ಅಯ್ಯೋ ವಿಧಿಯೇ... ಜನ್ಮದಾತನ ಬಳಿಯೂ ಹೆಣ್ಣು ಸುರಕ್ಷಿತಳಲ್ಲ: ಪೊಲೀಸರಿಂದ ತಂದೆಯ ಬಂಧನ

  • 5 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಹತ್ಯೆಗೆ ಯತ್ನ
  • ಮಹಾರಾಷ್ಟ್ರ ಪೊಲೀಸರಿಂದ ತಂದೆಯ ಬಂಧನ
  • ಮಹಾರಾಷ್ಟ್ರದ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಘಟನೆ
     
Man arrested for raping attempting to kill 5 yr old daughter akb

ಮುಂಬೈ: ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ತನ್ನ ಐದು ವರ್ಷದ ಮಗಳ ಮೇಲೆ ತಂದೆಯೇ ಅತ್ಯಾಚಾರವೆಸಗಿ ಬಳಿಕ ಕೊಲೆಗೆ ಯತ್ನಿಸಿದ್ದು ಹೇಯ ಕೃತ್ಯವೆಸಗಿದ ಕಾಮುಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. 

ಮಹಾರಾಷ್ಟ್ರದ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ (Pimpri Chinchwad) ಈ ಅಸಹ್ಯಕಾರಿ ಘಟನೆ ನಡೆದಿದೆ. ಅತ್ಯಾಚಾರ ಎಸಗಿ ನಂತರ ಆಕೆಯನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯನ್ನು ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ಕಾಮುಕನ ಆತನ ಪತ್ನಿ ಪೊಲೀಸರನ್ನು ಸಂಪರ್ಕಿಸಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ.

ಶುಕ್ರವಾರ (ಮೇ.27) ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಆರೋಪಿಯು ತನ್ನ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿದ್ದ. ಮೇ 24 ರಂದು ಸಂಜೆ 6 ಗಂಟೆ ಸುಮಾರಿಗೆ ಆರೋಪಿ ತಮ್ಮ ಮಗಳ ಬಳಿಗೆ ಹೋದಾಗ ಆಕೆ ಈತನ ವರ್ತನೆಯನ್ನು ವಿರೋಧಿಸಿದ್ದಾಳೆ. ಈ ವೇಳೆ ಪತ್ನಿ ಮಧ್ಯಪ್ರವೇಶಿಸಿದಾಗ ದಂಪತಿ ನಡುವೆ ವಾಗ್ವಾದ ನಡೆದಿದ್ದು, ವ್ಯಕ್ತಿ ತನ್ನ ಮಗಳನ್ನು ನೆಲದ ಮೇಲೆ ಎಸೆದು ಬೆಲ್ಟ್‌ನಿಂದ ಕತ್ತು ಹಿಸುಕಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಉತ್ತರ ಪ್ರದೇಶ: 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಪೊಲೀಸರ ಪ್ರಕಾರ, ತಾಯಿ ಬಾಲಕಿಯನ್ನು ರಕ್ಷಿಸಿ ಪತಿ ವಿರುದ್ಧ ದೂರು ನೀಡಿದ್ದಾರೆ. ವ್ಯಕ್ತಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 377 (ಪ್ರಕೃತಿಯ ಆದೇಶದ ವಿರುದ್ಧ ದೈಹಿಕ ಸಂಭೋಗ), 307 (ಕೊಲೆಗೆ ಯತ್ನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಮಕ್ಕಳ ಲೈಂಗಿಕ ಅಪರಾಧಗಳ ತಡೆ ಕಾಯ್ದೆ ಮತ್ತು ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿನ್ನೆಯಷ್ಟೇ (ಮೇ.26) ಶಾಲಾ ಆವರಣದಲ್ಲಿ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಶಾಲೆಯೊಂದರ 51 ವರ್ಷದ ಪ್ಯೂನ್‌ನನ್ನು ನವಘರ್ ಪೊಲೀಸರು ಬಂಧಿಸಿದ್ದರು. ಘಟನೆಗೂ ಮುನ್ನ ಬಾಲಕಿ ಆಟದ ಮೈದಾನದಲ್ಲಿದ್ದಳು. ವಾಡಿಕೆ ಬೇಸಿಗೆ ರಜೆಯ ಕಾರಣಕ್ಕೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಆದರೆ ಕೆಲವು ಸಿಬ್ಬಂದಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.ಈ ಮಧ್ಯೆ ಮುಲುಂಡ್ ಇಸ್ಟ್‌ ಸ್ಕೂಲಿನ ಪ್ಯೂನ್ ಬಾಲಕಿ ಒಂಟಿಯಾಗಿ ಆಟವಾಡುತ್ತಿರುವುದನ್ನು ಗಮನಿಸಿ ಆಕೆಯನ್ನು ಕೋಣೆಗೆ ಕರೆದೊಯ್ದು ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Bengaluru Crime: ರಿವಾಲ್ವರ್‌ ತೋರಿಸಿ ಯುವತಿ ಮೇಲೆ ಮನೆ ಮಾಲೀಕನಿಂದ ರೇಪ್‌
 

ಆರೋಪಿ, ಹೇಮಂತ್ ವೈಟಿ,ಬಾಗಿಲು ಮುಚ್ಚಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ಈ ಬಗ್ಗೆ ಯಾರೊಂದಿಗಾದರೂ ಮಾತನಾಡಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಎಂದು ನವಘರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾಲೆಯಿಂದ ಮನೆಗೆ ಹೋದ ಬಾಲಕಿ ನಂತರ ಮೌನಕ್ಕೆ ಜಾರಿದ್ದಳು. ಚುರುಕಾಗಿದ್ದ ಬಾಲಕಿಯ ಮೌನ ಕಂಡು ಪೋಷಕರು ದಂಗಾಗಿದ್ದು, ತಾಯಿ ಬಾಲಕಿಯನ್ನು ಸಂಪೂರ್ಣವಾಗಿ ವಿಚಾರಿಸಿದಾಗ ಘಟನೆ ಬಗ್ಗೆ ಬಾಲಕಿ ಮಾಹಿತಿ ನೀಡಿದ್ದಾಳೆ.

ಕೂಡಲೇ ಆಕೆಯ ತಾಯಿ  ಬಾಲಕಿಯ ತಂದೆಗೆ ವಿಚಾರ ತಿಳಿಸಿ ನವಘರ್ ಪೊಲೀಸ್ ಠಾಣೆಗೆ  ಬಂದು ದೂರು ದಾಖಲಿಸಿದ್ದಾರೆ.  ನಾವು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ ಎಂದು ಡಿಸಿಪಿ (ವಲಯ 7) ಪ್ರಶಾಂತ್ ಕದಂ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios