೈಡ್‌, ತೆರೆದ ಬಸ್‌ ಸಂಚಾರ, ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವ ಜೊತೆಗೆ ನಗರದ ಸಪ್ತ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ.

ಯಾವುದೇ ಪಕ್ಷದ ಸರ್ಕಾರ ಇರಲಿ, ಮೈಸೂರು ದಸರೆಗೆ ಒತ್ತು ನೀಡುತ್ತಾ, ಪ್ರತಿ ವರ್ಷ ಹೊಸ ಹೊಸ ಕಾರ್ಯಕ್ರಮಗಳನ್ನು ಜೋಡಿಸುತ್ತಾ, ಆಕರ್ಷಣೆಯನ್ನು ಹೆಚ್ಚಿಸುತ್ತಾ ಬಂದಿದೆ.

ಅರ್ಜುನನ ಮೇಲೆ ದಸರಾ ಅಂಬಾರಿ ಈ ವರ್ಷವೇ ಕಡೆ?

ಮೈಸೂರಿನಲ್ಲಿ ಅಂಬಾವಿಲಾಸ ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯ, ಜಗನ್ಮೋಹನ ಅರಮನೆಯಲ್ಲಿ ಕಲಾ ಗ್ಯಾಲರಿ, ಸಂತ ಫಿಲೋಮಿನಾ ಚಚ್‌ರ್‍, ಕಾರಂಜಿ ಕೆರೆ ನೋಡಬಹುದು. ಮೈಸೂರು ಸುತ್ತಮುತ್ತ ಕೆಆರ್‌ಎಸ್‌, ಶ್ರೀರಂಗಪಟ್ಟಣ, ರಂಗನತಿಟ್ಟು ಪಕ್ಷಿಧಾಮ, ಬಲಮುರಿ, ಮೇಲುಕೋಟೆ, ಕೆರೆತೊಣ್ಣೂರು, ತಿರಮಕೂಡಲು ನರಸೀಪುರ, ಸೋಮನಾಥಪುರ, ತಲಕಾಡು, ಮುಡುಕುತೊರೆ, ಶಿವನಸಮುದ್ರ, ಮಹದೇಶ್ವರ ಬೆಟ್ಟ, ನಂಜನಗೂಡು, ಸುತ್ತೂರು, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ, ನಾಗರಹೊಳೆ, ಬೈಲಕುಪ್ಪೆ, ನಿಸರ್ಗಧಾಮ, ತಲಕಾವೇರಿ, ಭಾಗಮಂಡಲ, ಮಡಿಕೇರಿ, ಇರ್ಫು, ಅಬ್ಬಿ ಪಾಲ್ಸ್‌, ಹಾರಂಗಿ , ಕಬಿನಿ ಜಲಾಶಯ, ದುಬಾರೆ, ಮಡಿಕೇರಿ, ಬೇಲೂರು, ಹಳೇಬೀಡು, ಶ್ರವಣ ಬೆಳಗೊಳ, ಹಾಸನ ಮೊದಲಾದ ಪ್ರವಾಸಿತಾಣಗಳು ಇವೆ.

ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಕೊಡಗು- ಈ ಐದು ಜಿಲ್ಲೆಗಳ ಪ್ರವಾಸಿ ಸರ್ಕೂ್ಯಟ್‌ ಮಾಡಿ, ವರ್ಷವಿಡಿ ಪ್ರವಾಸಿಗರನ್ನು ಸೆಳೆಯುವಂತೆ ಕಾರ್ಯಕ್ರಮ ರೂಪಿಸಿದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟುಅಭಿವೃದ್ಧಿಪಡಿಸಬಹುದು.

ಸಾಂಪ್ರದಾಯಿಕತೆಗೆ ಪೆಟ್ಟು

ದಸರೆಯ ಸಂದರ್ಭದಲ್ಲಿಯೇ ಅರಮನೆ, ಯುವ ದಸರೆ ಹೊರತುಪಡಿಸಿ, ಪುರಭವನ, ಜಗನ್ಮೋಹನ ಅರಮನೆ, ಕಲಾಮಂದಿರ, ಕಿರುರಂಗ ಮಂದಿರ, ಚಿಕ್ಕಗಡಿಯಾರ, ನಾದಬ್ರಹ್ಮ ಸಂಗೀತ ಸಭಾ, ಗಾನಭಾರತಿ- ಇಲ್ಲಿ ಕೂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿರುವುದರಿಂದ ಕಲಾವಿದರಿಗೆ ಉತ್ತೇಜನ ಸಿಗುತ್ತಿದೆ ಎಂಬುದು ನಿಜ. ಆದರೆ ಅರಮನೆ, ಯುವ ದಸರೆಗೆ ಜನ ಸೇರುತ್ತಾರೆ, ಉಳಿದೆಡೆ ಜನರೇ ಇರುವುದಿಲ್ಲ ಎಂಬ ದೂರುಗಳಿವೆ.

ಶಾಶ್ವತ ಪ್ರಾಧಿಕಾರ ರಚನೆ

ದಸರೆಯ ನಂತರವೂ ಅಂದರೆ ಜನವರಿ ಮೊದಲ ವಾರದವರೆಗೆ ಪ್ರವಾಸಿಗರು ಬರುವಂತಾಗಲು ಜಿಲ್ಲಾಡಳಿತ ಯೋಜಿತ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಪಾಸ್‌ ಗೊಂದಲ ತಪ್ಪಿಸಲು ಹಾಗೂ ಯಾವ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇರುತ್ತದೋ ಆ ಪಕ್ಷದವರು ಉಪ ಸಮಿತಿಗಳ ಹೆಸರಿನಲ್ಲಿ ‘ದರ್ಬಾರ್‌’ ನಡೆಸಲು ಅವಕಾಶ ನೀಡಲಾಗುತ್ತದೆ. ಇದನ್ನು ತಪ್ಪಿಸಿ, ವ್ಯವಸ್ಥಿತ ದಸರೆ ಹಾಗೂ ಕಾರ್ಯಕ್ರಮಗಳ ಆಯೋಜನೆಗೆ ಶಾಶ್ವತ ಪ್ರಾಧಿಕಾರ ರಚನೆಯೇ ಮದ್ದು. ಆಗ ಮಾತ್ರ ದಸರೆಯನ್ನು ಮೈಸೂರು ಭಾಗದ ಪ್ರವಾಸೋದ್ಯಮದ ‘ಚಿಮ್ಮು ಹಲಗೆ’ಯಂತೆ ಬಳಸಬಹುದು. ಇದರಿಂದ ಪ್ರವಾಸೋದ್ಯಮ ಮತ್ತಷ್ಟುಗರಿಗಟ್ಟಲು ಸಾಧ್ಯ.

-ಅಂಶಿ ಪ್ರಸನ್ನಕುಮಾರ್‌