ಕೇರಳ ಯುವತಿ ನಾಪತ್ತೆ: ಬಲವಂತದ ಮತಾಂತರ, ಮದುವೆ ಮಾಡಿರೋ ಆತಂಕ ವ್ಯಕ್ತಪಡಿಸಿದ ತಂದೆ
ಜೂನ್ 9ರಂದು ಆಕೆ ಫಹಾದ್ ಸಂಖ್ಯೆಯಿಂದ ‘ಅಪರಿಚಿತರ ಜೊತೆ ಹೋಗುತ್ತಿದ್ದೇನೆ’ ಎಂದು ವಾಯ್ಸ್‌ನೋಟ್ ಕಳಿಸಿದ್ದಳು. ಆದರೆ ನನಗೆ ಫಹಾದ್ ಸಂಪೂರ್ಣ ವಿಳಾಸ ತಿಳಿದಿಲ್ಲ ಎಂದು ಬೆನಿಟಾ ತಂದೆ ವರ್ಗೀಸ್ ಅಬ್ರಹಾಂ ದೂರಿನಲ್ಲಿ ತಿಳಿಸಿದ್ದಾರೆ.
ಕಣ್ಣೂರು (ಜೂನ್ 17, 2023): ಕೇರಳದ ವ್ಯಕ್ತಿಯೊಬ್ಬರು ಕಾಣೆಯಾಗಿರುವ ತಮ್ಮ ಮಗಳನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ಅಕೆಯ ವಿವಾಹ ಮಾಡಿರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಪುತ್ರಿಯನ್ನು ಹುಡುಕಿ ಕೊಡುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ವರ್ಗೀಸ್ ಅಬ್ರಹಾಂ, ನಾನು ಹಾಗೂ ನಮ್ಮ ಮಗಳು ಬೆನಿಟಾ ಗ್ರೇಸ್ (22) ಕುವೈತ್‌ನಲ್ಲಿ ವಾಸಿವಿದ್ದೆವು. ಆದರೆ ಆಕೆ ಉನ್ನತ ವ್ಯಾಸಂಗಕ್ಕೆ ಚೆನ್ನೈಗೆ ಮರಳಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಳು. ಅಲ್ಲಿ ಆಕೆಗೆ ಕೇರಳದ ಮಟ್ಟಣೂರು ಮೂಲದ ಫಹಾದ್ ಎಂಬಾತನೊಂದಿಗೆ ಸ್ನೇಹ ಬೆಳೆದಿತ್ತು. ಇವರಿಬ್ಬರು ದಿನಕ್ಕೆ 3 - 4 ಬಾರಿ ಕರೆ ಮಾಡುತ್ತಿದ್ದರು.
ಇದನ್ನು ಓದಿ: ದೆಹಲಿ ಬಾಲಕಿ ಬರ್ಬರ ಹತ್ಯೆ ಕೇಸ್: 15 ದಿನದ ಹಿಂದೆಯೇ ಸ್ಕೆಚ್; ಕೊಲೆಗೆ ಕಾರಣ ಹೀಗಿದೆ.
ಈ ನಡುವೆ ಜೂನ್ 8ರಿಂದ ನನ್ನ ಮಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಹಾಸ್ಟೆಲ್‌ಗೆ ಕರೆ ಮಾಡಿದರೆ ಆಕೆ ಸಂಬಂಧಿಕರ ಮನೆಗೆ ತೆರಳಿದ್ದಾರೆ ಎನ್ನುತ್ತಿದ್ದಾರೆ. ಆದರೆ ಆಕೆ ಫಹಾದ್‌ನಿಂದ ಬಲವಂತವಾಗಿ ಮತಾಂತರವಾಗಿ ವಿವಾಹವಾಗಿರಬಹುದು ಎಂಬ ಶಂಕೆ ಇದೆ. ಜೂನ್ 9ರಂದು ಆಕೆ ಫಹಾದ್ ಸಂಖ್ಯೆಯಿಂದ ‘ಅಪರಿಚಿತರ ಜೊತೆ ಹೋಗುತ್ತಿದ್ದೇನೆ’ ಎಂದು ವಾಯ್ಸ್‌ನೋಟ್ ಕಳಿಸಿದ್ದಳು. ಆದರೆ ನನಗೆ ಫಹಾದ್ ಸಂಪೂರ್ಣ ವಿಳಾಸ ತಿಳಿದಿಲ್ಲ ಎಂದು ಬೆನಿಟಾ ತಂದೆ ವರ್ಗೀಸ್ ಅಬ್ರಹಾಂ ದೂರಿನಲ್ಲಿ ತಿಳಿಸಿದ್ದಾರೆ.
