ದಕ್ಷಿಣ ಕನ್ನಡ 2024 Elections ಸಂಜೆ 5ಗಂಟೆ ವೇಳೆಗೆ ಶೇ.71.83ರಷ್ಟು ಮತದಾನ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದೆ. ಸಂಜೆ 5ಗಂಟೆ ವೇಳೆಗೆ ಶೇ.71.83ರಷ್ಟು ಮತದಾನ
ಮಂಗಳೂರು (ಏ26): ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಲ್ಲಿ ಬೆಳಗ್ಗಿನಿಂದ ಉತ್ತಮ ಮತದಾನವಾಗಿದೆ. ಸಂಜೆ 5ಗಂಟೆ ವೇಳೆಗೆ ಶೇ.71.83ರಷ್ಟು ಮತದಾನವಾಗಿದೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ದಕ್ಷಿಣ ಕನ್ನಡದಲ್ಲಿ ಶೇ. 58.76ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬೆಳಗ್ಗೆ 9 ಗಂಟೆಗೆ ಶೇ. 14.33ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಹೇಳಿತ್ಮತು. ಧಧ್ಯಾಹ್ನ 1 ಗಂಟೆಯ ವೇಳೆ ಶೇ. 48.10ರಷ್ಟು ಮತದಾನವಾಗಿದ್ದು, ಒಟ್ಟಾರೆ, ದಕ್ಷಿಣ ಕನ್ನಡದಲ್ಲಿ ಉತ್ತಮವಾಗಿ ವೋಟಿಂಗ್ ಆಗುವ ಮಾಹಿತಿ ಸಿಕ್ಕಿದೆ.
ದಕ್ಷಿಣ ಕನ್ನಡದಲ್ಲಿ ಈ ಬಾರಿ ಬಿಜೆಪಿ ಹೊಸ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟಗೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್‌ನಿಂದ ಪದ್ಮರಾಜ್ ಕಣದಲ್ಲಿದ್ದಾರೆ. ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 18.18 ಲಕ್ಷ ಮತದಾರರು ಈ ಲೋಕಸಭಾ ಕ್ಷೇತ್ರದಲ್ಲಿದ್ದು, 8.79 ಲಕ್ಷ ಪುರುಷ ಹಾಗೂ 9.30 ಲಕ್ಷ ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಒಟಟು 38,386 ಮಂದಿ ಹೊಸ ಮತದಾರರಿದ್ದಾರೆ. ಬಿಜೆಪಿಗೆ ಈ ಕ್ಷೇತ್ರ ಸಲೀಸಾಗಿದ್ದರೂ ಕಾಂಗ್ರೆಸ್‌ನ ಒಗಟ್ಟು ಹಾಗೂ ವ್ಯವಸ್ಥಿತ ಪ್ರಚಾರದ ಕಾರಣದಿಂದಾಗಿ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದೆ. 1991ರಿಂದ ತನ್ನ ವಶದಲ್ಲಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಹ್ಯಾಟ್ರಿಕ್ ಜಯ ಸಾಧಿಸಿರುವ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್‌ರನ್ನು ಬದಲಿಸಿ ಬ್ರಿಜೇಶ್ ಚೌಟಗೆ ಟಿಕೆಟ್ ನೀಡಿದೆ. ಇನ್ನೊಂದೆಡೆ ಕಾಂಗ್ರೆಸ್‌ನಿಂದ ದಿಗ್ಗಜ ಜನಾರ್ಧನ ಪೂಜಾರಿ ಶಿಷ್ಯ ಪದ್ಮರಾಜ್ ಅವರನ್ನು ಕಣಕ್ಕೆ ಇಳಿಸುವ ಮೂಲಕ ಸೆಡ್ಡು ಹೊಡೆದಿದೆ.
ಕರ್ನಾಟಕ Election 2024 Live: ಬೆಳಗ್ಗೆ 9ರ ಹೊತ್ತಿಗೆ ರಾಜ್ಯಾದ್ಯಂತ ಶೇ.9.21ರಷ್ಟು ಮತದಾನ
ಯುಟಿ ಖಾದರ್, ನಳಿನ್ ಕುಮಾರ್ ಕಟೀಲ್ ಮತದಾನ: ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಬೂತ್ ನಂಬರ್ 103 ರಲ್ಲಿ ಮತದಾನ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಬೋಳಿಯಾರು ಸರ್ಕಾರಿ ಶಾಲೆಯಲ್ಲಿ ಪತ್ನಿ, ಮಗಳ ಜತೆ ಬಂದು ಸ್ಪೀಕರ್ ಮತದಾನ ಮಾಡಿದರು.
LIVE: ಚಾಮರಾಜನಗರ 2024 Elections: ಬೆಳಗ್ಗೆ 9 ಗಂಟೆ ವೇಳೆಗೆ ಶೇ. 7.70ರಷ್ಟು ಮತದಾನ
ಕಟೀಲ್ ಕಾಲು ಹಿಡಿದು ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ: ಸಂಸದ ನಳಿನ್ ಕುಮಾರ್ ಕಟೀಲು ಕಾಲು ಹಿಡಿದು ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆಶೀರ್ವಾದ ಪಡೆದರು. ಈ ವೇಳೆ ಪದ್ಮರಾಜ್‌ರನ್ನು ನಳಿನ್ ಅಭಿನಂದಿಸಿದ್ದಾರೆ. ಮಂಗಳೂರು ಲೇಡಿಹಿಲ್ ಅಲೋಶಿಯಸ್ ಶಾಲೆಯಲ್ಲಿ ಮತದಾನಕ್ಕೆ ಆಗಮಿಸಿದ್ದರು. ಈ ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಹಾಗೂ ಸಂಸದ ನಳಿನ್ ಮುಖಾಮುಖಿಯಾಗಿದ್ದರು.