ಮೈಸೂರು(ಅ.05): ರಾಜ್ಯದ ವಿವಿಧ ಜಿಲ್ಲೆಯ ಪರಂಪರೆ ಹಾಗೂ ವೈವಿಧ್ಯತೆ ಅನಾವರಣಗೊಳಿಸುವ ಮತ್ತು ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಒಟ್ಟು 39 ಸ್ತಬ್ಧಚಿತ್ರಗಳು ಈ ಬಾರಿ ದಸರಾ ಮೆರವಣಿಗೆಯಲ್ಲಿ ಸಾಗಲಿವೆ ಎಂದು ಸ್ತಬ್ಧಚಿತ್ರ ಉಪಸಮಿತಿ ಅಧ್ಯಕ್ಷ ಸು. ಮುರಳಿ ತಿಳಿಸಿದ್ದಾರೆ.

ಮೈಸೂರು ಜಿಪಂ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕಳೆದ ಬಾರಿಗಿಂತ ವಿಶೇಷವಾದ ಸ್ತಬ್ಧಚಿತ್ರಗಳು ಮೂಡಿ ಬರಲಿದ್ದು, ಅಂಬಾರಿ ಮೆರವಣಿಗೆಗೆ ಯಾವುದೇ ಅಡಚಣೆಯಾಗಬಾರದು ಎಂಬ ದೃಷ್ಠಿಯಿಂದ ಈ ಬಾರಿ 39 ಸ್ತಬ್ಧಚಿತ್ರಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಯುವದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್

ಈ ಬಾರಿ ವಿಶೇಷವಾಗಿ ಐತಿಹಾಸಿಕ ಹಿನ್ನಲೆ, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ, ಪರಿಸರ, ಅರಣ್ಯೀಕರಣ, ಅಂತರ್ಜಲ, ನೆರೆ- ಬರ, ಚಂದ್ರಯಾನ, ಸಂವಿಧಾನ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕುರಿತು ಬಿಂಬಿಸುವ ಸ್ತಬ್ಧಚಿತ್ರಗಳು ನಗರದ ಎಪಿಎಂಸಿ ಆವರಣದಲ್ಲಿ ತಯಾರಾಗುತ್ತಿದ್ದು, ಬಂದಂತಹ ಕಲಾವಿದರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗಿದೆ. ಇನ್ನೂ 2 ದಿನಗಳಲ್ಲಿ ಅಂತಿಮವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಜಿಲ್ಲಾವಾರು ಸ್ತಬ್ಧಚಿತ್ರಗಳು:

ಬೆಳಗಾವಿ- ಅತಿವೃಷ್ಟಿಪ್ರವಾಹದಿಂದ ನಲುಗಿದ ಬೆಳಗಾವಿ, ಬಾಗಲಕೋಟೆ- ಅತಿವೃಷ್ಠಿ ಹಾಗೂ ಪುನರ್ವಸತಿ ಕಾರ್ಯಗಳು, ಧಾರವಾಡ- ಸಾಂಸ್ಕೃತಿಕ ವೈಭವ, ಹಾವೇರಿ- ಶಂಖನಾದ ಮೊಳಗಿಸುತ್ತಿರುವ ಕನಕದಾಸರು, ಗದಗ- ಬೇಟಿ ಪಡಾವೋ ಬೇಟಿ ಬಚಾವೋ, ಉತ್ತರ ಕನ್ನಡ- ಕದಂಬ ಬನವಾಸಿ ಮಧುಕೇಶ್ವರ ದೇವಸ್ಥಾನ, ವಿಜಯಪುರ- ವಚನ ಪಿತಾಮಹ ಫ.ಹು. ಹಳಕಟ್ಟಿ.

ಬೆಂಗಳೂರು ನಗರ- ಇಸ್ರೋ ಚಂದ್ರಯಾನ-2, ಬೆಂಗಳೂರು ಗ್ರಾಮಾಂತರ- ಸ್ವಚ್ಛತ ಕಡೆಗೆ ನಮ್ಮ ನಡಿಗೆ, ಚಿತ್ರದುರ್ಗ- ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಮಹಿಳಾ ಸಾಧಕರು, ದಾವಣಗೆರೆ- ಏರ್‌ ಸ್ಟೆ್ರೖಕ್‌, ಕೋಲಾರ- ಅಂತರಗಂಗೆ, ಶಿವಮೊಗ್ಗ- ಫಿಟ್‌ ಇಂಡಿಯಾ, ತುಮಕೂರು- ಸಮಗ್ರ ಕೃಷಿ ಪದ್ಧತಿ ಹಾಗೂ ನಡೆದಾಡುವ ದೇವರು, ರಾಮನಗರ- ಮಳೂರು ಅಂಬೆಗಾಲು ಕೃಷ್ಣ, ಚಿಕ್ಕಬಳ್ಳಾಪುರ- ರೇಷ್ಮೆ ಮತ್ತು ಎಚ್‌. ನರಸಿಂಹಯ್ಯ, ಗುಲ್ಬರ್ಗಾ- ಆಯುಷ್ಮಾನ್‌ ಭಾರತ್‌.

