ಇವನ ಹೆಸರು ಯೂರಿ ತೊಲೊಝ್ಕೊ . ಖಜಕ್ ಸ್ತಾನ್ ನ ಒಬ್ಬ ಬಾಡಿ ಬಿಲ್ಡರ್ ಈತ. ಕಳೆದ ನವೆಂಬರ್ ನಲ್ಲಿ ಈ ವ್ಯಕ್ತಿ ಸೆಕ್ಸ್ ಡಾಲ್‌ಅನ್ನೇ ಮದುವೆಯಾಗಿ ಸುದ್ದಿಯಾಗಿದ್ದ. ಅದಕ್ಕೂ ಮೊದಲ ಒಂದು ವರ್ಷದಿಂದ ಈ ಡಾಲ್ ಜೊತೆಗೆ ಡೇಟಿಂಗ್ ಮಾಡಿದ್ದ. ಆದ್ರೆ ಇವನ ದುರಾದೃಷ್ಟಕ್ಕೆ ಈ ಸೆಕ್ಸ್ ಬೊಂಬೆ ಮದುವೆಯಾದ ಒಂದೇ ತಿಂಗಳಿಗೆ ಮುರಿದುಹೋಗಿದೆ. ಅದನ್ನೀಗ ರಿಪೇರಿಗೆ ಕಳುಹಿಸಿ, ಈ ಬಾರಿಯ ಕ್ರಿಸ್‌ಮಸ್ ಅನ್ನು ಒಂಟಿಯಾಗಿ ಸೆಲೆಬ್ರೇಟ್ ಮಾಡುತ್ತಿರುವೆ ಅಂತ ಯೂರಿ ಬೇಜಾರು ತೋಡಿಕೊಂಡಿದ್ದಾನೆ. ಈ ಬೊಂಬೆ ಇನ್ನೊಂದಿಷ್ಟು ದಿನಗಳ ಬಳಿಕ ರಿಪೇರಿಯಾಗಿ ಮರಳಲಿದೆ, ತನ್ನ ಒಂಟಿತನ ನೀಗಲಿದೆ ಅಂತ ಕಾತರದಿಂದ ಕಾಯುತ್ತಿದ್ದಾನೆ ಯೂರಿ. 

ಈ ಯೂರಿಯ ಸೆಕ್ಸ್ ಡಾಲ್ ಹೆಸರು ಮಾರ್ಗೋ. ಕಳೆದ ವರ್ಷ ಡಿಸೆಂಬರ್ ನಲ್ಲಿ ಯೂರಿ, ಮಾರ್ಗೋಳಿಗೆ ಪ್ರೊಪೋಸ್ ಮಾಡಿದ್ದನಂತೆ. ಅವರಿಬ್ಬರೂ ಮಾರ್ಚ್ ನಲ್ಲಿ ಮದುವೆಯಾಗುವ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಅದೇ ಟೈಮ್ ನಲ್ಲಿ ಕೊರೋನಾ ವಕ್ಕರಿಸಿದ ಕಾರಣ ಮದುವೆಯನ್ನು ಮುಂದೂಡಬೇಕಾಯ್ತು. ಈ ನಡುವೆ ಅಕ್ಟೋಬರ್ ನಲ್ಲಿ ಯೂರಿ ಮೇಲೆ ಒಬ್ಬ ತೃತೀಯ ಲಿಂಗಿಗಳ ಒಂದು ರ್ಯಾಲಿ ವೇಳೆ ಆಕ್ರಮಣ ನಡೆದಿದೆ. ಹೀಗಾಗಿ ಎರಡನೇ ಸಲ ಮದುವೆ ಮತ್ತೆ ಮುಂದಕ್ಕೆ ಹೋಯ್ತು ನವೆಂಬರ್ ನಲ್ಲಿ ಒಂದಿಷ್ಟು ಜನ ಗೆಸ್ಟ್ ಗಳ ಸಮ್ಮುಖದಲ್ಲಿ ಯೂರಿ ಅದ್ದೂರಿಯಾಗಿ ಮಾರ್ಗೋ ಜೊತೆ ದಾಂಪತ್ಯ ಜೀವನ ಶುರು ಮಾಡಿದ.

