Asianet Suvarna News Asianet Suvarna News

ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ಎಸಿ ಸ್ಫೋಟ, 6 ಮಂದಿಗೆ ಗಾಯ , ಓರ್ವ ಗಂಭೀರ

ಕಲ್ಯಾಣ್ ಜ್ಯುವೆಲರ್ಸ್ ಅಂಗಡಿಯಲ್ಲಿ ಏರ್ ಕಂಡಿಷನರ್ ಸ್ಫೋಟಗೊಂಡ ಪರಿಣಾಮ 6 ಮಂದಿ ಗಂಭೀರವಾಗಿ ಗಾಯಗೊಂಡು ಓರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ  ನಡೆದಿದೆ.

Air conditioner explodes at bellary Kalyan Jewellers store in Karnataka gow
Author
First Published May 3, 2024, 11:10 AM IST

ಬಳ್ಳಾರಿ (ಏ.3): ಕಲ್ಯಾಣ್ ಜ್ಯುವೆಲರ್ಸ್ ಅಂಗಡಿಯಲ್ಲಿ ಏರ್ ಕಂಡಿಷನರ್ ಸ್ಫೋಟಗೊಂಡ ಪರಿಣಾಮ 6 ಮಂದಿ ಗಾಯಗೊಂಡು ಓರ್ವ ಗಂಭೀರ ಸ್ಥಿತಿಯಲ್ಲಿರುವ ಘಟನೆ  ಗುರುವಾರ ಸಂಜೆ  ನಡೆದಿದೆ.

ಬಳ್ಳಾರಿ  ನಗರದ ರಥಬೀದಿಯ ಮಾರ್ಟಿನ್ ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್‌ ಮಳಿಗೆಯಲ್ಲಿ ಎಸಿ ಸ್ಫೋಟಗೊಂಡಿದ್ದು, ಇದನ್ನು ದುರಸ್ತಿಗೊಳಿಸಲು ಬಂದಿದ್ದ ನಿಂಗಪ್ಪ, ಸೈಯದ್ ಝುಬೇರ್‌ ಎಂಬವರಿಗೆ ಗಂಭೀರ ಗಾಯವಾಗಿದೆ. ಮೂವರು ಸಿಬ್ಬಂದಿಗೆ ಸಣ್ಣ ಗಾಯಗಳಾಗಿವೆ. ಗಾಯಾಳುಗಳನ್ನು ನಗರದ ವಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜ್ಯುವೆಲರ್ಸ್ ಮಳಿಗೆಯಲ್ಲಿ ಕಳೆದ ಕೆಲ ದಿನಗಳಿಂದ ಸೆಂಟ್ರಲೈಜ್ಡ್ ಎಸಿಯಲ್ಲಿ ಗ್ಯಾಸ್ ಖಾಲಿಯಾಗಿತ್ತು. ಗ್ಯಾಸ್ ಭರ್ತಿ ಮಾಡಲು ಇಬ್ಬರು ಕಾರ್ಮಿಕರು ಮಳಿಗೆಗೆ ಬಂದಿದ್ದರು. ಎಸಿಗೆ ಗ್ಯಾಸ್ ತುಂಬಿಸುವಾಗ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿಡಿಯೋ ವೈರಲ್ ಆಗಿದ್ದು, ಅಂಗಡಿ ಮತ್ತು ಸುತ್ತಮುತ್ತಲಿನ ಕಿಟಕಿಗಳು ಒಡೆದು ಹೋಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಲ್ಯಾಣ್‌ ಜ್ಯುವೆಲರ್ಸ್‌ ಅಂಗಡಿಯ ಸಿಬ್ಬಂದಿ ಸೇರಿ ಇತರರು ಗಾಯಗೊಂಡಿದ್ದು, ಶೀಘ್ರ ಚೇತರಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನಾವು ನೀಡುತ್ತೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

 

Latest Videos
Follow Us:
Download App:
  • android
  • ios