ದಾಳಿ ನಡೆಸಿದ ಚಿರತೆಯನ್ನು ವಾಕಿಂಗ್ ಸ್ಟಿಕ್‌ನಿಂದ ಓಡಿಸಿದ ಮಹಿಳೆ, ಶಾಕಿಂಗ್ ವಿಡಿಯೋ ವೈರಲ್!
* ಮುಂಬೈನಲ್ಲಿ ಮಹಿಳೆ ಮೇಲೆ ಚಿರತೆ ದಾಳಿ
* ದಾಳಿ ನಡೆಸಿದ ಚಿರತೆಯನ್ನು ವಾಕಿಂಗ್ ಸ್ಟಿಕ್ ಮೂಲಕ ಎದುರಿಸಿದ ಗಟ್ಟಿಗಿತ್ತಿ
* ದಾಳಿ ವೇಳೆ ಮಹಿಳೆಗೆ ಸಣ್ಣ ಪುಟ್ಟ ಗಾಯ
* ವೈರಲ್ ಆಯ್ತು ದಾಳಿಯ ಶಾಕಿಂಗ್ ವಿಡಿಯೋ
ಮುಂಬೈ(ಸೆ.30): ಮುಂಬೈನ ಅರೆ ಮಿಲ್ಕ್ ಕಾಲೋನಿಯಲ್ಲಿ(Aarey Milk Colony) ಮಹಿಳೆಯೊಬ್ಬಳ ಮೇಲೆ ಚಿರತೆಯೊಂದು(Leopard) ನಡೆಸಿದ ದಾಳಿಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ(Social Media) ವೈರಲ್ ಆಗಿದೆ. ತನ್ನ ಮೇಲೆರಗಿದ ಚಿರತೆಯನ್ನು ಕೈಯ್ಯಲ್ಲಿದ್ದ ವಾಕಿಂಗ್ ಸ್ಟಿಕ್(walking Stick) ಬಳಸಿ ಓಡಿಸುವ ಮೂಲಕ ಮಹಿಳೆ ತನ್ನ ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಕಳೆದೊಂದು ತಿಂಗಳಲ್ಲಿ ಈ ಪ್ರದೇಶದಲ್ಲಿ ವರದಿಯಾದ ನಾಲ್ಕನೇ ಚಿರತೆ ದಾಳಿ ಇದಾಗಿದ್ದು, ಎಲ್ಲವೂ ಒಂದೇ ಚಿರತೆ ನಡೆಸಿರಬಹುದೆಂದು ಅರಣ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ.
ದಾಳಿ ಮಾಡಿದ ಚಿರತೆ ಕೊಂದು ಪ್ರಾಣ ರಕ್ಷಿಸಿಕೊಂಡ ತಂದೆ, ಮಗ
ಮುಂಬೈನ ಆರೆ ಕಾಲೋನಿಯಲ್ಲಿ ಬುಧವಾರ ಸಂಜೆ ಸುಮಾರು 7.45ಕ್ಕೆ ಘಟನೆ ನಡೆದಿದೆ. ಮಹಿಳೆಯನ್ನು 55 ವರ್ಷದ ನಿರ್ಮಲಾ ದೇವಿ ಸಿಂಗ್(Nirmaladevi Rambadan Singh) ಎಂದು ಗುರುತಿಸಲಾಗಿದೆ. ಸಂಜೆ ವೇಳೆ ನಿರ್ಮಲಾ ಸಿಂಗ್ ಮನೆ ಎದುರಿಗಿದ್ದ ಕಟ್ಟೆ ಮೇಲೆ ಕುಳಿತಿದ್ದರು. ಈ ವೇಳೆ ಚಿರತೆ ದಾಳಿ ನಡೆಸಿದೆ. ದೂರದಲ್ಲಿ ಯಾವುದೋ ಪ್ರಾಣಿ ನಿಂತಿದೆ ಎಂದು ಅರಿತುಕೊಂಡಿದ್ದ ನಿರ್ಮಲಾ ತಮ್ಮ ವಾಕಿಂಗ್ ಸ್ಟಿಕ್ ಹಿಡಿದು ಮನೆಯತ್ತ ಹೆಜ್ಜೆ ಹಾಕಿದ್ದರು. ಅಷ್ಟರಲ್ಲೇ ಚಿರತೆ ಮಹಿಳೆ ಮೇಳೆ ದಾಳಿ ನಡೆಸಿದೆ.
ಪ್ರಾಣ ಉಳಿಸಲು ವಾಕಿಂಗ್ ಸ್ಟಿಕ್ ಸಹಾಯ
ದಾಳಿ ನಡೆಸಿದ ಚಿರತೆಯಿಂದ ಪ್ರಾಣ ಉಳಿಸಿಕೊಳ್ಳಲು ಮಹಿಳೆ ವಾಕಿಂಗ್ ಸ್ಟಿಕ್ ಬಳಸಿದ್ದಾರೆ. ಚಿರತೆಯನ್ನು ಕೋಲಿನಿಂದ ದೂರಕ್ಕೆ ತಳ್ಳಿ ಅಲ್ಲಿಂದ ಓಡಿ ಹೋಗಿದ್ದಾರೆ. ಚಿರತೆ ದಾಳಿಯಿಂದ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ದಾಳಿ ವೇಳೆ ಮಹಿಳೆ ಕಿರುಚಾಡುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ.
ತುಮಕೂರಲ್ಲಿ ಚಿರತೆ ದಾಳಿ : 14 ಮೇಕೆ, 4 ಕುರಿ ಸಾವು
ಮಗುವಿನ ಮೇಲೂ ನಡೆದಿತ್ತು ದಾಳಿ
ಎರಡು ದಿನಗಳ ಹಿಂದೆಯಷ್ಟೇ ಮನೆಯ ಹೊರಗೆ ಆಟವಾಡುತ್ತಿದ್ದ 4 ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ ಸುದ್ದಿ ಬೆಳಕಿಗೆ ಬಂದಿತ್ತು. ಅದೃಷ್ಟವಶಾತ್ ತಕ್ಷಣ ಸ್ಥಳೀಯರು ಧಾವಿಸಿ ಮಗುವನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದರು. ಇದೀಗ ಇಂತಹುದೇ ಮತ್ತೊಂದು ಘಟನೆ ನಡೆದಿರುವ ವಿಷಯ ತಿಳಿದು ಬಂದಿದೆ.