Asianet Suvarna News Asianet Suvarna News

ಒಯೋ ರೂಮ್‌ನಲ್ಲಿ ರಾತ್ರಿ ಕಳೆಯಲು ಒಪ್ಪದ ಗೆಳತಿಯ ಹತ್ಯೆ

ಒಯೋ ರೂಮ್‌ನಲ್ಲಿ ರಾತ್ರಿ ಕಳೆಯಲು ಒಪ್ಪದ ಗೆಳತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

man killed her 44 year old girl friend who did not agree to spend the night in the Oyo room in Ghaziabad akb
Author
First Published Dec 27, 2022, 6:40 PM IST

ಗಾಜಿಯಾಬಾದ್: ಒಯೋ ರೂಮ್‌ನಲ್ಲಿ ರಾತ್ರಿ ಕಳೆಯಲು ಒಪ್ಪದ ಗೆಳತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಒಯೋ ಹೊಟೇಲ್ ರೂಮ್‌ನಲ್ಲಿ ಗಲಾಟೆಯಾಗಿದ್ದು, ಗಲಾಟೆ ವಿಕೋಪಕ್ಕೆ ಹೋಗಿ 44 ವರ್ಷದ ತನ್ನ ಗೆಳತಿಯನ್ನು ಆರೋಪಿ ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಭೋಜಪುರ ನಿವಾಸಿ  34 ವರ್ಷದ ಗೌತಮ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಪೀಠೋಪಕರಣಗಳ ತಯಾರಿಕಾ ಘಟಕದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. 

ಗಾಜಿಯಾಬಾದ್ ಗ್ರಾಮೀಣ ವಿಭಾಗದ ಡಿಸಿಪಿ ಇರಜ್ ರಾಜ್ (Iraj raj) ಅವರು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಡಿ.26ರಂದು ಮಧ್ಯಾಹ್ನದ ನಂತರ ಪೊಲೀಸರಿಗೆ ಹೊಟೇಲೊಂದರಲ್ಲಿ ಅಪರಾಧ ನಡೆದ ಬಗ್ಗೆ ಕರೆ ಬಂದಿದೆ. ನಂತರ ಸ್ಥಳಕ್ಕೆ ಪೊಲೀಸ್ ತಂಡವೊಂದು ಭೇಟಿ ನೀಡಿ ಮೃತದೇಹವನ್ನು ಮಹಜರು ಮಾಡಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಕೊಲೆಯಾದ ಮಹಿಳೆಯನ್ನು ರಚನಾ ಎಂದು ಗುರುತಿಸಲಾಗಿದ್ದು, ಆಕೆ ಭಾಗ್‌ಪತ್ (Baghpat) ನಿವಾಸಿ ರಾಜ್‌ಕುಮಾರ್ (Rajkumar) ಎಂಬುವವರ ಪತ್ನಿ ಎಂದು ತಿಳಿದು  ಬಂದಿದೆ. ಈ ಬಗ್ಗೆ ಮಹಿಳೆಯ ಗಂಡನಿಗೂ ಮಾಹಿತಿ ನೀಡಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

OYO Lays Off:  600 ಉದ್ಯೋಗಿಗಳನ್ನು ಕಂಪೆನಿಯಿಂದ ವಜಾಗೊಳಿಸಿದ ಓಯೋ

ಭಾನುವಾರ ಡಿಸೆಂಬರ್ 25 ರಂದು ರಾತ್ರಿ 9 ಗಂಟೆ ಸುಮಾರಿಗೆ ಮಹಿಳೆ ರಚನಾ (Rachana), ಆರೋಪಿ ಗೌತಮ್ ಸಿಂಗ್ (Gowtham singh) ಜೊತೆ ಹೊಟೇಲ್‌ಗೆ ಆಗಮಿಸಿದ್ದಾಳೆ. ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಎಟಿಎಂನಿಂದ (ATM) ಹಣ ತರುವುದಾಗಿ ಹೇಳಿ ಆರೋಪಿ ಹೊಟೇಲ್‌ನಿಂದ ಹೊರ ಹೋದವನು ಮರಳಿ ಹೊಟೇಲ್‌ಗೆ ಬಂದಿಲ್ಲ. ಇತ್ತ ಹೌಸ್ ಕೀಪಿಂಗ್ ಸಿಬ್ಬಂದಿ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಈ ಜೋಡಿ ಉಳಿದಿದ್ದ ಕೊಠಡಿಗೆ ಹೋಗಿ ನೋಡಿದಾಗ ಮಹಿಳೆಯ ಶವ ಅಲ್ಲಿ ಪತ್ತೆಯಾಗಿದೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ನಂತರ ಸಂಜೆ 5.30 ರ ಸುಮಾರಿಗೆ ಮುರದ್‌ನಗರದ ಗಂಗಾ ಕಾಲುವೆಯ ಸಮೀಪ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ, ಮಹಿಳೆ ಹೊಟೇಲ್‌ನಲ್ಲಿ ರಾತ್ರಿ ಉಳಿಯಲು ಬಯಸದೇ ಮನೆಗೆ ಹೊರಟು ಹೋಗಲು ಬಯಸಿದ್ದರಿಂದ ಜಗಳ ಆರಂಭವಾಗಿದ್ದು, ಈ ವೇಳೆ ಹತ್ಯೆ ನಡೆದಿದೆ ಎಂದು ಹೇಳಿದ್ದಾನೆ. ಭಾನುವಾರ ರಾತ್ರಿಯೇ ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ನಂತರ ಇಡೀ ರಾತ್ರಿ ಶವದೊಂದಿಗೆ ಹೊಟೇಲ್‌ನಲ್ಲಿ ಕಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಅಯ್ಯಯ್ಯೋ... OYO ರೂಮ್‌ಲ್ಲಿ ಕಳ್ಳ ಕ್ಯಾಮರಾ: ಜೋಡಿಯ ಸಲ್ಲಾಸ ಸೆರೆ ಹಿಡಿದ ನಾಲ್ವರ ಬಂಧನ

