ಮತ್ತೊಂದು ಲವ್ ಜಿಹಾದ್ ಕೇಸ್: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!
ಇಸ್ಲಾಂಗೆ ಮತಾಂತರಗೊಳ್ಳುವಂತೆ ಆರೋಪಿಗಳು ಗರ್ಭಿಣಿಯೊಬ್ಬಳಿಗೆ ಒತ್ತಡ ಹೇರುತ್ತಿದ್ದ ಆರೋಪ ಉತ್ತರ ಪ್ರದೇಶದಲ್ಲಿ ಕೇಳಿಬಂದಿದೆ. ಅಲ್ಲದೆ, ಆಕೆಗೆ ವಿಷಪ್ರಾಶನ ಹಾಕಿ ಕೊಲೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಶಹಜಹನ್‌ಪುರ (ಯುಪಿ) : ಪ್ರೇಮ ಪ್ರಕರಣದಲ್ಲಿ ಸಿಕ್ಕಿಬಿದ್ದು, ಇಸ್ಲಾಂಗೆ ಮತಾಂತರಗೊಳ್ಳುವಂತೆ ಆರೋಪಿಗಳು ಒತ್ತಡ ಹೇರುತ್ತಿದ್ದ ಗರ್ಭಿಣಿ ಮೃತಪಟ್ಟಿರುವ ಪ್ರಕರಣ ಉತ್ತರ ಪ್ರದೇಶದ ಶಹಜಹನ್‌ಪುರದಲ್ಲಿ ವರದಿಯಾಗಿದೆ. ಈ ಸಂಬಂಧ ಮಹಿಳೆಯ ಸಾವಿಗೆ ಕಾರಣರಾದ ಇಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಸೀಮಾ ಗೌತಮ್ (24) ಅವರು ಲಖೀಂಪುರ ಖೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಆರೋಪಿಗಳಾದ ನಾವೇದ್ ಮತ್ತು ಫರ್ಹಾನ್ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಆಕೆ ಮೃತಪಟ್ಟ ಬಳಿಕ ಅಲ್ಲಿಂದ ರಾತ್ರೋರಾತ್ರಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ, ಆಕೆಗೆ ವಿಷಪ್ರಾಶನ ಮಾಡಲಾಗಿದೆ ಎಂದು ಮೃತ ಮಹಿಳೆಯ ಸಹೋದರ ಆರೋಪಿಸಿದ್ದಾರೆ.
ಇದನ್ನು ಓದಿ: ಬೆತ್ತಲೆ ವಿಡಿಯೋ ಇಡ್ಕೊಂಡು ಬೆಂಗ್ಳೂರಿನ ಉದ್ಯೋಗಿಗೆ ಆನ್‌ಲೈನ್ ‘ಗೆಳತಿ’ ಬ್ಲ್ಯಾಕ್‌ಮೇಲ್: 23 ಲಕ್ಷ ಹರೋಹರ!
ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ಪಿಟಿಐಗೆ ತಿಳಿಸಿದ್ದು, ಲಖೀಂಪುರ ಖೇರಿ ನಿವಾಸಿ ಸೀಮಾ ಗೌತಮ್ ಅವರು ನಾವೇದ್ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ. ಹಾಗೂ, ಜಿಲ್ಲೆಯ ರೋಜಾ ಪ್ರದೇಶದಲ್ಲಿ ಮುಸ್ತಾಕಿಮ್ ಒಡೆತನದ ಬಾಡಿಗೆ ನಿವಾಸದಲ್ಲಿ ದಂಪತಿ ನೆಲೆಸಿದ್ದರು ಎಂದು ತಿಳಿಸಿದ್ದರು. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಕೆಯನ್ನು ನಾವೇದ್ ಮತ್ತು ಫರ್ಹಾನ್ ಆಸ್ಪತ್ರೆಗೆ ಕರೆತಂದಿದ್ದರು.
ಹಾಗೂ, ಆಸ್ಪತ್ರೆಗೆ ಸೇರಿಸಿದ ಸಮಯದಲ್ಲಿ ಮಹಿಳೆಯನ್ನು ನಾವೇದ್ ಪತ್ನಿ ಜೋಯಾ ಸಿದ್ದಿಕಿ ಎಂದು ಇಬ್ಬರೂ ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದಾಗ ಪೊಲೀಸರು ಬರುವ ಮುನ್ನವೇ ಅವರು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಗರ್ಲ್‌ಫ್ರೆಂಡ್ ಕೊಲೆ ಮಾಡಿ ಪೀಸ್ ಪೀಸ್ ಮಾಡ್ದ: ಕೈಕಾಲು ಫ್ರಿಡ್ಜ್‌ನಲ್ಲಿ, ಡೆಡ್‌ಬಾಡಿ ಸೂಟ್‌ಕೇಸ್‌ನಲ್ಲಿಟ್ಟ ಪಾಪಿ!
ವಿಚಾರಣೆಯ ನಂತರ, ದಂಪತಿ ಕಳೆದ ಒಂದೂವರೆ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ಮಹಿಳೆ ಗರ್ಭಿಣಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆ, ಆರೋಪಿಗಳು ಧರ್ಮ ಬದಲಾಯಿಸುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದರು ಎಂದೂ ಅವರು ಹೇಳಿದ್ದಾರೆ.
ಮೃತನ ಸಹೋದರ ನೀಡಿದ ದೂರಿನ ಆಧಾರದ ಮೇಲೆ, ನಾವೇದ್, ಮುಸ್ತಾಕಿಮ್ ಮತ್ತು ಫರ್ಹಾನ್ ವಿರುದ್ಧ ಭಾರತೀಯ ದಂಡ ಸಂಹಿತೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆ ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಸಹೋದರಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನ ಮೇಲೆ ಚಾಕು ಹಾಕಿದ ಯುವಕ
ಸದ್ಯ, ಆರೋಪಿಗಳಾದ ನಾವೇದ್ ಮತ್ತು ಫರ್ಹಾನ್ ಜೈಲಿನಲ್ಲಿದ್ದು, ಮತ್ತೊಬ್ಬ ಆರೋಪಿ ಮುಸ್ತಾಕಿಮ್ ತಲೆಮರೆಸಿಕೊಂಡಿದ್ದಾನೆ ಎಂದೂ ಉತ್ತರ ಪ್ರದೇಶದ ಶಹಜಹನ್‌ಪುರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಛೀ ಪಾಪಿ: ಅಪ್ರಾಪ್ತ ಮಲಮಗಳ ಮೇಲೆ ಹಲವು ಬಾರಿ ಅತ್ಯಾಚಾರ; ಕೊನೆಗೂ ಜೈಲು ಪಾಲಾದ!