ಮಗನ ಸಾವಿಗೆ ಇಷ್ಟೊಂದು ದೊಡ್ಡ ಸೇಡು: ಭೀಮಾ ನದಿಯಲ್ಲಿ 7 ಜನರ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್

ಪುಣೆಯಲ್ಲಿ ನದಿಯಲ್ಲಿ ಒಂದೇ ಕುಟುಂಬದ 7 ಜನರ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೃತರ ಐವರು ಸಂಬಂಧಿಕರನ್ನು ಬಂಧಿಸಿದ್ದಾರೆ.

Twist in the case of dead bodies of 7 members of the same family in Bhima river: arrest of five murder accused in maharashtra akb

ಪುಣೆ: ಪುಣೆಯಲ್ಲಿ ನದಿಯಲ್ಲಿ ಒಂದೇ ಕುಟುಂಬದ 7 ಜನರ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೃತರ ಐವರು ಸಂಬಂಧಿಕರನ್ನು ಬಂಧಿಸಿದ್ದಾರೆ. ನದಿಯಲ್ಲಿ ಒಂದೇ ಕುಟುಂಬದ 7 ಜನರ ಶವ ಪತ್ತೆಯಾದಾಗ ಮೊದಲಿಗೆ  ಇದನ್ನು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಪ್ರಕರಣ ಎಂದು ತಿಳಿಯಲಾಗಿತ್ತು. ಆದರೆ 7 ಜನರನ್ನು ಕೂಡ ಕೊಲೆ ಮಾಡಿ ನದಿಗೆ ಎಸೆಯಲಾಗಿದೆ ಎಂಬ ಭಯಾನಕ ಸತ್ಯ ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. 

ಮೃತರ ಸಂಬಂಧಿಕರೇ ಇವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು 45 ವರ್ಷ ಪ್ರಾಯದ ಮೋಹನ್ ಪವಾರ್, ಆತನ ಪತ್ನಿ 40 ವರ್ಷ ಪ್ರಾಯದ ಸಂಗೀತಾ ಮೋಹನ್(Sangita Mohan), ಈ ದಂಪತಿಯ ಮಗಳಾದ 24 ವರ್ಷ ಪ್ರಾಯದ ರಾಣಿ ಪುಲ್ವಾರೆ(  (Rani Fulware) ಅಳಿಯ 28 ವರ್ಷದ ಶ್ಯಾಮ್ ಪುಲ್ವಾರೆ ಹಾಗೂ ಮೂರರಿಂದ  7 ವರ್ಷ ಪ್ರಾಯದ ಮೂವರು ಮಕ್ಕಳ ಶವ ಭೀಮಾ ನದಿಯಲ್ಲಿ ಪತ್ತೆಯಾಗಿತ್ತು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಡುವಾಂಡ್ ತಹಸಿಲಲ್ ಪರ್ಗಾಂವ್ ಸೇತುವೆಯ ವ್ಯಾಪ್ತಿಯಲ್ಲಿ ಬರುವ ಭೀಮಾನದಿ ಪಾತ್ರದಲ್ಲಿ  ಜನವರಿ 24 ರಂದು ಒಟ್ಟು 7 ಜನರ ಶವ ಪತ್ತೆಯಾಗಿತ್ತು. 