ಆಕೆಯ ಇಚ್ಛೆಯಿಲ್ಲದೆ ಆ ವ್ಯಕ್ತಿ ಬೆನಿಟಾಳನ್ನು ಮಟ್ಟನ್ನೂರಿಗೆ ಕರೆದುಕೊಂಡು ಹೋಗಿರಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. "ಬೆನಿಟಾಳನ್ನು ಬಲವಂತವಾಗಿ ತನ್ನ ಸಮುದಾಯದಿಂದ ಮತಾಂತರಗೊಳಿಸಲಾಗುವುದು ಮತ್ತು ಆಕೆಯ ಇಚ್ಛೆಗೆ ವಿರುದ್ಧವಾಗಿ ಆತನನ್ನು ಮದುವೆಯಾಗಲಾಗುವುದು" ಎಂದೂ ಹೇಬಿಯಸ್ ಕಾರ್ಪಸ್ ಅರ್ಜಿಯ ಮನವಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಮತ್ತೊಂದು ಲವ್ ಜಿಹಾದ್ ಕೇಸ್: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!
ಬೆನಿಟಾ ಮತ್ತು ಫಹಾದ್ ಪ್ರಕರಣವು ಇನ್ನೂ ತನಿಖೆಯಲ್ಲಿದೆ ಮತ್ತು ಬೆನಿಟಾ ಇಸ್ಲಾಂಗೆ ಮತಾಂತರಗೊಳ್ಳುವಲ್ಲಿ ಯಾವುದೇ ಬಲವಂತವಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಪ್ರಕರಣ ಕೇರಳದಲ್ಲಿ ಲವ್ ಜಿಹಾದ್ ಪ್ರಕರಣದ ಬಗ್ಗೆ ಮತ್ತಷ್ಟು ಆತಂಕ ಮೂಡಿಸಿದೆ.
ಕೇರಳದಲ್ಲಿ ಮತಾಂತರ ಆರೋಪ ಪ್ರಕರಣ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿನ ವರ್ಷಗಳಲ್ಲಿ, ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡು ಮುಸ್ಲಿಂ ಪುರುಷರನ್ನು ಮದುವೆಯಾಗುತ್ತಿರುವ ಹಲವಾರು ವರದಿಗಳಿವೆ. ಈ ಪ್ರಕರಣಗಳ ತನಿಖೆಗಾಗಿ ಕೇರಳ ಸರ್ಕಾರ ವಿಶೇಷ ಕಾರ್ಯಪಡೆಯನ್ನು ರಚಿಸಿದೆ.
ಇದನ್ನೂ ಓದಿ: ಗರ್ಲ್‌ಫ್ರೆಂಡ್ ಕೊಲೆ ಮಾಡಿ ಪೀಸ್ ಪೀಸ್ ಮಾಡ್ದ: ಕೈಕಾಲು ಫ್ರಿಡ್ಜ್‌ನಲ್ಲಿ, ಡೆಡ್‌ಬಾಡಿ ಸೂಟ್‌ಕೇಸ್‌ನಲ್ಲಿಟ್ಟ ಪಾಪಿ!