ನಾಲ್ವರು ಹಿಂದೂಗಳನ್ನೇ ಮದ್ವೆಯಾಗಿರೋ ಲವ್‌ಜಿಹಾದಿಯಿಂದ ಮತ್ತೊಬ್ಳು ಹಿಂದೂ ಯುವತಿ ಕಿಡ್ನ್ಯಾಪ್
ರಶೀದ್ ಅವರ ಐವರು ಪತ್ನಿಯರಲ್ಲಿ ಒಬ್ಬರು ಮುಸ್ಲಿಂ ಆಗಿದ್ದರೆ, ಇತರರು ಹಿಂದೂಗಳು ಎಂಬುದು ಗಮನಾರ್ಹವಾಗಿದೆ. 19 ವರ್ಷದ ಯುವತಿ 4 ದಿನಗಳ ಹಿಂದೆ ತನ್ನ ತಾಯಿಯ ಸಂಬಂಧಿಕರ ಮನೆಗೆ ಹೋಗಿದ್ದವಳು ನಾಪತ್ತೆಯಾದ ಹಿನ್ನೆಲೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಲಖನೌ (ಜೂನ್ 21, 2023): ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬ ಈಗಾಗ್ಲೇ ಐವರು ಮಹಿಳೆಯರನ್ನು ಮದುವೆಯಾಗಿದ್ದರೂ ಇದೀಗ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಲು ಅಪಹರಿಸಿದ್ದಾರೆ ಎಂದೂ ತಿಳಿದುಬಂದಿದೆ. 19 ವರ್ಷದ ಹಿಂದೂ ಯವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದು, ಅದಕ್ಕೂ ಮೊದಲು ಆಕೆಯನ್ನು ಮತಾಂತರ ಮಾಡಿದ್ದಾನೆ ಎಂದೂ ತಿಳಿದುಬಂದಿದೆ.
ರಶೀದ್ ಅವರ ಐವರು ಪತ್ನಿಯರಲ್ಲಿ ಒಬ್ಬರು ಮುಸ್ಲಿಂ ಆಗಿದ್ದರೆ, ಇತರರು ಹಿಂದೂಗಳು ಎಂಬುದು ಗಮನಾರ್ಹವಾಗಿದೆ. 19 ವರ್ಷದ ಯುವತಿ 4 ದಿನಗಳ ಹಿಂದೆ ತನ್ನ ತಾಯಿಯ ಸಂಬಂಧಿಕರ ಮನೆಗೆ ಹೋಗಿದ್ದವಳು ನಾಪತ್ತೆಯಾದ ಹಿನ್ನೆಲೆ ಈ ಪ್ರಕರಣ ಬೆಳಕಿಗೆ ಬಂದಿದೆ. ಈಕೆ, ಮನೆಗೆ ಬಾರದೇ ಇದ್ದಾಗ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನು ಓದಿ: ಕೇರಳ ಯುವತಿ ನಾಪತ್ತೆ: ಬಲವಂತದ ಮತಾಂತರ, ಮದುವೆ ಮಾಡಿರೋ ಆತಂಕ ವ್ಯಕ್ತಪಡಿಸಿದ ತಂದೆ
ಪೊಲೀಸರ ವರದಿಯ ಬಗ್ಗೆ ಮಾಹಿತಿ ಪಡೆದ ಆರೋಪಿ ರಶೀದ್ ಪೋಷಕರಿಗೆ ಕರೆ ಮಾಡಿ ತನ್ನ ಇನ್ನೊಬ್ಬ ಮಗಳನ್ನೂ ಕರೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾನೆ ಎಂದೂ ತಿಳಿದುಬಂದಿದೆ. ಇನ್ನು, ಈ ಘಟನೆ ಬೆಳಕಿಗೆ ಬಂದ ನಂತರ ಸ್ವಾಮಿ ಯಶ್ವೀರ್ ಸಿಂಗ್ ಸೇರಿದಂತೆ ಸ್ಥಳೀಯ ಬಜರಂಗದಳ ಕಾರ್ಯಕರ್ತರೊಂದಿಗೆ ಹಿಂದೂ ಕಾರ್ಯಕರ್ತರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಅಲ್ಲದೆ, ಇಷ್ಟೆಲ್ಲ ಬೆದರಿಕೆ ಹಾಕಿದರೂ, ಯುವತಿ ಇನ್ನೂ ಆರೋಪಿ ಬಳಿಯೇ ಇದ್ದಾರೆ. ಜೂನ್ 22 ರ ಮೊದಲು ಯುವತಿಯನ್ನು ಆಕೆಯ ಮನೆಗೆ ತಂದು ಬಿಡಬೇಕು. ಇಲ್ಲದಿದ್ದರೆ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಸ್ಥಳೀಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಬಾಲಕಿ ಬರ್ಬರ ಹತ್ಯೆ ಕೇಸ್: 15 ದಿನದ ಹಿಂದೆಯೇ ಸ್ಕೆಚ್; ಕೊಲೆಗೆ ಕಾರಣ ಹೀಗಿದೆ.
