ವಾಕಿಂಗ್ ಹೊರಟಿದ್ದ ವೃದ್ದೆಯೊಬ್ಬರ ತಲೆಗೆ ಹೊಡೆದು ಆಕೆಯ ಮೈ ಮೇಲೆ ಇದ್ದ ಚಿನ್ನಾಭರಣವನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಪುಣೆ: ವಯೋವೃದ್ಧರಿಗೆ ಮಹಾನಗರಿಗಳು ಸುರಕ್ಷಿತ ಅಲ್ಲ ಎಂಬುದನ್ನು ಸಾಬೀತುಪಡಿಸುವ ಹಲವು ಅಪರಾಧಿ ಘಟನೆಗಳು ದೇಶದ ಮಹಾನಗರಗಳಲ್ಲಿ ಆಗಾಗ ನಡೆಯುತ್ತಲೇ ಇವೆ. ಈಗ ಮಹಾರಾಷ್ಟ್ರದ ಐಟಿ ಹಬ್ ಎನಿಸಿರುವ ಪುಣೆಯಲ್ಲಿ ಚಿನ್ನಾಭರಣಕ್ಕಾಗಿ ವೃದ್ದೆಯೊರ್ವರನ್ನು ತಲೆಗೆ ಹೊಡೆದು ಕೊಲೆ ಮಾಡಿ ಆಭರಣದೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮೃತ ಮಹಿಳೆಯನ್ನು 85 ವರ್ಷ ಪ್ರಾಯದ ತಾನಾಬಾಯಿ ಯೆಳವಂಡೆ (Tanabai Yelwande) ಎಂದು ಗುರುತಿಸಲಾಗಿದೆ.
ಪುಣೆ ಜಿಲ್ಲೆಯ (Pune district) ಖೇಡ್ ತಾಲೂಕಿನ ( Khed taluka) ಮೋಯಿ ಗ್ರಾಮದಲ್ಲಿ (Moi village) ಮುಂಜಾನೆ ವಾಯು ವಿಹಾರಕ್ಕೆ ಆಗಮಿಸಿದ್ದ 85 ವರ್ಷದ ಮಹಿಳೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ದಾಳಿ ನಡೆಸಿ ಆಕೆಯ ಮೈ ಮೇಲಿದ್ದ 60,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ರಸ್ತೆಬದಿಯಲ್ಲಿ ಆಕೆಯನ್ನು ಬಿಟ್ಟು ಹೋಗಿದ್ದಾರೆ. ಹರಿತವಾದ ಆಯುಧದಿಂದ ದಾಳಿ ನಡೆಸಿದ ಪರಿಣಾಮ ವೃದ್ಧೆಯ ತಲೆಗೆ ಗಂಭೀರ ಗಾಯವಾಗಿದ್ದು, ವೃದ್ಧೆ ಸಾವನ್ನಪ್ಪಿದ್ದಾರೆ.
ದಾಳಿ ನಡೆಸಿದ ಚಿರತೆಯನ್ನು ವಾಕಿಂಗ್ ಸ್ಟಿಕ್‌ನಿಂದ ಓಡಿಸಿದ ಮಹಿಳೆ, ಶಾಕಿಂಗ್ ವಿಡಿಯೋ ವೈರಲ್!
ಪೊಲೀಸರ ಪ್ರಕಾರ, ಮೊಯಿ ಗ್ರಾಮದ ನಿವಾಸಿ ತಾನಾಬಾಯಿ ಯೆಲ್ವಾಂಡೆ ಮುಂಜಾನೆ ತನ್ನ ನಿವಾಸದಿಂದ ಬೆಳಗ್ಗಿನ ವಾಯು ವಿಹಾರಕ್ಕೆ ಹೊರಟು ಹೋಗಿದ್ದಾರೆ. ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ತಲೆಗೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದಾನೆ. ತಾನಾಬಾಯಿ ಪ್ರಜ್ಞೆ ತಪ್ಪಿದ ನಂತರ, ದುಷ್ಕರ್ಮಿಯು ಆಕೆಯ ದೇಹವನ್ನು ರಸ್ತೆಬದಿಯಲ್ಲಿ ಎಸೆದು ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಪುಣೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ.
ಬೆಂಗ್ಳೂರು; ಕುತ್ತಿಗೆಯನ್ನೇ ಸೀಳಿದ ಮಹಿಳೆ ಜತೆ ವಾಕಿಂಗ್ ಬಂದಿದ್ದ ಪಿಟ್ ಬುಲ್ , ಪ್ರಾಣ ಹೋಯ್ತು!
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 394 (ದರೋಡೆ ಮಾಡುವಲ್ಲಿ ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು) ಮತ್ತು 201 (ಅಪರಾಧದ ಸಾಕ್ಷ್ಯಾಧಾರಗಳನ್ನು ಕಣ್ಮರೆಯಾಗುವಂತೆ ಮಾಡುವುದು ಅಥವಾ ಅಪರಾಧಕ್ಕಾಗಿ ತಪ್ಪು ಮಾಹಿತಿ ನೀಡುವುದು) ಈ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ದಶರತ್ ವಾಘಮೋಡೆ (Dashrath Waghmode) ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಾಕಿಂಗ್ ಹೋಗುವ ಒಂಟಿ ಮಹಿಳೆಯರು ವೃದ್ಧರು ವೃದ್ಧೆಯರೇ ಕಳ್ಳರ ಟಾರ್ಗೆಟ್ ಆಗಿದ್ದು, ಈ ಹಿಂದೆಯೂ ಇಂತಹ ಹಲವು ಘಟನೆಗಳು ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ನಡೆದಿದೆ.
