ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಗಂಡನನ್ನೇ ಕೊಂದ ಮಹಿಳೆ..!
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ ಯಲಹಂಕ ಠಾಣೆಯ ಪೊಲೀಸರು
ಬೆಂಗಳೂರು(ಅ.26): ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಅಂತ ಮಹಿಳೆಯೊಬ್ಬಳು ಗಂಡನನ್ನೇ ಕೊಲೆ ಮಾಡಿದ ಘಟನೆ ಯಲಹಂಕದಲ್ಲಿ ನಡೆದಿದೆ. ಚಂದ್ರಶೇಖರ್ ಎಂಬುವನನ್ನ ಶ್ವೇತ ಕೊಲೆ ಮಾಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕ ಠಾಣೆಯ ಪೊಲೀಸರು ಚಂದ್ರಶೇಖರ್ ಕೊಲೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರ ಸುರೇಶ್‌ನನ್ನ ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಕಳೆದ ನಾಲ್ಕು ವರ್ಷಗಳ ಹಿಂದೆ ಚಂದ್ರಶೇಖರ್ ಮತ್ತು ಶ್ವೇತ ಮದುವೆಯಾಗಿದ್ದರು. ಇಬ್ಬರ ನಡುವೆ 16 ವರ್ಷದ ಅಂತರ ಇತ್ತು. ಆದರೂ ಅಕ್ಕನ ಮಗಳು ಎಂಬ ಕಾರಣಕ್ಕೆ ಮನೆಯವರು ಬಲವಂತದ ಮದುವೆ ಮಾಡಿಸಿದ್ದರು. ಮದುವೆಯಾದ ಬಳಿಕ ಇಬ್ಬರ ಸಂಸಾರ ಸರಿ ಇರಲಿಲ್ಲ ಅಂತ ಹೇಳಲಾಗುತ್ತಿದೆ. ಶ್ವೇತಾಗೆ ಕಾಲೇಜು ಗೆಳೆಯರು ಹಾಗೂ ಬೇರೆ ಸ್ನೇಹಿತರ ವಿಚಾರಕ್ಕೆ ಸಂಬಂಧಿಸಿದಂತ ಹಲವಾರು ಬಾರಿ ಜಗಳ ಆಗಿತ್ತು. ಇತ್ತ ಹಿಂದೂಪುರ ಮೂಲದ ಸುರೇಶ್ ಎಂಬಾತನ ಜೊತೆಗೆ ಶ್ವೇತ ಸಂಪರ್ಕದಲ್ಲಿದ್ದಳು.
ಮದುವೆಯಾಗೊ ಹುಡುಗಿಗಿತ್ತು ಅಕ್ರಮ ಸಂಬಂಧ: ವೈದ್ಯನ ಕೊಲೆ ಪ್ರಕರಣಕ್ಕೆ ರೋಚಕ ತಿರುವು
ಪತಿ ಇಲ್ಲದ ಸಮಯದಲ್ಲಿ ಇಬ್ಬರು ಸೇರುತಿದ್ದರು. ಈ ನಡುವೆ ಪತಿ ಇದ್ದಾರೆ ಇದೆಲ್ಲಾ ಕಷ್ಟ ಶ್ವೇತ ಅಂದಿದ್ದಳು. ಅದಕ್ಕೆ ಆತನನ್ನೇ ಇಲ್ಲದಂತೆ ಮಾಡು ಅಂತ ಸುರೇಶ್ ಹೇಳಿದ್ದನು. ಹೀಗಾಗಿ ಚಂದ್ರಶೇಖರ್‌ನನ್ನು ಕೊಲ್ಲುವ ಬಗ್ಗೆ ಪ್ಲಾನ್ ಮಾಡಿಕೊಂಡು ಸುರೇಶ್ ಬೆಂಗಳೂರಿಗೆ ಬಂದಿದ್ದನು.
ಚಂದ್ರಶೇಖರ್ ವಾಸ ಮಾಡ್ತಿದ್ದ ಮನೆಯಲ್ಲೇ ಹಲ್ಲೆ ನಡೆಸಿ ಕೊಲೆ ಮಾಡಿ ಅ. 22 ರ ರಾತ್ರಿ ಸುರೇಶ್ ಎಸ್ಕೇಪ್ ಅಗಿದ್ದನು. ಆದ್ರೆ ಯಾರು ಕೊಲೆ ಮಾಡಿದ್ದಾರೆ ಎಂದು ಗೊತ್ತೆ ಇಲ್ಲಾ ಎಂದು ಶ್ವೇತ ಪೊಲೀಸರ ಮುಂದೆ ಹೇಳಿದ್ದಳು. ವಿಚಾರಣೆ ಬಳಿಕ ಶ್ವೇತ ಹಾಗೂ ಸುರೇಶ್ ಸೇರಿ ಕೊಲೆ ಮಾಡಿದ್ದು ಬಯಲಿಗೆ ಬಂದಿದೆ.