ದೆಹಲಿ ಬಾಲಕಿ ಬರ್ಬರ ಹತ್ಯೆ ಕೇಸ್‌: 15 ದಿನದ ಹಿಂದೆಯೇ ಸ್ಕೆಚ್‌; ಕೊಲೆಗೆ ಕಾರಣ ಹೀಗಿದೆ..

ಸಾಕ್ಷಿಯನ್ನು ಪ್ರೀತಿಸುವ ವೇಳೆ ತಾನು ಮುಸ್ಲಿಂ ಎಂಬ ವಿಷಯ ಮುಚ್ಚಿಡಲು ಬೇರೊಂದು ಹೆಸರು ಹೇಳಿಕೊಂಡಿದ್ದ ಎಂಬ ಆರೋಪ ಕೇಳಿಬಂದಿದ್ದು ಈ ಕುರಿತು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

delhi murder case sahil showed no remorse during interrogation planned attack 15 days ago ash

ನವದೆಹಲಿ (ಮೇ 31, 2023): ದೆಹಲಿಯಲ್ಲಿ ನಡೆದ ಸಾಕ್ಷಿ ಎಂಬ ಅಪ್ರಾಪ್ತೆಯ ಹತ್ಯೆಗೆ ಆಕೆ ತನ್ನ ಪ್ರಿಯಕರ ಸಾಹಿಲ್‌ನೊಂದಿಗೆ ಬ್ರೇಕಪ್‌ ಮಾಡಿಕೊಂಡಿದ್ದೇ ಕಾರಣ ಎಂದು ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಸಾಹಿಲ್‌ ಈ ವಿಷಯ ಬಾಯಿಬಿಟ್ಟಿದ್ದಾನೆ. ಜೊತೆಗೆ ಹತ್ಯೆಗಾಗಿ 15 ದಿನಗಳ ಹಿಂದೆ ಹರಿದ್ವಾರದಲ್ಲಿ ತಾನು ಚಾಕು ಖರೀದಿಸಿದ್ದೆ ಎಂದು ಹೇಳಿದ್ದಾನೆ.

3 ವರ್ಷಗಳಿಂದ ನಾನು ಆಕೆಯನ್ನು ಪ್ರೀತಿಸಿದ್ದೆ. ಕಳೆದ ಕೆಲ ದಿನಗಳಿಂದ ಆಕೆ ನನ್ನಿಂದ ದೂರವಾಗಿ, ತನ್ನ ಮಾಜಿ ಪ್ರಿಯಕರ ಜತೆ ಮತ್ತೆ ಪ್ರೀತಿ ಬೆಳೆಸಿಕೊಂಡಿದ್ದಳು. ಹೀಗಾಗಿ ಆಕೆ ಹತ್ಯೆಗೆ ಯೋಜಿಸಿದ್ದೆ. ಕಳೆದ ಗುರುವಾರವೇ ಹತ್ಯೆಗೆ ಯತ್ನ ಮಾಡಿದ್ದೆನಾದರೂ ಆಕೆ ತಪ್ಪಿಸಿಕೊಂಡಿದ್ದಳು. ಹೀಗಾಗಿ ಭಾನುವಾರ ಕಾದು ಹತ್ಯೆ ಮಾಡಿದೆ. ಹತ್ಯೆ ಮಾಡಿದ್ದಕ್ಕೆ ವಿಷಾದವಿಲ್ಲ. ಆದರೆ ಸಾಕ್ಷಿಯ ಹಳೆಯ ಪ್ರಿಯಕರ ದೊಡ್ಡ ಗೂಂಡಾ ಆಗಿದ್ದು, ಆತನಿಂದ ಜೀವಭೀತಿ ಎದುರಾಗಿದೆ ಎಂದು ಸಾಹಿಲ್‌ ಹೇಳಿದ್ದಾನೆ. ಈ ನಡುವೆ ಮೃತ ಬಾಲಕಿಯ ಕುಟುಂಬಕ್ಕೆ ದೆಹಲಿ ಸರ್ಕಾರ 10 ಲಕ್ಷ ರೂ. ಪರಿಹಾರ ಘೋಷಿಸಿದೆ.

ಇದನ್ನು ಓದಿ: ಮತ್ತೊಂದು ಲವ್ ಜಿಹಾದ್‌ ಕೇಸ್‌: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!

ಹೆಸರು ಬದಲಿಸಿ ಮೋಸ?:
ಈ ನಡುವೆ ಸಾಕ್ಷಿಯನ್ನು ಪ್ರೀತಿಸುವ ವೇಳೆ ತಾನು ಮುಸ್ಲಿಂ ಎಂಬ ವಿಷಯ ಮುಚ್ಚಿಡಲು ಬೇರೊಂದು ಹೆಸರು ಹೇಳಿಕೊಂಡಿದ್ದ ಎಂಬ ಆರೋಪ ಕೇಳಿಬಂದಿದ್ದು ಈ ಕುರಿತೂ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹೊಂಚು ಹಾಕಿ ಹತ್ಯೆ:
ಸಾಕ್ಷಿ ಹತ್ಯೆ ಕುರಿತ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಅದರಲ್ಲಿ ಘಟನಾ ಸ್ಥಳಕ್ಕೆ ಕೆಲ ಹೊತ್ತು ಮುನ್ನವೇ ಆಗಮಿಸಿದ್ದ ಸಾಹಿಲ್‌, ತನ್ನ ಸ್ನೇಹಿತ ಆಕಾಶ್‌ ಎಂಬಾತನ ಜೊತೆ ಮಾತುಕತೆ ನಡೆಸುತ್ತಾ ನಿಂತಿರುವ ದೃಶ್ಯಗಳಿವೆ. ಇದಾದ ಕೆಲ ಹೊತ್ತಿನಲ್ಲೇ ಘಟನೆ ನಡೆದಿದೆ.

ಇದನ್ನೂ ಓದಿ: ಗರ್ಲ್‌ಫ್ರೆಂಡ್‌ ಕೊಲೆ ಮಾಡಿ ಪೀಸ್‌ ಪೀಸ್‌ ಮಾಡ್ದ: ಕೈಕಾಲು ಫ್ರಿಡ್ಜ್‌ನಲ್ಲಿ, ಡೆಡ್‌ಬಾಡಿ ಸೂಟ್‌ಕೇಸ್‌ನಲ್ಲಿಟ್ಟ ಪಾಪಿ!

Latest Videos
Follow Us:
Download App:
  • android
  • ios