ಬೆಳಗಾವಿಯಲ್ಲಿ, ತನ್ನ ಅಕ್ಕನನ್ನು ಪ್ರೀತಿಸಿ ಪೀಡಿಸುತ್ತಿದ್ದ ಅರ್ಚಕನನ್ನು ಅಪ್ರಾಪ್ತ ಯುವಕನೊಬ್ಬ ಕೊ*ಲೆ ಮಾಡಿದ್ದಾನೆ. ಮತ್ತೊಂದೆಡೆ, ಹಾಸನದಲ್ಲಿ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿದ ಕಾಮುಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಅವ್ರಿಬ್ಬರೂ ಒಂದೇ ಊರಿನವರು. ಅಲ್ದೇ ಒಂದೇ ಕಾಲೋನಿಯವರು ಕೂಡ. ಅದ್ರಲ್ಲಿ ಒಬ್ಬ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ಮಾಡ್ಕೊಂಡಿದ್ದ ಅರ್ಚಕನಾಗಿದರೆ, ಇನ್ನೊಬ್ಬ ಓದು ಮುಗಿಸಿ ಹೊಲ-ಮನೆ ಅಂತ ಕೆಲಸ ಮಾಡ್ಕೊಂಡಿದ್ದ. ಒಂದೇ ಊರಿನವಾಗಿದ್ರಿಂದ ಅರ್ಚಕ ಈ ಯುವಕನ ಅಕ್ಕನನ್ನ ಲವ್ ಮಾಡ್ಕೊಂಡಿದ್ದ. ಎಷ್ಟೇ ವಾರ್ನಿಂಗ್ ಮಾಡಿದ್ರೂ ಕೂಡ ಪ್ರೀತಿ ಮಾಡೋದನ್ನ ಮಾತ್ರ ಬಿಡ್ಲೇ ಇಲ್ಲ. ಆದ್ರೆ ಕೊನೆಗೆ ಅಕ್ಕನ ಪೀಡಿಸುತ್ತಿದ್ದ ಆ ಅರ್ಚಕನಿಗೆ ಆಪ್ರಾಪ್ತನೇ ಚಟ್ಟ ಕಟ್ಟಿದ್ದಾನೆ..

ಯಾವ್ಯಾವ ವಯಸ್ಸಲ್ಲಿ ಏನೇನ್ ಮಾಡ್ಬೇಕೋ ಅದನ್ನೆ ಮಾಡ್ಬೇಕು. ಇಲ್ಲವಾದ್ರೆ ಈ ರೀತಿ ದುರಂತ ಅಂತ್ಯ ಕಾಣಬೇಕಾಗುತ್ತೆ. ಪ್ರೀತಿ ಪ್ರೇಮ ಅನ್ಕೊಂಡು ಅಪ್ರಾಪ್ತೆ ಹಿಂದೆ ಬಿದ್ದಿದ್ದ ಸುರೇಶ್ ಮಸಣ ಸೇರಿದ್ರೆ, ಇತ್ತ ಚಿಕ್ಕವಯಸಲ್ಲೇ ಕೊ*ಲೆ ಮಾಡಿ ಮತ್ತೊಬ್ಬ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾನೆ..ಇದು ಬೆಳಗಾವಿಯಲ್ಲಿ ನಡೆದ ಭೀಕರ ಕೊ*ಲೆಯಾದ್ರೆ, ಹಾಸನದಲ್ಲಿ ಕಾಮುಕನೊಬ್ಬ ಅಪ್ರಾಪ್ತೆಯ ಹಿಂದೆ ಬಿದ್ದು ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದಾನೆ.

ಮುಂದುವರೆದ ಹೆಣ್ಮಕ್ಕಳ ಮೇಲಿನ ದೌರ್ಜನ್ಯ

ಇತ್ತೀಚಿಗಂತೂ ಹೆಣ್ಮಕ್ಕಳಿಗೆ ಸೇಫ್ಟಿ ಇಲ್ಲದಾಗಿದೆ. ಎಲ್ಲಿ ನೋಡಿದ್ರೂ ಹೆಣ್ಮಕ್ಕಳ ಮೇಲೆ ದೌರ್ಜನ್ಯದಂತಹ ಪ್ರಕರಣಗಳು ವರದಿ ಆಗ್ತಾನೆ ಇದೆ. ಹಾಸನದಲ್ಲೂ ಸಹ ಅಂತಹದ್ದೆ ಘಟನೆ ನಡೆದಿದೆ. ಅದು ಶಾಲಾ ಬಾಲಕಿ ಮೇಲೆ. ಆಕೆ ಇನ್ನೂ ಬಾಲಕಿ. ಎಂದಿನಂತೆ ತನ್ನ ಶಾಲೆ ಮುಗಿಸಿ ಮನೆಗೆ ಬರ್ತಿದ್ದಳು. ಆಕೆಯನ್ನು ಫಾಲೋ ಮಾಡ್ಕೊಂಡು ಬಂದ ಕಾಮುಕನೊಬ್ಬ ಆಕೆಗೆ ಭಯ ಬೀಳಿಸಿದ್ದಾನೆ. ಕ್ಷಣಕ್ಷಣಕ್ಕೂ ಭಯಬಿದ್ದ ಆ ಬಾಲಕಿ ಓಡಿ ಬಂದು ಮನೆ ಸೇರಿದ್ದು ಕಾಮುಕನಿಗಾಗಿ ಪೊಲೀಸರು ಹುಡುಕಾಟವನ್ನು ನಡೆಸುತ್ತಿದ್ದಾರೆ.

ಯಾವ್ಯಾವ ವಯಸ್ಸಲ್ಲಿ ಏನೇನ್ ಮಾಡ್ಬೇಕೋ ಅದನ್ನೆ ಮಾಡ್ಬೇಕು. ತಾನಾಯ್ತು ತನ್ನ ದೇವಸ್ಥಾನವಾಯ್ತು ಅಂತ ಆ ಸುರೇಶ್ ಇದ್ದಿದ್ರೆ ಇವತ್ತು ಬೀದಿ ಹೆಣವಾಗಿ ತನ್ನ ಫ್ಯಾಮಿಲಿ ಸಂಕಷ್ಟಕ್ಕೀಡಾಗ್ತಾ ಇರ್ಲಿಲ್ಲ. ನೋಡುದ್ರಲ್ಲಾ ಬೆಳಗಾವಿಯಲ್ಲಿ ಅಪ್ರಾಪ್ತೆ ಹಿಂದೆ ಬಿದ್ದು ಬಾಳಿ ಬದುಕಬೇಕಾದ ಯುವಕ ಬೀದಿ ಹೆಣವಾಗಿ ಹೋದ್ರೆ, ಇತ್ತ ಬಾಲಾಕಿ ಫಾಲೋ ಮಾಡಿದ ರೋಡ್ ರಾಕ್ಷಸನಿಗಾಗಿ ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸರು ಬಲೆ ಬೀಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ: