Asianet Suvarna News Asianet Suvarna News

ಆರ್ಥಿಕ ಸಂಕಷ್ಟ ನಡುವೆ ಮಾನಸಿಕ ಆಘಾತ, ಸಾಲ ಮರುಪಾವತಿಸದ ಪತಿ ಎದುರೇ ಪತ್ನಿ ಮೇಲೆ ರೇಪ್!

ಪತಿ ತುರ್ತು ಕಾರಣಕ್ಕಾಗಿ ಬಡ್ಡಿಗೆ ಸಾಲ ನೀಡು ವ್ಯಕ್ತಿಯಿಂದ ಸಾಲ ಪಡೆದುಕೊಂಡಿದ್ದಾರೆ. ಮೂರು ನಾಲ್ಕು ತಿಂಗಳು ಸರಿಯಾಗಿ ಪಾವತಿಸಿದ್ದಾರೆ. ಬಳಿಕ ಸಾಲ ಮರುಪಾವತಿಸಲು ಆರ್ಥಿಕ ಸಮಸ್ಯೆಯಾಗಿದೆ. ಇಷ್ಟಕ್ಕೆ ರೊಚ್ಚಿಗೆದ್ದ ಸಾಲ ನೀಡಿದ ವ್ಯಕ್ತಿ ಪತಿಯ ಕತ್ತಿಗೆ ಚಾಕು ಹಿಡಿದ ಕೊಲೆ ಬೆದರಿಕೆ ಹಾಕಿದ್ದಾನೆ. ಇಷ್ಟೇ ಅಲ್ಲ ಪತಿ ಎದುರೇ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
 

Wife raped by moneylender Infront of husband who fails to repay loan in Pune ckm
Author
First Published Jul 27, 2023, 12:43 PM IST

ಪುಣೆ(ಜು.27) ಸಾಲ ಪಡೆದ ಕುಟುಂಬವೊಂದು ಆರ್ಥಿಕ ಸಂಕಷ್ಟದ ನಡುವೆ ಕೊಲೆ ಬೆದರಿಕೆ ಹಾಗೂ ಅತ್ಯಾಚಾರಕ್ಕೆ ಒಳಗಾದ ಘಟನೆ ನಡೆದಿದೆ. ಬಡ್ಡಿಗೆ ಸಾಲ ನೀಡುವ ವ್ಯಕ್ತಿಯಿಂದ ಕುಟುಂಬವೊಂದು ಸಾಲ ಪಡೆದಿದೆ. ಆದರೆ ಮರುಪಾವತಿಸಲು ಆರ್ಥಿಕ ಸಮಸ್ಯೆ ಎದುರಾಗಿದೆ. ಇತ್ತ ಆಕ್ರೋಶಗೊಂಡ ಸಾಲ ನೀಡಿದಾತ ನೇರವಾಗಿ ಕುಟುಂಬದ ಮನೆಗೆ ನುಗ್ಗಿ ಪತಿ ಎದುರೇ ಪತ್ನಿಯನ್ನು ರೇಪ್ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅತ್ಯಾಚಾರ ಎಸಗಿದ 47 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಪುಣೆಯ ಕುಟುಂಬ ಆರ್ಥಿಕ ಅಗತ್ಯದ ಕಾರಣಕ್ಕಾಗಿ ತಕ್ಷಣಕ್ಕೆ ಬಡ್ಡಿಗೆ ಸಾಲು ನೀಡುವ ವ್ಯಕ್ತಿಯಿಂದ ಸಾಲ ಪಡೆದಿದ್ದಾರೆ. ಮೂರರಿಂದ ನಾಲ್ಕು ತಿಂಗಳು ಸಾಲ ಮರುಪಾವತಿ ಕಂತು ಪಾತಿಸಿದ್ದಾರೆ. ಆದರೆ ಬಳಿಕ ಪಾವತಿಸಲು ಸಾಧ್ಯವಾಗಿಲ್ಲ. ಕುಟುಂಬದ ಆರ್ಥಿಕ ಸಮಸ್ಸೆಯಿಂದ ಸಾಲ ಮರುಪಾವತಿಗೆ ಅಡೆ ತಡೆ ಎದುರಾಗಿತ್ತು. ಈ ಕುರಿತು ಪತಿ ಸಾಲ ಪಡೆದ ವ್ಯಕ್ತಿಗೆ ಮನವಿ ಮಾಡಿದ್ದಾರೆ. ಕಾಲಾವಕಾಶ ನೀಡುವಂತೆ ಕೋರಿದ್ದಾರೆ.

Love Jihad: ಹಿಂದೂ ಮಹಿಳೆಯೊಂದಿಗೆ ಫೇಸ್‌ಬುಕ್‌ ಲವ್‌: ರೇಪ್‌ ಮಾಡಿ ಗರ್ಭಪಾತ ಮಾಡಿಸಿ ಇಸ್ಲಾಂಗೆ ಮತಾಂತರ!

