Asianet Suvarna News Asianet Suvarna News

ಮರ್ಸಿಡಿಸ್‌ ಕಾರಲ್ಲಿ ಅಪ್ರಾಪ್ತೆಯ ಗ್ಯಾಂಗ್‌ ರೇಪ್‌: ಶಾಸಕನ ಮಗನಿಗಾಗಿ ಹುಡುಕಾಟ

Hyderabad Gang Rape case: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಶಾಸಕನ ಮಗ ಮತ್ತು ಇಬ್ಬರು ಆರೋಪಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಹೈದರಾಬಾದಿನ ಜುಬಿಲಿ ಹಿಲ್ಸ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಲು ಹುಡುಕಾಟ ಆರಂಭಿಸಿಲಾಗಿದೆ.

minor girl gang raped inside car in hyderabad police launch man hunt for mla's son
Author
Bengaluru, First Published Jun 3, 2022, 12:28 PM IST

ಹೈದರಾಬಾದ್‌: ಕಾರಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ (Gang rape) ಮಾಡಿದ ಘಟನೆ ಹೈದರಾಬಾದಿನಲ್ಲಿ ಕಳೆದ ಶನಿವಾರ ನಡೆದಿದೆ. ಈ ಘಟನೆ ಈಗ ಬೆಳಕಿಗೆ ಬಂದಿದ್ದು, ಶಾಸಕನ ಮಗನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪೊಲೀಸ್‌ ಮೂಲಗಳ ಮಾಹಿತಿ ಪ್ರಕಾರ ಮರ್ಸಿಡಿಸ್‌ ಕಾರಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಎಳೆದೊಯ್ದು ಕಾರಿನಲ್ಲೇ ಶಾಸಕನ ಮಗ ಮತ್ತು ಬಾಲಾಪರಾಧಿಯೊಬ್ಬ ಅತ್ಯಾಚಾರ ಮಾಡಿದ್ದಾರೆ. ಘಟನೆ ಸಂಬಂಧ ಆರೋಪಿಗಳಿಗಾಗಿ ತೀವ್ರ ಶೋಧ ಆರಂಭಿಸಲಾಗಿದೆ. 

ಹೈದರಾಬಾದಿನ ಜುಬಿಲೀ ಹಿಲ್ಸ್‌ ಠಾಣೆಯಲ್ಲಿ (Hyderabad Jubilee Hills police station) ಜೂನ್‌ 1ರಂದು ಪ್ರಕರಣ ದಾಖಲಾಗಿದ್ದು ಪ್ರಕರಣದ ಪ್ರಾಥಮಿಕ ತನಿಖೆ ಶುರುವಾಗಿದೆ. ಆರಂಭದಲ್ಲಿ ಸೆಕ್ಷನ್‌ 354ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈಗ ಪೋಕ್ಸೊ ಕಾಯ್ದೆಯಡಿಯೂ ಎಫ್‌ಐಆರ್‌ (First Information Report) ಮಾಡಲಾಗಿದೆ. 

17 ವರ್ಷದ ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಪೋಕ್ಸೊ (Prevention of Children from Sexual Offences Act) ಜೊತೆ ಸೆಕ್ಷನ್‌ 376 (ಸಾಮೂಹಿಕ ಅತ್ಯಾಚಾರ) ಪ್ರಕರಣವನ್ನೂ ದಾಖಲಿಸಲಾಗಿದೆ. ಮೂವರು ಆರೋಪಿಗಳ ವಿರುದ್ಧ ಕೇಸ್‌ ಆಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ. 

