Asianet Suvarna News Asianet Suvarna News

ಬೆಂಗಳೂರಲ್ಲಿ ಪಾನಿಪೂರಿ ಕೊಡಿಸ್ತೇನೆಂದು 7 ವರ್ಷದ ಮಗು ಕರೆದೊಯ್ದು ಅತ್ಯಾಚಾರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 7 ವರ್ಷದ ಹೆಣ್ಣು ಮಗುವೊಂದನ್ನು ಪರಿಚಿತನೊಬ್ಬ ಪಾನಿಪೂರಿ ಕೊಡಿಸ್ತೇನೆ ಬಾ ಎಂದು ಕರೆದೊಯ್ದು ಅತ್ಯಾಚಾರ ಮಾಡಿರುವ ದುರ್ಘಟನೆ ಬಡೆದಿದೆ.

Bengaluru old man raped 7 year old girl near garuda Mall Magrath Road sat
Author
First Published Apr 26, 2024, 8:14 AM IST | Last Updated Apr 26, 2024, 8:33 AM IST

ಬೆಂಗಳೂರು (ಏ.26): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 7 ವರ್ಷದ ಹೆಣ್ಣು ಮಗುವೊಂದನ್ನು ಪರಿಚಿತನೊಬ್ಬ ಪಾನಿಪೂರಿ ಕೊಡಿಸ್ತೇನೆ ಬಾ ಎಂದು ಕರೆದೊಯ್ದು ಅತ್ಯಾಚಾರ ಮಾಡಿರುವ ದುರ್ಘಟನೆ ಬಡೆದಿದೆ.

ಬೆಂಗಳೂರಲ್ಲಿ 7 ವರ್ಷದ ಮಗು ಮೇಲೆ‌ ಆತ್ಯಾಚಾರ ಮಾಡಲಾಗಿದೆ. ಪಾನಿಪುರಿ ಕೊಡಿಸ್ತೇನೆ ಅಂತ ಕರೆದೊಯ್ದವನು ಮಗು ಎಂಬುದನ್ನೂ ನೋಡದೇ ಅತ್ಯಾಚಾರ ಎಸಗಿದ್ದಾನೆ. ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು ಅತ್ಯಾಚಾರ ಘಟನೆ ನಡೆದ ನಂತರ ತೀವ್ರ ರಕ್ತಸ್ರಾವ ಉಂಟಾಗುತ್ತಿದ್ದುದನ್ನು ಗಮನಿಸಿದ ಪೋಷಕರು ಮಗುವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಸರ್ಕಾರಿ ನೌಕರಿ ಸಿಕ್ಕಿದ್ದಕ್ಕೆ ವಿಕಲಚೇತನ ಗೆಳತಿಯನ್ನು ಎಳೆದೊಯ್ದು ಅತ್ಯಾಚಾರ ಮಾಡಿದ ಸ್ನೇಹಿತ

ಗರುಡ ಮಾಲ್ ಪಕ್ಕದಲ್ಲಿ ತಾಯಿ ಮತ್ತು ಮಗು ಭಿಕ್ಷೆ ಬೇಡುತ್ತಿದ್ದರು. ತಾಯಿಗೆ ಮಾತನಾಡಲು ಬರದೇ ಮೂಗಳಾಗಿದ್ದಳು. ಅಲ್ಲಿಗೆ ಬಂದ 54 ವರ್ಷದ ವೃದ್ಧ ಮಗುವನ್ನು ಪಾನಿಪೂರಿ ಕೊಡಿಸುವುದಾಗಿ ಕರೆದೊಯ್ದು ನೀಚ ಕೃತ್ಯ ಎಸಗಿದ್ದಾನೆ. ಮೆಗ್ರತ್ ರೋಡ್ ಮುಖ್ಯರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ರಸ್ತೆಯ ಬಳಿ ಹಿಟಾಚಿ ವಾಹನ ನಿಲ್ಲಿಸಲಾಗಿತ್ತು. ನಿರ್ಜನ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಹಿಟಾಚಿ ವಾಹನದ ಕೆಳಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಸದ್ಯ ಮಗುವಿಗೆ ಆರೋಗ್ಯ ಚಿಕಿತ್ಸೆಯನ್ನು ಕೊಡಿಸಿದ ಅಶೋಕ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Latest Videos
Follow Us:
Download App:
  • android
  • ios