ಆರೋಪಿ ಗೌತಮ್ ವಿರುದ್ಧ ಸೆಕ್ಷನ್ 302 (ಕೊಲೆ), 305 ಕ್ರಿಮಿನಲ್ ಬೆದರಿಕೆ ಅಡಿ ಪ್ರಕರಣ ದಾಖಲಿಸಲಾಗಿದೆ. ಮೃತ ರಚನಾ ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಕ್ಲಾರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಆಕೆಯ ಪತಿ ಕೂಲಿ ಕಾರ್ಮಿಕನಾಗಿ (Labour) ಕೆಲಸ ಮಾಡುತ್ತಿದ್ದ. ಡಿಸೆಂಬರ್ 23 ರಂದು ಮನೆ ಬಿಟ್ಟು ಬಂದಿದ್ದ ಮಹಿಳೆ ಹಾಗೂ ಆರೋಪಿ ಎರಡು ದಿನಗಳ ಕಾಲ ಹೊಟೇಲ್‌ನಲ್ಲಿ ಉಳಿದಿದ್ದಾರೆ. ಫೋನ್ ಮೂಲಕ ಕಳೆದ ನಾಲ್ಕು ತಿಂಗಳಿಂದ ಇವರಿಬ್ಬರಿಗೆ ಪರಿಚಯವಿದ್ದು, ಇಬ್ಬರು ಡಿಸೆಂಬರ್ 23 ರಂದು ಮೀರತ್‌ನಲ್ಲಿ ಭೇಟಿಯಾಗಲು ನಿರ್ಧರಿಸಿದ್ದರು. ಇದಕ್ಕಾಗಿ ಮಹಿಳೆ ರಚನಾ ಕಚೇರಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಮನೆಯಿಂದ ಹೊರಬಂದಿದ್ದಳು. ಮೀರತ್‌ನಲ್ಲಿ ಎರಡು ದಿನಗಳ ಕಾಲ ಉಳಿದ ಅವರು ಡಿಸೆಂಬರ್ 25 ರಂದು ಸಂಜೆ ಈ ಗಾಜಿಯಾಬಾದ್‌ನ ಹೊಟೇಲ್‌ಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಡಿಸೆಂಬರ್ 23 ರಂದು ನಾನು ಆಕೆಗೆ ಕರೆ ಮಾಡಿದಾಗ ಆಕೆ ಕಚೇರಿಯಲ್ಲಿ ಮೀಟಿಂಗ್ ಇದೆ ಬರುವುದು ತಡವಾಗವುದು ಎಂದು ಹೇಳಿದಳು. ಆದರೆ ಗಂಟೆ 11 ಆದರೂ ಆಕೆ ಬಾರದೇ ಇದ್ದಾಗ ಮತ್ತೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ಇದರಿಂದ ಚಿಂತೆಗೊಳಗಾದ ನಾನು ಆಕೆ ಕೆಲಸ ಮಾಡುವ ಕಚೇರಿ ಬಳಿ ಹೋದಾಗ ಆಕೆ ಅಂದು ಆಫೀಸಿಗೆ ಹೋಗಿಲ್ಲ ಎಂಬುದು ತಿಳಿಯಿತು. ನಂತರ ಮುಂಜಾನೆ 5 ಗಂಟೆಗೆ ಕರೆ ಮಾಡಿದ ಆಕೆ ನಾನು ಸ್ವಲ್ಪ ಹೊತ್ತಿನಲ್ಲಿ ಮನೆಗೆ ಬರುವುದಾಗಿ ಹೇಳಿದಳು. ಆದರೆ ಆಕೆ ಎಲ್ಲಿ ಇದ್ದಾಳೆ ಎಂಬುದನ್ನು ಹೇಳಿರಲಿಲ್ಲ.  ಇದಾದ ಬಳಿಕ ಡಿಸೆಂಬರ್ 25 ರಂದು ರಾತ್ರಿ 10 ಗಂಟೆಗೆ ಕರೆ ಮಾಡಿದ ಆಕೆ ತಾನು ಗಾಜಿಯಾಬಾದ್‌ನ (Ghaziabad) ಹೊಟೇಲ್‌ನಲ್ಲಿ ಇರುವುದಾಗಿ, ಗೌತಮ್ ನನ್ನನ್ನು ತೆರಳಲು ಬಿಡುತ್ತಿಲ್ಲ, ನನಗೆ ಸಹಾಯ ಬೇಕು ಎಂದು ಹೇಳಿದ್ದಳು. 

Follow Us:
Download App:
  • android
  • ios