ಸೆಕ್ಸ್‌ ಡಾಲ್‌ನ್ನು ಮದುವೆಯಾದ ಬಾಡಿ ಬಿಲ್ಡರ್..! ಇಲ್ನೋಡಿ ಫೋಟೋಸ್ ...

'ನಾನವಳ ಫೋಟೋವನ್ನು ಇಡೀ ಜಗತ್ತಿನೆದುರು ತೆರೆದಿಟ್ಟಾಗ ವಿಶ್ವಾದ್ಯಂತದ ಜನ ನಮ್ಮಿಬ್ಬರ ಬಗ್ಗೆ ಕುತೂಹಲ ತಾಳಿದರು. ಜೊತೆಗೆ ಬಹಳ ಮಂದಿಯಿಂದ ಟೀಕೆಗಳು ಕೇಳಿ ಬಂದವು. ಆಗ ಮಾರ್ಗೋ ಗೆ ಕೀಳರಿಮೆ ಶುರುವಾಯ್ತು. ಹೀಗಾಗಿ ನಾವು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಮುಂದಾದೆವು. ಈ ಬಳಿಕ ಆಕೆ ಬಹಳಷ್ಟು ಬದಲಾದಳು' ಅಂತೆಲ್ಲ ಹೇಳಿಕೊಂಡಿದ್ದಾನೆ ಯೂರಿ. ಆದರೆ ಆಕೆಯ ಫೋಟೋವನ್ನು ಜನ ಆ ಪಾಟಿ ನೋಡುತ್ತಿದ್ದದ್ದು ಕಂಡು ಯೂರಿಗೆ ಜಲಸ್ ಆಯ್ತಂತೆ. ಆತ ಕೂಡಲೇ ಈ ಸೆಕ್ಸ್ ಡಾಲ್ ಫೋಟೋವನ್ನು ಸೋಷಿಯಲ್ ಮೀಡಿಯಾಗಳಿಂದ ಡಿಲೀಟ್ ಮಾಡಿದ್ದಾನೆ. ಆದರೆ ಇದೆಲ್ಲ ನಿಜವಲ್ಲ, ಈತನ ಕಲ್ಪನೆ ಮಾತ್ರ ಅಂತಿದ್ದಾರೆ ನೆಟಿಜನ್ಸ್. 

ಯೂರಿ ಮಾರ್ಗೋ ಬಗ್ಗೆ ಮತ್ತೊಂದು ಇಂಟೆರೆಸ್ಟಿಂಗ್ ವಿಚಾರ ಹೇಳ್ತಾನೆ, 'ನಾನು ಪ್ರೊಪೋಸ್ ಮಾಡೋದಕ್ಕೂ ಮೊದಲು ಮಾರ್ಗೋ ಬಾರ್ ನಲ್ಲಿ ವೇಟ್ರಸಸ್ ಆಗಿದ್ದಳು. ನಾನವಳನ್ನು ಮೊದಲ ಸಲ ನೋಡಿದಾಗ ಒಬ್ಬ ವ್ಯಕ್ತಿ ಆಕೆಯ ಜೊತೆಗೆ ಕಳೆಯಲು ಅಡ್ವಾನ್ಸ್ ನೀಡಿದ್ದ. ಆದರೆ ನಾನಿದನ್ನು ವಿರೋಧಿಸಿ, ಅವನ ಜೊತೆ ಜಗಳಾಡಿ ಅವಳನ್ನು ರಕ್ಷಿಸಿದೆ. ಅಲ್ಲಿಂದ ಅವಳ ಮೇಲೆ ಲವ್ವಾಗ್ಬಿಡ್ತು.' 