ಇದನ್ನೂ ಓದಿ: ಅಯ್ಯೋ ವಿಧಿಯೇ... ಜನ್ಮದಾತನ ಬಳಿಯೂ ಹೆಣ್ಣು ಸುರಕ್ಷಿತಳಲ್ಲ: ಪೊಲೀಸರಿಂದ ತಂದೆಯ ಬಂಧನ

ಪೊಲೀಸ್‌ ಅಧಿಕಾರಿಗಳ ಪ್ರಕಾರ, ಶಾಸಕನ ಮಗ ಮತ್ತು ಅಲ್ಪಸಂಖ್ಯಾತ ಇಲಾಖೆಯ ಮುಖ್ಯಸ್ಥರ ಮಗ ಸಂತ್ರಸ್ತೆ ಭಾಗಿಯಾಗಿದ್ದ ಪಾರ್ಟಿಯಲ್ಲಿದ್ದರು. ಯುವತಿ ಶಾಸಕನ ಮಗನ ಹೆಸರನ್ನು ಮಾತ್ರ ಗುರುತಿಸಿದ್ದಾಳೆ, ಇನ್ನಿಬ್ಬರ ಹೆಸರು ಮತ್ತು ಪರಿಚಯ ಆಕೆಗಿಲ್ಲ. ಆದರೆ ನಮ್ಮ ತನಿಖೆಯ ಪ್ರಕಾರ ನಾವು ಆರೋಪಿಗಳ ಗುರುತು ಪತ್ತೆ ಹಚ್ಚಿದ್ದೀವಿ. ಅವರಿಗಾಗಿ ಹುಡುಕಾಟ ನಡೆಯುತ್ತಿವೆ. ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು ಎಂದಿದ್ದಾರೆ. 

ಹಸುವನ್ನೂ ಬಿಡದ ಕಾಮುಕ:

ಹಸುವಿನಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 22 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪುಣೆಯ ಲೋನಾವಾಲಾದಲ್ಲಿ ಈ ಘಟನೆ ನಡೆದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿ (ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಪ್ರಕೃತಿಯ ಕ್ರಮಕ್ಕೆ ವಿರುದ್ಧವಾಗಿ ದೈಹಿಕ ಸಂಭೋಗವನ್ನು ನಡೆಸುವುದು) ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಲೋನಾವಾಲಾ (Lonawala) ಕುಸ್ಗಾನ್‌ನಲ್ಲಿ (Kusgaon)  ಈತ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. 

ಇದನ್ನೂ ಓದಿ: Mangaluru: ಡ್ರಗ್ಸ್ ನೀಡಿ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್: ಕಾಮುಕನ ಹೆಡೆಮುರಿ ಕಟ್ಟಿದ ಪೊಲೀಸರು

ಆರೋಪಿಯೂ ಹಸುವಿನೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇದ್ದುದ್ದನ್ನು ಗಮನಿಸಿದ ನೆರೆಹೊರೆಯ ಜನ ಮಾಲೀಕರಿಗೆ ವಿಷಯ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು 22 ವರ್ಷ ಪ್ರಾಯದ ದೀಪಕ್ ಶಿವಾಜಿ ರಾಜವಾಡೆ (Deepak Shivaji Rajiwade) ಎಂದು ಗುರುತಿಸಲಾಗಿದೆ. ಘಟನೆಯ ಬಳಿಕ ಹಸುವಿನ ಮಾಲೀಕರು ದೂರು ದಾಖಲಿಸಿದ್ದು ಆರೋಪಿ ದೀಪಕ್ ಶಿವಾಜಿ ರಾಜೀವಾಡೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ನೆರೆಹೊರೆಯವರು ಹಸುವಿನ ಜೊತೆ ಆಕ್ಷೇಪಾರ್ಹ ಸ್ಥಾನದಲ್ಲಿದ್ದುದನ್ನು ಕಂಡು ಘಟನೆ ಬೆಳಕಿಗೆ ಬಂದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿ ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಪ್ರಕೃತಿಯ ಕ್ರಮಕ್ಕೆ ವಿರುದ್ಧವಾಗಿ ದೈಹಿಕ ಸಂಭೋಗವನ್ನು ಹೊಂದಿರುವ ಪ್ರಕರಣದಡಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈಗ ಹಸುವಿನ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ.

Follow Us:
Download App:
  • android
  • ios