ಲಕ್ನೋ(ಡಿ.  28)    ಇವಳು ಚಾಲಾಕಿ ಚತುರೆ. ಮದುವೆಯಾದ ಗಂಡನ ಮನೆಯಿಂದಲೇ ಕಳ್ಳತನ ಮಾಡಿದ್ದಾಳೆ.  ಚಿನ್ನ ಮತ್ತು ನಗದು ತೆಗೆದುಕೊಂಡು ಪರಾರಿಯಾಗಿದ್ದಾಳೆ. 

ಹೆಂಡತಿ ಕಳ್ಳತನದ ಬಗ್ಗೆ ಗಂಡ ದೂರು ದಾಖಲಿಸಿದ್ದಾನೆ. ಶಾಮ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು   ಗಂಡ ಪಿಂಕು ಇದೀಗ ಹೆಂಡತಿಯೂ ಇಲ್ಲ ಹಣವೂ ಇಲ್ಲ ಎಂಬ ಸ್ಥಿತಿಗೆ ಬಂದಿದ್ದಾನೆ.  ನವೆಂಬರ್ 25 ರಂದು  ಮದುವೆಯಾಗಿತ್ತು.  ಬಾಗ್ ಪಟ್ ನ ಮಹಿಳೆಯೊಂದಿಗೆ ವಿವಾಹವಾಗಿತ್ತು. ಡಿಸೆಂಬರ್ 26 ರಂದು ಹೊಸ ಹೆಂಡತಿ ಚಾಲಾಕಿ ತನ ಮೆರೆದಿದ್ದಾಳೆ.

ಮದುವೆಯಾಗಿದ್ದ ಸೆಕ್ಸ್ ಡಾಲ್ ಮುರಿದುಹೋಯ್ತು.. ಗಂಡನ ಗೋಳು

ಗಂಡ ಪಿಂಕು ಆರೋಪ ಮಾಡುವಂತೆ ಹೆಂಡತಿ  70,000 ನಗದು ತೆಗೆದುಕೊಂಡು ಪರಾರಿಯಾಗಿದ್ದಾಳೆ.  ಮಹಿಳೆ ಪರಾರಿಯಾಗಿರುವ ದೂರು ದಾಖಲಿಸಿಕೊಂಡಿದ್ದು ಆಕೆಯ ಕುಟುಂಬದ ಮೂಲದಿಂದಲೂ ತನಿಖೆ ನಡೆಸಲಾಗುತ್ತಿದೆ.