ಮೈಸೂರು: ಆರನೇ ತರಗತಿ ಅನಿರುದ್ಧನಿಗೆ 1 ಮಿಲಿಯನ್ ಗಿಡ ನೆಡುವ ಕನಸು..!

1 ಮಿಲಿಯನ್‌ ಮರಗಳನ್ನು ನೆಡುವ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದು ಆರನೇ ತರಗತಿ ಓದುತ್ತಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಅನಿರುದ್ಧ ತಿಳಿಸಿದ್ದಾರೆ. ಅನಿರುದ್ಧ್‌ ಅವರ ಅಪ್ಪ ಅಮ್ಮ ಕರ್ನಾಟಕದಲ್ಲಿ 100 ಗಿಡಗಳನ್ನು ನೆಡುವ ಅಭಿಯಾನವನ್ನು ಪ್ರಾರಂಭಿಸಿದ್ದೇ ಅವರಿಗೆ ಸ್ಫೂರ್ಥಿಯಾಗಿದೆ.

Anirudh 6th standard boy from mysore dreams to plant 1 million tress

ಮೈಸೂರು(ಅ.05): ನನ್ನ ಅಪ್ಪ ಅಮ್ಮ ಕರ್ನಾಟಕದಲ್ಲಿ 100 ಗಿಡಗಳನ್ನು ನೆಡುವ ಅಭಿಯಾನವನ್ನು ಪ್ರಾರಂಭಿಸಿದಾಗ ನಾನು ಸಹ ಅವರೊಂದಿಗೆ ಕೈ ಜೋಡಿಸಿ ಇಂದು 1 ಮಿಲಿಯನ್‌ ಮರಗಳನ್ನು ನೆಡುವ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದು ಆರನೇ ತರಗತಿ ಓದುತ್ತಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಅನಿರುದ್ಧ ತಿಳಿಸಿದ್ದಾರೆ.

ನಮ್ಮ ಈ ಒಂದು ಅಭಿಯಾನಕ್ಕೆ ಚಿತ್ರದುರ್ಗದಲ್ಲಿ ಸ್ಪಂದನೆ ಸಿಕ್ಕಿದೆ. ಇದನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಆಸೆ. ಈ ಪರಿಸರ ರಕ್ಷಣೆ ಮಾಡಬೇಕು ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು. ಆಗ ಹವಾಮಾನ ಮತ್ತು ಪ್ರಕೃತಿಯಲ್ಲಿ ಆಗುವ ಏರುಪೇರುಗಳನ್ನು ತಡೆಯಬಹುದು ಅಲ್ಲದೆ ಭೂಕಂಪ, ಪ್ರವಾಹ, ಪ್ರಳಯಗಳಂತ ಪ್ರಾಕೃತಿಕ ವಿಕೋಪಗಳನ್ನು ತಡೆಯಬಹುದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೈಸೂರು: ಬೆಂಕಿ ಇಲ್ಲದೆ ರುಚಿಕರ ಅಡುಗೆ ಮಾಡಿದ ಅತ್ತೆ, ಸೊಸೆ..!

ಗ್ರೀನ್‌ ಫೆಡರೇಶನ್‌ನ ಸಿಇಒ ನಂದನ್‌ ಪೂಜಾರಿ ಮಾತನಾಡಿ, ಗಾಂಧೀಜಿಯವರ ಸ್ವರಾಜ್ಯ ಗ್ರಾಮಗಳ ಕಲ್ಪನೆ ನನಸು ಮಾಡುವ ನಿಟ್ಟಿನಲ್ಲಿ ಈ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ 300 ಎಕರೆಯಲ್ಲಿ ಗಿಡಗಳನ್ನು ನೆಟ್ಟು ಪ್ಲಾಂಟೇಶನ್‌ ನಿರ್ಮಾಣ ಮಾಡಿದ್ದೇವೆ. ಇದಕ್ಕೆ ಹಳ್ಳಿಯ ಜನರ ಸ್ಪಂದನೆ ಸಿಕ್ಕಿದೆ ಇನ್ನು ಮುಂದೆಯೂ ರಾಜ್ಯಾದ್ಯಂತ ಇದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.

ಮೈಸೂರು: ಜಂಬೂ ಸವಾರಿಯಲ್ಲಿ 39 ಆಕರ್ಷಕ ಸ್ತಬ್ಧಚಿತ್ರಗಳು

Latest Videos
Follow Us:
Download App:
  • android
  • ios