ಹಾವೇರಿಯಲ್ಲೊಂದು ಅಮಾನವೀಯ ಘಟನೆ; ಮಗನ ತಪ್ಪಿಗೆ ತಾಯಿಯನ್ನ ಕಂಬಕ್ಕೆ ಕಟ್ಟಿ ಥಳಿತ!

ಬೆಳಗಾವಿಯ ವಂಟಮೂರಿ ಗ್ರಾಮದ ಮಹಿಳೆ‌‌ಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಪ್ರಕರಣ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ  ನಡೆದಿದ್ದು, ಯುವತಿಯನ್ನ ಪ್ರೀತಿಸಿ ಕರೆದುಕೊಂಡು ಹೋಗಿದ್ದಕ್ಕೆ ಯುವತಿಯ ಸಂಬಂಧಿಕರು ಯುವಕನ ತಾಯಿಯನ್ನ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ಘಟನೆ ನಡೆದಿದೆ.

Inhuman incident in Haveri district like Vantamuri case rav

ಹಾವೇರಿ (ಮೇ.3): ಬೆಳಗಾವಿಯ ವಂಟಮೂರಿ ಗ್ರಾಮದ ಮಹಿಳೆ‌‌ಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತಹದ್ದೇ ಪ್ರಕರಣ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ  ನಡೆದಿದ್ದು, ಯುವತಿಯನ್ನ ಪ್ರೀತಿಸಿ ಕರೆದುಕೊಂಡು ಹೋಗಿದ್ದಕ್ಕೆ ಯುವತಿಯ ಸಂಬಂಧಿಕರು ಯುವಕನ ತಾಯಿಯನ್ನ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ಘಟನೆ ನಡೆದಿದೆ.

ಹನುಮವ್ವ ಮೆಡ್ಲೇರಿ(50) ಹಲ್ಲೆಗೊಳಗಾದ ಯುವಕನ ತಾಯಿ. ಯುವತಿಯ ಸಂಬಂಧಿಕರಾದ ಚಂದ್ರಪ್ಪ  ,ಬಸಪ್ಪ ಹಾಗೂ ಗುತ್ತೆವ್ವ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ವಂಟಮೂರಿ ಮಹಿಳೆ‌‌ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಓಡಿ ಹೋಗಿದ್ದ ಪ್ರೇಮಿಗಳನ್ನು ಪತ್ತೆ ಹಚ್ಚಿ ಮದುವೆ ಮಾಡಿಸಿದ ಪೊಲೀಸರು!

ಹನುಮವ್ವಳ ಮಗ ಮಂಜುನಾಥ, ಪೂಜಾ ಎಂಬ ಯುವತಿ ಪ್ರೀತಿಯಲ್ಲಿದ್ದರು ಎಂಬುದು ತಿಳಿದುಬಂದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಯುವಕನೊಂದಿಗೆ ಮನೆ ಬಿಟ್ಟು ಹೋಗಿರುವ ಯುವಕ. ಇದರಿಂದ ಯುವತಿಯ ಮನೆಯವರು ಕುಪಿತಗೊಂಡು ಮಗಳನ್ನ ಪ್ರೀತಿಯ ನೆಪದಲ್ಲಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆಂದು ಆರೋಪಿಸಿ ಯುವಕನ ಮನೆಗೆ ನುಗ್ಗಿ ಹನುಮವ್ವಳ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯುತ್ ಕಂಬಕ್ಕೆ ಕಟ್ಟಿ ವೃದ್ಧ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಕಳೆದ ನಾಲ್ಕು ದಿನಗಳ ಹಿಂದೆಯೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಘಟನೆ ಸಂಬಂಧ ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿ ಸಾಲ ಕಟ್ಟದ್ದಕ್ಕೆ ಪತ್ನಿಯ ಒತ್ತೆ ಇರಿಸಿಕೊಂಡ ಬ್ಯಾಂಕ್‌!

ವಂಟಮೂರಿಯಲ್ಲಿ ನಡೆದಿತ್ತು ಅಮಾನುಷ ಹಲ್ಲೆ:

ಮಗ ಯುವತಿಯೊಂದಿಗೆ ಓಡಿ ಹೋದ ಎಂಬ ಕಾರಣಕ್ಕೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಸಿಎಂ ಸಿದ್ದರಾಮಯ್ಯ ಸಹ ಘಟನೆ ಖಂಡಿಸಿದ್ದರು. ಬಳಿಕ ವಂಟಮೂರಿ ಘಟನೆಗೆ ಕಾರಣವಾಗಿದ್ದ ಗ್ರಾಮದ ಪ್ರೇಮಿಗಳನ್ನ ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಮದುವೆ ಮಾಡಿಸಲಾಗಿಯಿತು.

Latest Videos
Follow Us:
Download App:
  • android
  • ios