ಆದರೆ ಬಡ್ಡಿಗೆ ಸಾಲ ನೀಡಿದ ವ್ಯಕ್ತಿ ಸಿಟ್ಟು ನೆತ್ತಿಗೇರಿದೆ. ತಕ್ಷಣವೇ ಸಾಲ ಮರುಪಾವತಿಸುವಂತೆ ಬೆದರಿಕೆ ಹಾಕಿದ್ದಾನೆ. ಇಲ್ಲದಿದ್ದ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾನೆ. ಪರಿ ಪರಿಯಾಗಿ ಮನವಿ ಮಾಡಿದ ಪತಿ ಮುಂದಿನ ತಿಂಗಳು ಮರುಪಾವತಿಸುವುದಾಗಿ ಕೇಳಿಕೊಂಡಿದ್ದಾನೆ. ಇತ್ತ ಪತ್ನಿಯ ಬಳಿ ಮುಂದಿನ ತಿಂಗಳ ಸಾಲ ಮರುಪಾತಿಸಲು ಸಾಧ್ಯವಾಗಿದ್ದರೆ, ಒಡವೆ ಮಾರಲು ಚರ್ಚಿಸಿದ್ದ. 

ಈ ಚರ್ಚೆ ನಡೆದ ಮರುದಿನವೇ ಸಾಲ ನೀಡಿದ ವ್ಯಕ್ತಿ ಮನೆ ಮುಂದೆ ಹಾಜರಾಗಿದ್ದ. ರಂಪಾಟ ಶುರುಮಾಡಿದ್ದಾನೆ. ಈಗಲೇ ಸಾಲ ಮರುಪಾವತಿಸುವಂತೆ ಜಗಳ ತೆಗೆದಿದ್ದಾನೆ. ಸಾಲ ನೀಡಿದ ವ್ಯಕ್ತಿ ಜೊತೆಗೆ ಇನ್ನಿಬ್ಬರು ಆಗಮಿಸಿದ್ದಾರೆ. ಮನೆಯೊಳಕ್ಕೆ ನುಗ್ಗಿದ ವ್ಯಕ್ತಿ ಸಾಲ ಪಡೆದ ಕುಟುಂಬವನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಬಳಿಕ ಸಾಲ ಪಡೆದ ವ್ಯಕ್ತಿಯ ಕತ್ತಿಗೆ ಚಾಕು ಹಿಡಿದು, ಆತನ ಎದುರೇ ಸಾಲ ಪಡೆದ ವ್ಯಕ್ತಿಯ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. 

ಪತಿ ಎದುರೇ ಪತ್ನಿಯ ಮೇಲೆ ರೇಪ್ ಮಾಡಿ, ಮತ್ತೆ ಬೆದರಿಕೆ ಹಾಕಿದ್ದಾನೆ. ಒಂದು ವಾರದೊಳಗೆ ಸಾಲ ಮರುಪಾತಿಸದಿದ್ದರೆ ಮತ್ತೆ ಬರುವುದಾಗಿ ಎಚ್ಚರಿಸಿದ್ದಾನೆ. ಈ ಘಟನೆಯಿಂದ ಮಾನಸಿಕವಾಗಿ ದೈಹಿಕವಾಗಿ ನೊಂದ ದಂಪತಿ ಬೆದರಿ ಕೆಲ ದಿನಗಳ ಕಾಲ ತಮ್ಮ ಪೋಷಕರ ಮನೆಗೆ ತೆರಳಿದ್ದಾರೆ. ತೀವ್ರ ಆಘಾತಕ್ಕೊಳಗಾದ ದಂಪತಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇತ್ತ ಮನೆಯಲ್ಲಿ ದಂಪತಿಗಳು ಇಲ್ಲದೆ ಇರುವುದನ್ನು ಖಾತ್ರಿಪಡಿಸಿಕೊಂಡ ಸಾಲ ನೀಡಿದ ವ್ಯಕ್ತಿ, ಫೋನ್ ಮೂಲಕ ರೆಕಾರ್ಡ್ ಮಾಡಿದ್ದ ಅತ್ಯಾಚಾರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಕೋವಿಡ್ ವೇಳೆ ಅಪ್ರಾಪ್ತೆ ನಾದಿನಿಯ ಮೇಲೆ ಅತ್ಯಾಚಾರವೆಸಗಿದ ಭಾವನಿಗೆ 20 ವರ್ಷ ಶಿಕ್ಷೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ, ವ್ಯಾಟ್ಸ್ಆ್ಯಪ್ ಮೂಲಕ ಹರಿದಾಡಿದೆ. ಪ್ರಕರಣವನ್ನು ಪೊಲೀಸರು ಗಮನಿಸಿದ್ದಾರೆ. ಈ ಕುರಿತು ಮಾಹತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೆಲವೇ ದಿನಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ. ಬಡ್ಡಿ ವ್ಯವಹಾರ ಹಾಗೂ ಅಮಾಯಕರನ್ನು ಬೆದರಿಸುವುದು, ಅತ್ಯಾಚಾರ ಎಸಗುವುದೇ ಈತನ ಕಾಯಕವಾಗಿತ್ತು. ಹೀಗಾಗಿ ಇದೊಂದೆ ಘಟನೆಯಲ್ಲ, ಇದೇ ರೀತಿ ಹಲವು ಘಟನೆಗಳು ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios