ಹಳೇ ಬಾಯ್‌ಫ್ರೆಂಡ್‌ಗಳನ್ನೆಲ್ಲಾ ಮದ್ವೆಗೆ ಕರೆದು ಅವಮಾನಿಸಿದ ವಧು... ವಿಡಿಯೋ ವೈರಲ್

 ಆದರೆ ಚೀನಾದಲ್ಲಿ ಒಬ್ಬಳು ವಧು ತನ್ನ ಮಾಜಿ ಗೆಳೆಯರನ್ನೆಲ್ಲಾ ತನ್ನ ಮದುವೆಗೆ ಕರೆದು ಅವರಿಗೆ ಸರಿಯಾಗಿ ಅವಮಾನಿಸಿ ಸೇಡು ತೀರಿಸಿಕೊಂಡಿದ್ದಾಳೆ. ಚೀನಾದ  ಹುಬೈ ಪ್ರಾಂತ್ಯದಲ್ಲಿ ಜನವರಿ 8 ರಂದು ಈ ಘಟನೆ ನಡೆದಿದೆ ಎಂದು ನ್ಯೂಯಾರ್ಕ್‌ ಟೈಮ್ಸ್ ವರದಿ ಮಾಡಿದೆ.

China bride called all her ex boyfriends to her wedding and insulted them in marriage ceremony akb

ಚೀನಾ: ಪ್ರೀತಿಯಲ್ಲಿರುವಾಗ ಎಲ್ಲವೂ ಚೆಂದ ಆದರೆ ಪ್ರೇಮ ಕೈಕೊಟ್ಟರೆ ಕೆಲವರಿಗೆ ಬದುಕೇ ಅಂಧಾಕಾರವಾಗುತ್ತದೆ.  ಪ್ರೇಮಿಸುವ ವೇಳೆ ಪ್ರಪಂಚವನ್ನೇ ಮರೆಯುವ ಪ್ರೇಮಿಗಳು ಪ್ರೇಮ ವಿಫಲವಾಗುತ್ತಿದ್ದಂತೆ ರೆಕ್ಕೆ ಮುರಿದ ಹಕ್ಕಿಗಳಂತೆ ವಿಲ ವಿಲನೇ ಒದ್ದಾಡಲು ಶುರು ಮಾಡುತ್ತಾರೆ. ಮತ್ತೆ ಕೆಲವು ಪ್ರೇಮಿಗಳು ದೂರದ ನಂತರ ಪ್ರೀತಿಯ ಮೂರು ಪಾಲು ದ್ವೇಷಿಸಲು ಹೋಗುತ್ತಾರೆ. ಇನ್ನೂ ಕೆಲವರು ತಮ್ಮ ಮಾಜಿ ಪ್ರೇಮಿಯವ  ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ ತಮ್ಮ ಮಾಜಿ ಪ್ರೇಮಿಗಳನ್ನು ಯಾರೂ ತಮ್ಮ ಮದುವೆಗೆ ಕರೆಯುವುದಿಲ್ಲ. ಕೆಲವರು ಕರೆದರು ಹೋಗುವವರು ಯಾರೂ ಇರುವುದಿಲ್ಲ.  ಆದರೆ ಚೀನಾದಲ್ಲಿ ಒಬ್ಬಳು ವಧು ತನ್ನ ಮಾಜಿ ಗೆಳೆಯರನ್ನೆಲ್ಲಾ ತನ್ನ ಮದುವೆಗೆ ಕರೆದು ಅವರಿಗೆ ಸರಿಯಾಗಿ ಅವಮಾನಿಸಿ ಸೇಡು ತೀರಿಸಿಕೊಂಡಿದ್ದಾಳೆ. ಚೀನಾದ  ಹುಬೈ ಪ್ರಾಂತ್ಯದಲ್ಲಿ ಜನವರಿ 8 ರಂದು ಈ ಘಟನೆ ನಡೆದಿದೆ ಎಂದು ನ್ಯೂಯಾರ್ಕ್‌ ಟೈಮ್ಸ್ ವರದಿ ಮಾಡಿದೆ.

ಈ ಅಪರೂಪದ ಘಟನೆ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಇದನ್ನು ಚೀನಾದ ಅತೀ ದೊಡ್ಡ ಸಾಮಾಜಿಕ ಜಾಲತಾಣ (Social Media) Weiboದಲ್ಲಿ ಪೋಸ್ಟ್ ಮಾಡಲಾಗಿದೆ.  ಈ ವೈರಲ್ ವಿಡಿಯೋವನ್ನು 2.91 ಮಿಲಿಯನ್ ಜನ ವೀಕ್ಷಿಸಿದ್ದಾರಂತೆ.  ಹೀಗೆ ತನ್ನ ಮಾಜಿ ಗೆಳೆಯರನ್ನೆಲ್ಲಾ ಮದುವೆಗೆ ಕರೆದ ಆಕೆ ಅವರನ್ನು ಎಕ್ಸ್ ಬಾಯ್‌ಫ್ರೆಂಡ್ ಟೇಬಲ್ (Ex Boyfriend Table) ಎಂದು ಮೀಸಲು ಮಾಡಿದ ಟೇಬಲ್ ಮೇಲೆ ಎಲ್ಲರನ್ನೂ ಜೊತೆಯಾಗಿಯೇ ಕೂರುವಂತೆ ಮಾಡಿದ್ದಾಳೆ.  ವೈರಲ್ ಆದ ವಿಡಿಯೋದಲ್ಲಿ ಈ ಟೇಬಲ್‌ನಲ್ಲಿ ಐವರು ಯುವಕರು ಹಾಗೂ ಇಬ್ಬರು ಯುವತಿಯರು ಕುಳಿತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಬೇಸರದಿಂದ ಒಬ್ಬರಿಗೊಬ್ಬರು ವೈನ್ ಬಾಟಲ್‌ನ್ನು ಪಾಸ್ ಮಾಡುತ್ತಿರುವುದು ಕಾಣುತ್ತಿದೆ. 

Crime News: ಬೆಂಗಳೂರಿನಲ್ಲಿ ಡಬಲ್ ಮರ್ಡರ್: ಆ ಎರಡು ಕೊಲೆಗೆ ಕಾರಣ ಅದೊಂದು ಸೇಡು..?

ಆದರೆ ಮದುವೆಗೆ ಬಂದವರು ಮಾತ್ರ ಇದನ್ನು ಅಚ್ಚರಿಯಿಂದ ನೋಡಿದ್ದಲ್ಲದೇ ವಧುವಿನೊಂದಿಗೆ ಹೀಗೇತಕೆ ಮಾಡಿದೆ ಎಂದು ಕೇಳುತ್ತಾರೆ.  ಈ ವೇಳೆ ತನ್ನ ಮಾಜಿ ಬಾಯ್‌ಫ್ರೆಂಡ್‌ಗಳು ತಮ್ಮ ಜೀವನದಲ್ಲಿ ಏನನ್ನು ಮಿಸ್ ಮಾಡಿದರು ಎಂದು ಅವರಿಗೆ ಅರಿವು ಮೂಡಿಸುವುದಕ್ಕೆ  ಹೀಗೆ ಮಾಡಿದೆ ಎಂದು ಈಕೆ ಹೇಳಿದ್ದಾಳೆ.  ತನ್ನ ಎಕ್‌ ಬಾಯ್‌ಫ್ರೆಂಡ್‌ಗಳನ್ನೆಲ್ಲಾ ಜೊತೆಗೆ ಕೂರಿಸಿದ ವಧು ನಂತರ ಅವರು ಕುಳಿತಿದ್ದ ದುಂಡು ಮೇಜಿನಲ್ಲಿ ಚೈನೀಸ್ ಭಾಷೆಯಲ್ಲಿ (Chinese Language) ಎಕ್ಸ್ ಬಾಯ್‌ಫ್ರೆಂಡ್‌ಗಳ ಟೇಬಲ್ ಎಂದು ಬರೆದಿದ್ದ ಲೇಬಲ್‌ ಇರುವ ನಾಮಫಲಕವನ್ನು ತಂದಿರಿಸಿದ್ದಾಳೆ. ಈ ವಿಚಾರವೀಗ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಫಿಕ್ ಆಗಿದ್ದು, ಜನ ವಿಡಿಯೋ ನೋಡಿ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ಕೆಲವರು ಅದು ಹೇಗೆ ವಧು ತನ್ನ ಎಲ್ಲಾ ಹಳೆ ಬಾಯ್‌ಫ್ರೆಂಡ್‌ಗಳನ್ನು (Boyfriend) ಜೊತೆಯಾಗಿ ಕರೆಸಿದಳು ಎಂದು ಪ್ರಶ್ನಿಸಿದ್ದಾರೆ.  ಇಷ್ಟೆಲ್ಲಾ ಮಾಡಿದ ಮೇಲೆ ಈಕೆಯ ಮದುವೆಯಾಗುವವ ಹೇಗಿದ್ದಾನೆಂದು ಗೆಸ್ ಮಾಡಬೇಕಾಗಿಲ್ಲ ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಬಾಯ್‌ಫ್ರೆಂಡ್‌ಗಳನ್ನೆಲ್ಲಾ ಮದುವೆಗೆ ಕರೆಸಿದ ಆಕೆಯ ಧೈರ್ಯವನ್ನು ಮೆಚ್ಚಬೇಕು ಎಂದು ಒಬ್ಬ ಕಾಮೆಂಟ್ ಮಾಡಿದರೆ, ಮತ್ತೊಬ್ಬ ಆಕೆ ಕರೆದಳೆಂದು ಇವರು ಹೇಗೆ ಹೋದರು ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ  ಈ ವಿಡಿಯೋ ನೋಡುಗರಿಗೆ ಮಜಾ ನೀಡಿದ್ದು, ಸೇಡು ತೀರಿಸಿಕೊಳ್ಳಲು ಬಯಸುವವರಿಗೆ ಈಕೆ ಸ್ಪೂರ್ತಿಯಾಗಿದ್ದಾಳೆ. 

Honor Killing: ವರ್ಷ ತುಂಬುವುದರೊಳಗೆ ಮಗಳನ್ನು ವಿಧವೆ ಮಾಡಿದ ಕ್ರೂರಿ ಅಪ್ಪ: ಮರ್ಯಾದಾ ಹತ್ಯೆ

 

Latest Videos
Follow Us:
Download App:
  • android
  • ios