ದೆಹಲಿ ಆಪ್ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಅರವಿಂದ್ ಕೇಜ್ರಿವಾಲ್ ಆಪ್ತ ನಡೆಸಿದ ಹಲ್ಲೆ ಪ್ರಕರಣ ಇದೀಗ ಕೋಲಾಹಲ ಸೃಷ್ಟಿಸಿದೆ. ಘಟನೆ ನಡೆದಿದೆ ಎಂದು ಸುದ್ದಿಗೋಷ್ಠಿ ನಡೆಸಿದ್ದ ಆಪ್, ಇದೀಗ ನಡೆದೇ ಇಲ್ಲ, ಎಲ್ಲಾ ಸುಳ್ಳು ಎಂದಿದೆ. ಈ ಕುರಿತು ಸ್ವಾತಿ ಮಲಿವಾಲ್ ಟ್ವೀಟ್ ಮೂಲಕ ಆಪ್ ಬೆತ್ತಲಾಗಿಸಿದ್ದಾರೆ.
ದೆಹಲಿ(ಮೇ.17) ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಸಂಸದೆ ಬೆತ್ತಲು ಮಾಡಿದ್ದಾರೆ. ಹಲ್ಲೆ ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿದ್ದ ಆಪ್ ನಾಯಕರು, ಘಟನೆ ನಡೆದಿದೆ. ಎಷ್ಟು ಖಂಡಿಸಿದರೂ ಸಾಲದು, ಪ್ರಕರಣದ ತನಿಖೆ ನಡೆಯಲಿದೆ ಎಂದಿದ್ದರು. ಆದರೆ ಇಂದು ಸುದ್ದಿಗೋಷ್ಠಿ ನೆಡೆಸಿದ ಆಪ್, ಈ ಘಟನೆ ನಡೆದೇ ಇಲ್ಲ, ಸ್ವಾತಿ ಮಲಿವಾಲ್ ಆರೋಪ ಸುಳ್ಳು ಎಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಮಲಿವಾಲ್ ಆಪ್ ಪಕ್ಷ ಹಾಗೂ ನಾಯಕ ಯುಟರ್ನ್ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಇಷ್ಟೇ ಅಲ್ಲ ಏಕಾಂಗಿಯಾಗಿ ಹೋರಾಡುವುದಾಗಿ ಹೇಳಿದ್ದರೆ.
ನಿನ್ನೆ ಮೊನ್ನೆ ಪಾರ್ಟಿಗೆ ಸೇರಿದ ನಾಯಕರು, ಕಳೆದ 20 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನನ್ನನ್ನು ಬಿಜೆಪಿ ಎಜೆಂಟ್ ಎಂದು ಕರೆದಿದ್ದಾರೆ. ಎರಡು ದಿನಗಳ ಹಿಂದೆ ಆಪ್ ಪಾರ್ಟಿ ಘಟನೆ ನಡೆದಿದೆ ಎಂದು ಒಪ್ಪಿಕೊಂಡಿತ್ತು. ಇದೀಗ ಯೂಟರ್ನ್ ಹೊಡೆದಿದೆ. ಗೂಂಡಾಗಳು ಬೆದರಿಕೆ ಹಾಕುತ್ತಿದ್ದಾರೆ. ಅರೆಸ್ಟ್ ಆದರೆ ಎಲ್ಲಾ ಮಾಹಿತಿ ಬಹಿರಂಗಗೊಳಿಸುತ್ತೇನೆ. ಹೀಗಾಗಿ ಗೂಂಡಾ ಲಖನೌನದಲ್ಲಿ ಆಶ್ರಯ ಪಡೆಯುವ ಪ್ರಯತ್ನದಲ್ಲಿದ್ದಾರೆ. ಗೂಂಡಾನನ್ನು ಉಳಿಸಲು ಇದೀಗ ಆಮ್ ಆದ್ಮಿ ಪಾರ್ಟಿ ಯೂಟರ್ನ್ ಹೊಡದಿದೆ. ನನ್ನ ಚಾರಿತ್ಯವನ್ನೇ ನಾಯಕರು, ಆಪ್ ಪ್ರಶ್ನಿಸುತ್ತಿದೆ. ನಾನು ಏಕಾಂಗಿಯಾಗಿ ಈ ದೇಶದ ಮಹಿಳಾ ಪರವಾಗಿ ಹೋರಾಡುತ್ತೇನೆ. ಏನೇ ಮಾಡಿದರೂ ಸತ್ಯ ಹೊರಗೆ ಬರುತ್ತದೆ ಎಂದು ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.
ಪ್ರಜ್ವಲ್ ರೇಪ್ ಬಗ್ಗೆ ಕಿಡಿಕಾರಿದ್ದ ಆಪ್, ಸ್ವಾತಿ ವಿಷಯದಲ್ಲಿ ಮೌನ!
ಇತ್ತ ಆಪ್ ಸಂಸದೆ ಸ್ವಾತಿ ಮಲಿವಾಲ್ ಅವರು ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಬೆದರಿಕೆ ಒಡ್ಡುತ್ತಿರುವಂತಹ ವಿಡಿಯೋ ವೈರಲ್ ಆಗಿದೆ. ಇದು ಸಿಎಂ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಅವರಿಂದ ಹಲ್ಲೆಗೊಳಗಾದ ನಂತರದ ವಿಡಿಯೋ ಎನ್ನಲಾಗಿದೆ.
ಈ ಕುರಿತು 52 ಸೆಕೆಂಡ್‌ಗಳ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಸ್ವಾತಿ ಮಲಿವಾಲ್‌ಗೆ ಭದ್ರತಾ ಸಿಬ್ಬಂದಿ ‘ಇಲ್ಲಿಂದ ಹೊರಡಿ’ ಎನ್ನುತ್ತಾರೆ. ಆಗ ಭದ್ರತಾ ಸಿಬ್ಬಂದಿಯ ಎದುರೇ ಪೊಲೀಸರಿಗೆ ಕರೆ ಮಾಡುವ ಸ್ವಾತಿ, ‘ಅವರು ಬರುವವರೆಗೆ ನಾನು ಇಲ್ಲಿಯೇ ಇರುವೆ’ ಎಂದು ತಿಳಿಸುತ್ತಾರೆ. ಅಲ್ಲದೆ ಯಾರಾದರೂ ತಮ್ಮನ್ನು ಮುಟ್ಟಿದಲ್ಲಿ ಡಿಸಿಪಿಗೆ ತಿಳಿಸುತ್ತೇನೆ ಎಂದು ಜೋರು ದನಿಯಲ್ಲಿ ಹೇಳುತ್ತಾರೆ.
Swati Maliwal case: ಮುಖ, ಎದೆ, ಹೊಟ್ಟೆ, ದೇಹದ ಸೂಕ್ಷ್ಮ ಭಾಗಗಳ ಮೇಲೆ ಕೇಜ್ರಿವಾಲ್ ಆಪ್ತನಿಂದ ಹಲ್ಲೆ
