ಬೆಂಗ್ಳೂರು; ಕುತ್ತಿಗೆಯನ್ನೇ ಸೀಳಿದ ಮಹಿಳೆ ಜತೆ ವಾಕಿಂಗ್ ಬಂದಿದ್ದ ಪಿಟ್ ಬುಲ್ , ಪ್ರಾಣ ಹೋಯ್ತು!
* ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಕುತ್ತಿಗೆಗೆ ಬಾಯಿ ಹಾಕಿದ ನಾಯಿ
* ಬೆಂಗಳೂರು ಯಲಹಂಕ ನ್ಯೂ ಟೌನ್ ಪೊಲೀಸ್ ವ್ಯಾಪ್ತಿಯ ಅಟ್ಟೂರು ಲೇಔಟ್ ನಲ್ಲಿ ಘಟನೆ
* ನಾಯಿ ದಾಳಿಗೆ ಸ್ಥಳದಲ್ಲೇ ಮೃತಪಟ್ಟ ನರಸಿಂಹ
* ನಾಯಿ ವಾಕಿಂಗ್ ಕರೆದುಕೊಂಡು ಬಂದಿದ್ದ ಪಕ್ಕದ ಮನೆಯ ಲೇಡಿ
ಬೆಂಗಳೂರು(ಮೇ 11) ಶ್ವಾನ ಸಾಕುವುದು ಒಂದು ಫ್ಯಾಷನ್ ಆಗಿ ದಶಕಗಳೆ ಕಳೆದಿವೆ. ಈ ಶ್ವಾನ ಒಬ್ಬ ವ್ಯಕ್ತಿಯ ಪ್ರಾಣವನ್ನೇ ಬಲಿಪಡೆದಿದೆ.
ಬೆಂಗಳೂರು ಯಲಹಂಕ ನ್ಯೂ ಟೌನ್ ಪೊಲೀಸ್ ವ್ಯಾಪ್ತಿಯ ಅಟ್ಟೂರು ಲೇಔಟ್ ನಲ್ಲಿ ಘಟನೆ ನಡೆದಿದೆ. ವಾಕಿಂಗ್ ಗೆ ಕರೆದುಕೊಂಡು ಬಂದಿದ್ದ ಪಿಟ್ ಬುಲ್ ನಾಯಿ ಪಕ್ಕದಲ್ಲಿ ಗಾರೆ ಕೆಲಸ ಮಾಡುತ್ತಿದ್ದವನ ಮೇಲೆ ದಾಳಿ ಮಾಡಿ ಜೀವತೆಗೆದಿದೆ.
ಮಾಲೀಕನ ಪ್ರಾಣ ಉಳಿಸಲು ಹಾವಿನೊಂದಿಗೆ ಶ್ವಾನದ ಹೋರಾಟ
ನರಸಿಂಹ ನಾಯಿ ಕಚ್ಚಿ ಸಾವನ್ನಪ್ಪಿದ ವ್ಯಕ್ತಿ. ಅಟ್ಟೂರು ಲೇಔಟ್ ನಲ್ಲಿ ನರಸಿಂಹ ಗಾರೆ ಕೆಲಸ ಮಾಡುತ್ತಿದ್ದ. ಈ ವೇಳೆ ಮಹಿಳೆಯೊಬ್ಬರು ಶ್ವಾನವನ್ನು ವಾಕಿಂಗ್ ಗೆ ಕರೆದುಕೊಂಡು ಬಂದಿದ್ದರು.
ಆಕೆ ಕೈನಿಂದ ತಪ್ಪಿಸಿಕೊಂಡು ಗಾರೆ ಕೆಲಸಗಾರ ನರಸಿಂಹ ಮೇಲೆ ದಾಳಿ ಮಾಡಿದ ಶ್ವಾನ ಕುತ್ತಿಗೆಗೆ ಬಾಯಿ ಹಾಕಿದೆ. ತೀವ್ರ ರಕ್ತ ಸ್ರಾವದಿಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬದ ಆಕ್ರಂದನ ಮಾತ್ರ ನೋಡಲು ಅಸಾಧ್ಯ. ಚಿಕ್ಕಮಗಳೂರಿನಲ್ಲಿ ಕೆಲ ತಿಂಗಳ ಹಿಂದೆ ಪಿಟ್ ಬುಕ್ ತಳಿಗೆ ಸೇರಿದ್ದ ಶ್ವಾನ ಮಾಲೀಕನನ್ನೇ ಕೊಂದು ಹಾಕಿತ್ತು.
ಬ್ಯಾನ್ ಆಗಿರುವ ತಳಿ: ವಿದೇಶಗಳಲ್ಲಿ ಈ ಪಿಟ್ ಬುಲ್ ಶ್ವಾನಕ್ಕೆ ನಿಷೇಧ ಹೇರಲಾಗಿದೆ. ಪಿಟ್ಬುಲ್ ಮತ್ತು ರೊಟ್ವೀಲರ್ ಅನ್ನುಆಕ್ರಮಣಕಾರಿ ತಳಿಗಳೆಂದು ಪಟ್ಟಿ ಮಾಡಲಾಗಿದೆ . ಅಪಾಯಕಾರಿ ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳಲು ಹೊರದೇಶಗಳಲ್ಲಿ ಈ ತಳಿಯ ಶ್ವಾನ ಸಾಕುವ ಪರಿಪಾಠ ಇದೆ. ಇವುಗಳ ದಾಳಿಗಳ ಬಗ್ಗೆ ಆಗಾಗ್ಗೆ ವರದಿಯಾಗುತ್ತಿದ್ದು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಮೇಲಿಂದ ಮೇಲೆ ಕೇಳಿ ಬಂದಿದ್ದರೂ ಸ್ಪಷ್ಟ ನಿರ್ಧಾರ ಆಗಿಲ್ಲ.
( ಕಾರ್ಮಿಕನ ಕೊಂದ ಪಿಟ್ ಬುಲ್ ಶ್ವಾನ)