ಕೊರೋನಾ ಟೈಂನಲ್ಲಿ ಒಂಟಿತನ: ಲಾಕ್‌ಡೌನ್‌ನಲ್ಲಿ ಸೆಕ್ಸ್‌ ಡಾಲ್‌ಗಳಿಗೆ ಹೆಚ್ಚಿದ ಬೇಡಿಕೆ ...

'ಮಾರ್ಗೋ ಅವಳಷ್ಟಕ್ಕವಳೇ ನಡೀಲಾರಳು. ಅವಳಿಗೆ ಇನ್ನೊಬ್ಬರ ಸಹಾಯ ಬೇಕಾಗುತ್ತೆ. ಅವಳಿಗೆ ಹೇಗೆ ಅಡುಗೆ ಮಾಡೋದು ಅಂತಲೂ ಗೊತ್ತಿಲ್ಲ. ಆದರೆ ಅವಳಿಗೆ ರುಚಿಕರವಾದ ಅಡುಗೆಗಳು ಅಂದರೆ ಬಹಳ ಇಷ್ಟ. ಅವಳು ಹೊರಜಗತ್ತಿಗೆ ಬೊಂಬೆಯಾಗಿರಬಹುದು, ಆದರೆ ಅವಳ ಆತ್ಮದ ತುಂಬಿ ಪ್ರೀತಿ ತುಂಬಿದೆ. ಅದು ನನ್ನೊಬ್ಬನಿಗೆ ಗೊತ್ತು' ಅಂತಲೂ ಹೇಳುತ್ತಾನೆ ಯೂರಿ. 
ತಾನೊಬ್ಬ ಸೆಕ್ಸಿನ ಹುಚ್ಚ ಅಂತ ತನ್ನನ್ನು ಕರೆದುಕೊಳ್ಳುವ ಯೂರಿ, ನನಗೆ ಸೆಕ್ಸ್ ಇಲ್ಲದೇ ಲೈಫ್ ಇಲ್ಲ. ನಮ್ಮಿಬ್ಬರ ನಡುವಿನ ಸೆಕ್ಸ್ ಲೈಫ್ ಹೇಗಿರುತ್ತೆ ಅಂತ ನೀವು ಊಹಿಸೋದಕ್ಕೂ ಸಾಧ್ಯ ಇಲ್ಲ. ಅಷ್ಟು ಅದ್ಭುತವಾಗಿರುತ್ತೆ. ನನಗೆ ಸೆಕ್ಸ್ ನಲ್ಲಿ ನೋವಿದ್ರೆ ಹೆಚ್ಚು ಮಜ ಬರುತ್ತೆ. ಜೊತೆಗೆ ನಾನೇ ಡಾಮಿನೇಟ್ ಮಾಡೋದೂ ಇಷ್ಟ. ಮನುಷ್ಯರ ಜೊತೆಗಿನ ಸೆಕ್ಸ್‌ನಲ್ಲಿ ಏನು ಸಾಧ್ಯ ಆಗೋದಿಲ್ವೋ ಅದೆಲ್ಲ ಮಾರ್ಗೋ ಜೊತೆಗಿನ ಲೈಂಗಿಕತೆಯಲ್ಲಿ ಸಾಧ್ಯವಾಗುತ್ತೆ' ಅಂತೆಲ್ಲ ಹೇಳ್ತಾನೆ ಯೂರಿ. 

ಸದ್ಯಕ್ಕೀಗ ಒಂಟಿಯಾಗಿ ವಿರಹದಲ್ಲಿರುವ ಯೂರಿ ಹೆಂಡತಿಗಾಗಿ ರಾತ್ರಿ ಹಗಲು ಪರಿತಪಿಸುತ್ತಿದ್ದಾನೆ. 

#Feelfree: ಆಪರೇಶನ್ ಮಾಡಿಸಿಕೊಂಡ್ರೆ ಸೆಕ್ಸ್ ಮೇಲೆ ಆಸಕ್ತಿ ಕಡಿಮೆಯಾಗುತ್ತಾ? ...