ಬಿಹಾರದ ಜಮುಯಿಯಲ್ಲಿ, ಪ್ರೇಯಸಿ ಆರತಿ ಹೊಸ ಡ್ರೆಸ್ ನೋಡಲು ಕರೆದಿದ್ದಾಳೆಂದು ಹೋದ ಪ್ರೇಮಿ ಸಣ್ಣಲಾಲ್‌ನನ್ನು, ಯುವತಿಯ ತಂದೆಯೇ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ನಂತರ ಆತನ ಶವವನ್ನು ಜಲಾಶಯಕ್ಕೆ ಎಸೆದಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಬಿಹಾರದ ಜಮುಯಿ ಜಿಲ್ಲೆಯ ಚಪೋಲವಾ ಗ್ರಾಮದಲ್ಲಿ ಪ್ರೀತಿಯ ಹೆಸರಿನಲ್ಲಿ ಅತ್ಯಂತ ಆಘಾತಕಾರಿ ಮತ್ತು ಕ್ರೂರ ಘಟನೆಯೊಂದು ನಡೆದಿದೆ. ಆರತಿ ಎಂಬ ಯುವತಿ ತನ್ನ ಪ್ರೇಮಿ ಸಣ್ಣಲಾಲ್‌ಗೆ ಫೋನ್ ಮಾಡಿ, “ನಾನು ಹೊಸ ಡ್ರೆಸ್ ತಂದಿದ್ದೇನೆ, ನೋಡಲು ಬಾ” ಎಂದು ಕರೆದಿದ್ದಾಳೆ. ಪ್ರೇಯಸಿಯ ಮಾತನ್ನು ಕೇಳಿ ಸಂತೋಷಗೊಂಡ ಸಣ್ಣಲಾಲ್ ತನ್ನ ಬೈಕ್ ಹತ್ತಿ ಸುಮಾರು ಎಪ್ಪತ್ತು ಕಿಲೋಮೀಟರ್ ದೂರವನ್ನು ಕೇವಲ ಮೂರು ಗಂಟೆಗಳಲ್ಲಿ ಕ್ರಮಿಸಿ, ರಾತ್ರಿ ಒಂಬತ್ತುವರೆ ಗಂಟೆಗೆ ಆಕೆಯ ಮನೆಯ ಹತ್ತಿರ ತಲುಪಿದ್ದಾನೆ.
ನೋಡಿದ ಹುಡುಗಿಯ ತಂದೆ
ತನ್ನ ಸ್ನೇಹಿತ ಮನೋಜ್ ಜೊತೆ ಆಕೆಯ ಮನೆಯ ಕಡೆಗೆ ಹೋಗುತ್ತಿದ್ದಾಗ, ಹುಡುಗಿಯ ತಂದೆ ಇವರನ್ನು ಮೇಲುಗಡೆಯಿಂದ ನೋಡಿಬಿಟ್ಟಿದ್ದಾರೆ. ತನ್ನ ಮಗಳ ಲವರ್ ಎಂದು ತಿಳಿದ ತಕ್ಷಣ, ಸಿಡಿಮಿಡಿಗೊಂಡ ತಂದೆ, ಕೂಡಲೇ ಸಣ್ಣಲಾಲ್ ಮೇಲೆ ದಾಳಿ ಮಾಡಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಸ್ನೇಹಿತ ಮನೋಜ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಹೆಣವಾಗಿ ಹೋದ
ಅಷ್ಟರಲ್ಲಿಯೇ ಹುಡುಗಿಯ ಮನೆಯವರು ಸಣ್ಣಲಾಲ್ ಶವವನ್ನು ಜಲಾಶಯದಲ್ಲಿ ಬೀಸಾಡಿದ್ದಾರೆ. ಪೊಲೀಸರು ಶವವನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸ್ನೇಹಿತೆ ಖರೀದಿ ಮಾಡಿದ ಹೊಸ ಡ್ರೆಸ್ ನೋಡಲು ಬಂದವ ಹೆಣವಾಗಿ ಹೋಗಿದ್ದಾನೆ.