Honor Killing: ವರ್ಷ ತುಂಬುವುದರೊಳಗೆ ಮಗಳನ್ನು ವಿಧವೆ ಮಾಡಿದ ಕ್ರೂರಿ ಅಪ್ಪ: ಮರ್ಯಾದಾ ಹತ್ಯೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಸಂಬಂಧಿಕರನ್ನು ಬಂಧಿಸಿದ್ದಾರೆ. ಅಶೋಕ್ ಕಲ್ಯಾಣ್ ಪವಾರ್ (Ashok Kalyan Pawar),  ಶ್ಯಾಮ್ ಕಲ್ಯಾಣ್ ಪವಾರ್, ಶಂಕರ್ ಕಲ್ಯಾಣ್ ಪವಾರ್(Shankar Kalyan Pawar), ಪ್ರಕಾಶ್ ಕಲ್ಯಾಣ್ ಪವಾರ್ (Prakash Kalyan Pawar) ಹಾಗೂ ಕಾಂತಾಬಾಯ್ ಸರ್ಜೆರಾವ್ ಜಾಧವ್ ಬಂಧಿತರಾಗಿದ್ದು, ಇವರು ಮೋಹನ್ ಪವಾರ್ ಅವರ ಕಸಿನ್‌ಗಳಾಗಿದ್ದಾರೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಪುಣೆಯ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ (Ankit Goyal) ಮಾತನಾಡಿ, ತನಿಖೆಯ ಸಮಯದಲ್ಲಿ, ಸತ್ತವರೆಲ್ಲರನ್ನು ಕೊಲೆ ಮಾಡಲಾಗಿದೆ ಎಂದು ಸೂಚಿಸುವ ಕೆಲವು ಸಂಗತಿಗಳು ಮುನ್ನೆಲೆಗೆ ಬಂದವು. ಪ್ರಮುಖ ಆರೋಪಿ ಅಶೋಕ್ ಪವಾರ್ ಅವರ ಪುತ್ರ ಧನಂಜಯ್ ಪವಾರ್ ಕೆಲವು ತಿಂಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ ಮತ್ತು ಪುಣೆ ನಗರದಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು. 

Crime News: ಬೆಂಗಳೂರಿನಲ್ಲಿ ಡಬಲ್ ಮರ್ಡರ್: ಆ ಎರಡು ಕೊಲೆಗೆ ಕಾರಣ ಅದೊಂದು ಸೇಡು..?

ಪ್ರಾಥಮಿಕ ತನಿಖೆಯು ಆರೋಪಿ ಅಶೋಕ್ (Ashok) ತನ್ನ ಮಗನ ಸಾವಿನಿಂದ ಕೋಪಗೊಂಡಿದ್ದ ಅಲ್ಲದೇ ತನ್ನ ಮಗ ಧನಂಜಯ್ ಸಾವಿಗೆ ಮೋಹನ್ ಅವರ ಮಗನೇ ಹೊಣೆಗಾರ ಎಂದು ಭಾವಿಸಿಕೊಂಡು ಇದಕ್ಕಾಗಿ ಸೇಡು ತೀರಿಸಲು ಮುಂದಾಗಿದ್ದ. ತನ್ನ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ಅಶೋಕ್ ಇಡೀ ಕುಟುಂಬವನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ಹೇಳಿದ್ದಾರೆ. ಎಲ್ಲಾ ಐವರು ಆರೋಪಿಗಳನ್ನು ಅಹ್ಮದ್‌ನಗರ ಜಿಲ್ಲೆಯ ಪರ್ನರ್ ತಹಸಿಲ್‌ನಿಂದ (Parner tehsil) ಬಂಧಿಸಲಾಗಿದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 120 ಬಿ (ಅಪರಾಧ ಸಂಚು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಏಳು ಶವಗಳು ಭೀಮಾ ನದಿಪಾತ್ರದಲ್ಲಿ ಪರಸ್ಪರ 200 ರಿಂದ 300 ಮೀಟರ್ ದೂರದಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ಮೊದಲು ತಿಳಿಸಿದ್ದಾರೆ. ನಾಲ್ಕು ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿಗೆ ನೀರಿನಲ್ಲಿ ಮುಳುಗಿದ್ದು ಕಾರಣ ಎಂದು ತಿಳಿದು ಬಂದಿದೆ.  ಮೃತರು ಮರಾಠವಾಡ (Marathwada region) ಪ್ರದೇಶದ ಬೀಡ್ (Beed) ಮತ್ತು ಉಸ್ಮಾನಾಬಾದ್ (Osmanabad) ಜಿಲ್ಲೆಯವರಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ 7 ಜನರ ಶವಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಐವರು ಕೊಲೆ ಆರೋಪಿಗಳ ಬಂಧನ

Latest Videos
Follow Us:
Download App:
  • android
  • ios