24 ಗಂಟೆಯೊಳಗೆ ಮಹಿಳೆಯನ್ನು ಮನೆಗೆ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ಜೂನ್ 22 ರಂದು ಶಾಮ್ಲಿಯ ಅದಮಾಪುರ ಗ್ರಾಮದಲ್ಲಿ ಹಿಂದೂ ಸಂಘಟನೆಗಳ ಮಹಾಸಭೆ ನಡೆಸಲಾಗುವುದು ಎಂದು ಶಾಮ್ಲಿಯ ಬಘರಾ ಆಶ್ರಮದ ಪ್ರಚಾರಕ ಯಶ್ವೀರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಯಶ್ವೀರ್ ಸಿಂಗ್ ಅದಮಾಪುರ ನಿವಾಸಿಯೂ ಆಗಿದ್ದಾರೆ
ಇನ್ನು, ಯಶ್ವೀರ್ ಸಿಂಗ್ ಮತ್ತು ಬಜರಂಗದಳದ ಸದಸ್ಯರು ಶುಕ್ರವಾರ ಸಂಜೆ ಬಾಬರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಗದ್ದಲ ಸೃಷ್ಟಿಸಿದ್ದಾರೆ. ಹಿಂದೂ ಸಂಘಟನೆಗಳು ಈ ವಿಷಯವನ್ನು "ಲವ್ ಜಿಹಾದ್" ಎಂದು ಕರೆಯುತ್ತಿದ್ದು, ಮುಸ್ಲಿಂ ವ್ಯಕ್ತಿ ಮಹಿಳೆಯನ್ನು ಅಪಹರಿಸಿ ನಂತರ ಬಲವಂತವಾಗಿ ಮತಾಂತರಿಸಿ ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮತ್ತೊಂದು ಲವ್ ಜಿಹಾದ್ ಕೇಸ್: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!
ಇನ್ನು, ಈ ಆರೋಪಿಗೆ ಐವರು ಪತ್ನಿಯರಿದ್ದು, ಆತನ ಐವರು ಪತ್ನಿಯರಲ್ಲಿ ಒಬ್ಬರು ಮುಸ್ಲಿಂ ಮತ್ತು ಉಳಿದ ನಾಲ್ವರು ಹಿಂದೂಗಳು ಎಂದು ಪ್ರತಿಭಟನೆ ವೇಳೆ ಕಾರ್ಯಕರ್ತರು ಹೇಳಿದ್ದಾರೆ. ಈ ಸಂಬಂಧ ಆರೋಪಿ ರಶೀದ್ ಮೇಲೆ ಚಪ್ರೌಲಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ, ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಗರ್ಲ್‌ಫ್ರೆಂಡ್ ಕೊಲೆ ಮಾಡಿ ಪೀಸ್ ಪೀಸ್ ಮಾಡ್ದ: ಕೈಕಾಲು ಫ್ರಿಡ್ಜ್‌ನಲ್ಲಿ, ಡೆಡ್‌ಬಾಡಿ ಸೂಟ್‌ಕೇಸ್‌ನಲ್ಲಿಟ್ಟ ಪಾಪಿ!