ಪತಿ ಸಾಲ ಕಟ್ಟದ್ದಕ್ಕೆ ಪತ್ನಿಯ ಒತ್ತೆ ಇರಿಸಿಕೊಂಡ ಬ್ಯಾಂಕ್!
ಸಂಜೆ 6 ಗಂಟೆ ಬಳಿಕ ಸಾಲದ ಹಣ ಮರುಪಾವತಿಗೆ ಹಣಕಾಸು ಸಂಸ್ಥೆಗಳು ಒತ್ತಾಯಿಸುವಂತಿಲ್ಲ ಎಂಬ ನಿಯಮಗಳ ನಡುವೆಯೂ ಖಾಸಗಿ ಬ್ಯಾಂಕ್ ಸಿಬ್ಬಂದಿಯೊಬ್ಬ, ಸಾಲ ಮಾಡಿದ್ದ ಪತಿ ಕಂತಿನ ಹಣ ಕಟ್ಟಿಲ್ಲವೆಂದು ಆಕೆಯ ಪತ್ನಿಯನ್ನು ಒತ್ತೆ ಇಟ್ಟುಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.
ಸೇಲಂ (ಮೇ.3): ಸಂಜೆ 6 ಗಂಟೆ ಬಳಿಕ ಸಾಲದ ಹಣ ಮರುಪಾವತಿಗೆ ಹಣಕಾಸು ಸಂಸ್ಥೆಗಳು ಒತ್ತಾಯಿಸುವಂತಿಲ್ಲ ಎಂಬ ನಿಯಮಗಳ ನಡುವೆಯೂ ಖಾಸಗಿ ಬ್ಯಾಂಕ್ ಸಿಬ್ಬಂದಿಯೊಬ್ಬ, ಸಾಲ ಮಾಡಿದ್ದ ಪತಿ ಕಂತಿನ ಹಣ ಕಟ್ಟಿಲ್ಲವೆಂದು ಆಕೆಯ ಪತ್ನಿಯನ್ನು ಒತ್ತೆ ಇಟ್ಟುಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ವಳಪ್ಪಾಡಿಯಲ್ಲಿರುವ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಪ್ರಶಾಂತ್ ಎಂಬ ವ್ಯಕ್ತಿ 35 ಸಾವಿರ ವೈಯಕ್ತಿಕ ಸಾಲ ಪಡೆದಿದ್ದರು. ಆತನಿಗೆ ತನ್ನ ಸಾಲದ ಕಂತು ಕಟ್ಟಲು ಇನ್ನೂ 10 ವಾರಗಳ ಅವಕಾಶವಿದ್ದರೂ ಏ.30ರಂದು ಆತನ ಮನೆಗೆ ಬಂದ ಮಹಿಳಾ ಸಿಬ್ಬಂದಿ ಶುಭಾ ಎಂಬಾಕೆ ಪ್ರಶಾಂತ್‌ರ ಪತ್ನಿಯ ಗೌರಿಶಂಕರಿ ಅವರನ್ನು ಕುಂಟುನೆಪ ಹೇಳಿ ಕರೆದೊಯ್ದು ಬಳಿಕ ಪ್ರಶಾಂತ್ ಸಾಲದ ಕಂತು ಕಟ್ಟುವವರೆಗೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ಬೈಕ್ ಕಳ್ಳತನ - ಎಂಜಿನಿಯರ್ ಬಂಧನ!
ಈ ವಿಷಯ ಪ್ರಶಾಂತ್‌ಗೆ ತಿಳಿದು ಪೊಲೀಸರಿಗೆ ದೂರು ನೀಡಿದ್ದಾನೆ. ಬಳಿಕ ದುಡ್ಡು ಹೊಂದಿಸಿಕೊಂಡು ಬಂದು ರಾತ್ರಿ 7:30ರ ಸಮಯದಲ್ಲಿ ಜಿಲ್ಲಾ ಉಪ ಪೋಲೀಸ್ ವರಿಷ್ಠಾಧಿಕಾರಿಯ ಸಮ್ಮುಖದಲ್ಲಿ ವಾರದ ಕಂತಿನ ಹಣವಾದ 770 ರು. ಪಾವತಿಸಿ ತನ್ನ ಪತ್ನಿಯನ್ನು ಬಿಡಿಸಿಕೊಂಡಿದ್ದಾನೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆಯೇ ನೆಟ್ಟಿಗರ ಬ್ಯಾಂಕ್‌ನ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ಧಾರೆ.