ಅಮ್ಮನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸೇಡು ತೀರಿಸಿಕೊಂಡ UPSC aspirant ಮಗ
ಹಲವು ವರ್ಷಗಳ ಹಿಂದೆ ಅಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿ ಹಾಗೂ ಆತನ ಪತ್ನಿಯನ್ನು ಮಹಿಳೆಯ ಪುತ್ರ ಗುದ್ದಲಿಯಿಂದ ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪುಣೆ: ಹಲವು ವರ್ಷಗಳ ಹಿಂದೆ ಅಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿ ಹಾಗೂ ಆತನ ಪತ್ನಿಯನ್ನು ಮಹಿಳೆಯ ಪುತ್ರ ಗುದ್ದಲಿಯಿಂದ ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಪುಣೆಯ ದಪೊಡಿ (Dapodi)ಎಂಬಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 32 ವರ್ಷ ಪ್ರಾಯದ ಪ್ರಸನ್ನ ಮುರುಗುಟ್ಕರ್(Prasanna Murgutkar) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 60 ವರ್ಷದ ಶಂಕರ್ ಕಾಟೆ (Shankar Kate)ಹಾಗೂ ಈತನ ಪತ್ನಿ 55 ವರ್ಷದ ಸಂಗೀತಾ (Sangeeta)ಕೊಲೆಯಾದವರು.
ಪುಣೆಯ ದಪೊಡಿಯಲ್ಲಿರುವ ದಂಪತಿ ವಾಸವಿದ್ದ ಮಹದೇವ್ ಅಲಿ ಹೆಸರಿನ ನಿವಾಸದಲ್ಲಿಯೇ ಶನಿವಾರ ಈ ಹತ್ಯೆ ನಡೆದಿದೆ. ಗುದ್ದಲಿ ಹಿಡಿದುಕೊಂಡು ಅವರ ಮನೆಗೆ ಬಂದ ಪ್ರಸನ್ನ ಮನೆಯಲ್ಲಿ ಕುಳಿತಿದ್ದ ದಂಪತಿಗಳಿಬ್ಬರನ್ನು ಗುದ್ದಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ರಕ್ತಸಿಕ್ತ ಗುದ್ದಲಿಯನ್ನು ಹಿಡಿದುಕೊಂಡು ಮನೆಯಿಂದ ಹೊರ ನಡೆದಿದ್ದಾನೆ. ಇದನ್ನು ಗಮನಿಸಿದ ಸುತ್ತಮುತ್ತಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೇ, ಓಡಲು ಯತ್ನಿಸಿದ್ದ ಪ್ರಸನ್ನನ್ನು ಪೊಲೀಸರು ಬರುವವರೆಗೆ ಗಟ್ಟಿಯಾಗಿ ಹಿಡಿದುಕೊಂಡ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಳೇ ಬಾಯ್‌ಫ್ರೆಂಡ್‌ಗಳನ್ನೆಲ್ಲಾ ಮದ್ವೆಗೆ ಕರೆದು ಅವಮಾನಿಸಿದ ವಧು... ವಿಡಿಯೋ ವೈರಲ್
ಗುದ್ದಲಿಯಿಂದ ಹಲ್ಲೆ ನಡೆಸಿದ ಪರಿಣಾಮ ದಂಪತಿ ತೀವ್ರ ಗಾಯೊಂಡು ಸಾವನ್ನಪ್ಪಿದ್ದಾರೆ ಘಟನೆಗೆ ಸಂಬಂಧಿಸಿದಂತೆ ಭೋಸರಿ(Bhosari) ಪೊಲೀಸರು ಭಾನುವಾರ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪ್ರಸನ್ನ ಮುರುಗುಟ್ಕರ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆತ ತಾಯಿಯ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಕೃತ್ಯವೆಸಗಿದ್ದಾಗಿ ಹೇಳಿದ್ದಾನೆ.
ಘಟನೆ ಹಿನ್ನೆಲೆ
2015ರಿಂದ 2017ರವರೆಗೆ ಪ್ರಸನ್ನ ಮುರುಗಟ್ಕರ್ ಹಾಗೂ ಆತನ ತಾಯಿ ಕೊಲೆಯಾದ ಶಂಕರ್ ಕಾಟೆಯ ಬಾಡಿಗೆ ಮನೆಯಲ್ಲಿ ಈ ಹಿಂದೆ ವಾಸವಿದ್ದರು. ಈ ವೇಳೆ ಶಂಕರ್ ಕಾಟೆ ಪ್ರಸನ್ನ ತಾಯಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ. ಈ ವಿಚಾರವನ್ನು 2019ರಲ್ಲಿ ಸಾವಿಗೂ ಮುನ್ನ ತಾಯಿ ಮಗನಿಗೆ ಹೇಳಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಪ್ರಸನ್ನ ಶಂಕರ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ. ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ (UPSC aspirant) ನಡೆಸುತ್ತಿದ್ದ ಪ್ರಸನ್ನ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದ. ಯುಪಿಎಸ್‌ಸಿ ಸಿದ್ಧತೆ ಹಿನ್ನೆಲೆಯಲ್ಲಿ ಪ್ರಸ್ತುತ ದೆಹಲಿಯಲ್ಲಿ ವಾಸವಿದ್ದ ಆತ ಶಂಕರ್ ಕಾಟೆ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿಯೇ ದೆಹಲಿಯಿಂದ ಪುಣೆಗೆ ಬಂದಿದ್ದ. ಶನಿವಾರ ರಾತ್ರಿ ದಪೊಡಿಯಲ್ಲಿರುವ ಶಂಕರ್ ನಿವಾಸಕ್ಕೆ ಗುದ್ದಲಿ ಹಿಡಿದುಕೊಂಡು ಬಂದ ಆತ ದಂಪತಿ ತಲೆಗೆ ಗುದ್ದಲಿಯಿಂದ ಹೊಡೆದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ. ಆದರೆ ಈತ ರಕ್ತಸಿಕ್ತ ಗುದ್ದಲಿ ಹಿಡಿದುಕೊಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದನ್ನು ನೋಡಿದ ಸುತ್ತಮುತ್ತಲ ಜನರು ಆತನನ್ನು ಹಿಡಿದು ಪೊಲೀಸರಿಗೆ ನೀಡಿದ್ದರು.
ಮಗನ ಸಾವಿಗೆ ಇಷ್ಟೊಂದು ದೊಡ್ಡ ಸೇಡು: ಭೀಮಾ ನದಿಯಲ್ಲಿ 7 ಜನರ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್