ಬಳ್ಳಾರಿ- ಹಂಪಿ ವಾಸ್ತುಶಿಲ್ಪ ಕಲಾ ವೈಭವ, ಬೀದರ್‌- ಫಸಲ್‌ ಬೀಮಾ ಯೋಜನೆ, ಕೊಪ್ಪಳ- ಗವಿಸಿದ್ದೇಶ್ವರ ಬೆಟ್ಟ, ರಾಯಚೂರು- ಗೂಗಲ್‌ ಬ್ರಿಡ್ಜ್‌ , ಪ್ರಧಾನ ಮಂತ್ರಿ ಸಿಂಚಯಿ ಹಾಗೂ ನರೇಗಾ ಯೋಜನೆ, ಯಾದಗಿರಿ- ಅಂಬಿಗರ ಚೌಡಯ್ಯ, ಮೈಸೂರು- ಚಾಮರಾಜ ಒಡೆಯರ್‌ ಅವರ 100ನೇ ವರ್ಷದ ಸಾಧನೆ, ಚಾಮರಾಜನಗರ- ಸಮೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ, ಚಿಕ್ಕಮಗಳೂರು- ಶಿಶಿಲಬೆಟ್ಟ, ದಕ್ಷಿಣ ಕನ್ನಡ- ಮಂಗಳದೇವಿ ಹಾಗೂ ಭಾರತದ ದೊಡ್ಡ ಪೆಟ್ರೋಲಿಯಂ ಘಟಕ.

ಹಾಸನ- ಎತ್ತಿನಹೊಳೆ ಯೋಜನೆ, ಕೊಡಗು- ಗುಡ್ಡ ಕುಸಿತ ಜಾಗೃತಿ ಮೂಡಿಸುವ ಬಗ್ಗೆ, ಮಂಡ್ಯ- ಶ್ರೀ ಆದಿಚುಂಚನಗಿರಿ ಮಠ, ಉಡುಪಿ- ಶ್ರೀಕೃಷ್ಣ ಮಠದ ಗೋಪುರ, ದಸರಾ ಉಪ ಸಮಿತಿ- ಆನೆ ಬಂಡಿ, ಜೆಎಸ್‌ಎಸ್‌ ಮಠ, ಮೆಮೋ ರೈಲು, ಉಡಾನ್‌ ಮತ್ತು 10 ಪಥತದ ರಸ್ತೆ, ವಾರ್ತಾ ಇಲಾಖೆ- ಸರ್ಕಾರ ಸೌಲಭ್ಯಗಳ ಮಾಹಿತಿ, ಜಿಲ್ಲಾಡಳಿತ- ಸಾಮಾಜಿಕ ನ್ಯಾಯ, ಕಾವೇರಿ ನೀರಾವರಿ ನಿಗಮ- ನೀರಾವರಿ ನಿಗಮ ಮಾಹಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಪೋಷಣ ಅಭಿಯಾನ, ರಕ್ತಹೀನತೆ ಮುಕ್ತ ಭಾರತ, ಪ್ರವಾಸೋದ್ಯಮ ಇಲಾಖೆ- ನಿಮ್ಮ ಸಾಹಸಗಾಥೆ ನೀವೇ ರಚಿಸಿ, ಮೈಸೂರು ವಿಶ್ವವಿದ್ಯಾನಿಲಯ- ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳು.

ಮೈಸೂರು: ಬೆಂಕಿ ಇಲ್ಲದೆ ರುಚಿಕರ ಅಡುಗೆ ಮಾಡಿದ ಅತ್ತೆ, ಸೊಸೆ..!

ಸ್ತಬ್ಧಚಿತ್ರ ಉಪಸಮಿತಿ ಉಪಾಧ್ಯಕ್ಷರಾದ ಅರುಣಕುಮಾರ್‌ಗೌಡ, ಲಕ್ಷ್ಮೀದೇವಿ, ನಂದಕುಮಾರ್‌, ಉಪ ವಿಶೇಷಾಧಿಕಾರಿ ಪದ್ಮಶೇಖರ್‌ ಪಾಂಡೆ, ಕಾರ್ಯಾಧ್ಯಕ್ಷ ಲಿಂಗರಾಜು, ಕಾರ್ಯದರ್ಶಿ ಸರಸ್ವತಿ, ಸದಸ್ಯರಾದ ಸೌಮ್ಯಶ್ರೀ, ಪ್ರವೀಣ್‌, ಹರೀಶ್‌ ಮೊದಲಾದವರು ಇದ್ದರು.