ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಾಡ ಹಗಲೇ ಭಯಾನಕ ಕೊಲೆಯೊಂದು ನಡೆದಿದೆ. ಇಬ್ಬರು ಸಹೋದರರು ಸೇರಿ ಯುವಕನೋರ್ವನನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದು, ಇದರ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಾಡ ಹಗಲೇ ಭಯಾನಕ ಕೊಲೆಯೊಂದು ನಡೆದಿದೆ. ಇಬ್ಬರು ಸಹೋದರರು ಸೇರಿ ಯುವಕನೋರ್ವನನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದು, ಇದರ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೆಹಲಿಯ ಆದರ್ಶ ನಗರದಲ್ಲಿ ಈ ಘಟನೆ ನಡೆದಿದ್ದು, ಕೊಲೆಯ ಭಯಾನಕ ದೃಶ್ಯಗಳು ಬೆಚ್ಚಿ ಬೀಳಿಸುವಂತಿದೆ. ಸಹೋದರರಿಬ್ಬರು ಸ್ವಲ್ಪವೂ ಕರುಣೆ ತೋರದೇ ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಮುಗಿ ಬಿದ್ದಿದ್ದು, ಆತ ಸಾಯುವುದು ಖಚಿತವಾಗುವವರೆಗೂ ಆತನ ಮೇಲೆ ಹಲ್ಲೆ ಮಾಡಿದ್ದಾರೆ. 

ನಿನ್ನೆ(ಜೂ 3) ಮಧ್ಯಾಹ್ನ 2:15ರ ಸುಮಾರಿಗೆ ಈ ಘಟನೆ ನಡೆದಿರುವ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಹಲ್ಲೆಗೊಳಗಾದವನನ್ನು ಚಿಕಿತ್ಸೆಗಾಗಿ ಬಿಜೆಆರ್‌ಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸುತ್ತಲಿದ್ದ ಜನರ ಎದುರೇ ಯುವಕನ ತಲೆಗೆ ಪದೇ ಪದೇ ಇಟ್ಟಿಗೆಗಳಿಂದ ಹೊಡೆದು ನಂತರ ಇರಿದು ಕೊಂದಿರುವುದನ್ನು ಸಿಸಿಟಿವಿ ದೃಶ್ಯಾಳಿ ತೋರಿಸುತ್ತಿದೆ. 

Scroll to load tweet…

ದೆಹಲಿಯ (Delhi) ಆಜಾದ್‌ಪುರದ (Azadpur) ನಿವಾಸಿಯಾದ ನರೇಂದರ್ (Narender) ಹಲ್ಲೆಗೊಳಗಾಗಿ ಮೃತಪಟ್ಟ ಯುವಕ. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಆದರ್ಶನಗರದ (Adarsh Nagar) ರಾಹುಲ್ ಕಾಲಿ (Rahul Kali) ಮತ್ತು ಆತನ ಸಹೋದರ ರೋಹಿತ್ ಕಾಲಿ (Rohit Kali) ಎಂಬುವರೇ ನರೇಂದರ್‌ (Narender) ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವುದು ತಿಳಿದು ಬಂದಿದೆ. 

News Hour: ಕಣಿವೆಯಲ್ಲಿ ಹಿಂದೂಗಳ ಸಾಲು ಸಾಲು ಕೊಲೆ: ಟಾರ್ಗೆಟ್‌ ಕಿಲ್ಲಿಂಗ್ಸ್‌ಗೆ ತತ್ತರಿಸಿದ ಕಾಶ್ಮೀರ

ಮಾದಕ ವ್ಯಸನಿಯಾಗಿದ್ದ ಸಂತ್ರಸ್ತ ನರೇಂದರ್‌ ತನ್ನ ಈ ಚಟಕ್ಕಾಗಿ ಪದೇ ಪದೇ ಹಣಕ್ಕಾಗಿ ರಾಹುಲ್‌ನನ್ನು ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ರಾಹುಲ್ ಮತ್ತು ಸಂತ್ರಸ್ತ ನರೇಂದರ್ ನಡುವೆ ಜಗಳ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ರಾಹುಲ್‌, ತನ್ನ ಸಹೋದರನನ್ನು ಆಜಾದ್‌ಪುರ ಗ್ರಾಮದ ಮಂದಿರ ವಾಲಿ ಗಲಿ ಎಂಬಲ್ಲಿಗೆ ಕರೆಸಿದ್ದಾನೆ ನಂತರ ಇಬ್ಬರು ಸೇರಿ ನರೇಂದರ್‌ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಾಹುಲ್ ಕಾಲಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆತನ ಸಹೋದರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

ವಾಕಿಂಗ್ ಹೊರಟಿದ್ದ ವೃದ್ಧೆಯ ದರೋಡೆ: ತಲೆಗೆ ಹೊಡೆದು ಕೊಲೆ