Asianet Suvarna News Asianet Suvarna News

Mangaluru: ಡ್ರಗ್ಸ್ ನೀಡಿ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್: ಕಾಮುಕನ ಹೆಡೆಮುರಿ ಕಟ್ಟಿದ ಪೊಲೀಸರು

*  ಮದುವೆಯಾಗುವ ಅಮಿಷವೊಡ್ಡಿ ಅತ್ಯಾಚಾರ
*  ನೊಂದ ಯುವತಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲು
*  ಆರೋಪಿಯನ್ನ 7 ದಿನ ಪೊಲೀಸ್ ಕಸ್ಟಡಿಗೆ 

Accused Arrested For Rape in Mangaluru grg
Author
Bengaluru, First Published May 14, 2022, 10:41 AM IST

ಮಂಗಳೂರು(ಮೇ.14):  ಯುವತಿಯೊಬ್ಬಳಿಗೆ ಮದುವೆಯಾಗುವ ಅಮಿಷವೊಡ್ಡಿ ಅತ್ಯಾಚಾರ(Rape) ವೆಸಗಿ ಆಕೆಯಿಂದ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಯನ್ನು ಮಂಗಳೂರು(Mangaluru) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ನಿವಾಸಿ ಶಾನ್ ನವಾಸ್ (36) ಬಂಧಿತ(Arrest) ಆರೋಪಿ(Accused). ಮೂಡುಬಿದಿರೆ ನಿವಾಸಿ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ(Marriage) ನಂಬಿಸಿ ಅತ್ಯಾಚಾರ ನಡೆಸಿ ಹಣವನ್ನು ಸುಲಿಗೆ ಮಾಡಿದ್ದ, ಇಷ್ಟೇ ಅಲ್ಲದೆ ಆಕೆಗೆ ಮಾದಕ ವಸ್ತುಗಳನ್ನು(Drugs) ಬಲವಂತವಾಗಿ ಸೇವನೆ ಮಾಡಿಸಿ ಆಕೆಯ ನಗ್ನ ಚಿತ್ರಗಳನ್ನು ಮೊಬೈಲ್‌ನಲ್ಲಿ ಚಿತ್ರಿಕರಣ ಮಾಡಿದ್ದ‌. ನಂತರ ಹಣ ನೀಡಬೇಕೆಂದು ಬೆದರಿಕೆ ಹಾಕಿ 1.5ಲಕ್ಷ ಸುಲಿಗೆ ಮಾಡಿದ್ದ. ವಿವಿಧ ಕಡೆಗಳಲ್ಲಿನ ಲಾಡ್ಜ್‌ಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ನೊಂದ ಯುವತಿ ಮಂಗಳೂರು ಮಹಿಳಾ ಪೊಲೀಸ್(Police) ಠಾಣೆಯಲ್ಲಿ ದೂರು ನೀಡಿದ್ದರು.

ನಿಶ್ಚಿತಾರ್ಥದ ದಿನವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ!

ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಳ್ಳುವಂತೆ ಕಡತವನ್ನು ಮಂಗಳೂರು ನಗರ ಅಪರಾಧ ವಿಭಾಗ(CCB) ಕ್ಕೆ ವರ್ಗಾಯಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಕೈಗೊಂಡ ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣದಲ್ಲಿ ಹೆಚ್ಚಿನ ತನಿಖೆಗಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. 

ಆರೋಪಿಯು ಯುವತಿಯನ್ನು ನಗರದ ವಿವಿಧ ಲಾಡ್ಜ್‌ಗಳಲ್ಲಿ, ಪುಣೆ, ಮುಂಬೈಯ ವಿವಿಧ ಲಾಡ್ಜ್‌ಗಳಲ್ಲಿ, ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದನು. ಆರೋಪಿಯು ಈ ಹಿಂದೆ 2019 ಹಾಗೂ 2020 ರಲ್ಲಿ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಮಾದಕ ವಸ್ತು ಮಾರಾಟದ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ. ನೊಂದ ಯುವತಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಿದ್ದು, ಆಕೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Follow Us:
Download App:
  • android
  • ios