ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಕೇವಲ ಐದು ಬಸ್ಕಿಯ ಶಿಕ್ಷೆ
ಈ ಬಿಹಾರ ರಾಜ್ಯದಲ್ಲಿ ಎಂತೆಂಥಾ ವಿಚಿತ್ರಗಳು ನಡೆಯುತ್ತವೋ ದೇವರೇ ಬಲ್ಲ. ಬಿಹಾರದ ಪಂಚಾಯಿತಿ ಒಂದು ಶಿಶುಕಾಮಿಯೊಬ್ಬನಿಗೆ ಕೇವಲ ಐದು ಬಸ್ಕಿಯ ಶಿಕ್ಷೆ ನೀಡಿ ಈಗ ವಿವಾದಕ್ಕೆ ಕಾರಣವಾಗಿದೆ.
ಬಿಹಾರ: ಈ ರಾಜ್ಯದಲ್ಲಿ ಎಂತೆಂಥಾ ವಿಚಿತ್ರಗಳು ನಡೆಯುತ್ತವೋ ದೇವರೇ ಬಲ್ಲ. ಬಿಹಾರದ ಪಂಚಾಯಿತಿ ಒಂದು ಶಿಶುಕಾಮಿಯೊಬ್ಬನಿಗೆ ಕೇವಲ ಐದು ಬಸ್ಕಿಯ ಶಿಕ್ಷೆ ನೀಡಿ ಈಗ ವಿವಾದಕ್ಕೆ ಕಾರಣವಾಗಿದೆ. ಐದು ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸದೇ ಪ್ರಕರಣವನ್ನು ಪಂಚಾತಿಗೆ ನಡೆಸಿ ಅಲ್ಲಿಗೆ ಮುಚ್ಚಿ ಹಾಕಲು ಯತ್ನಿಸಿದ ಸಮುದಾಯವೊಂದರ ಮುಖಂಡರು ಆರೋಪಿಗೆ ಕೇವಲ ಬಸ್ಕಿಯ ಶಿಕ್ಷೆ ನೀಡಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಆತ ಆರೋಪಿಯಲ್ಲ ಎಂದು ಈ ಪಂಚಾಯಿತಿ ನಿರ್ಧರಿಸಿದೆ. ಸಮುದಾಯದ ಹಿರಿಯ ಮುಖಂಡರು ಸೇರಿದ ಸಭೆಯಲ್ಲಿ ಅತ್ಯಾಚಾರ ಆರೋಪಿ ಬಸ್ಕಿ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಂಚಾಯಿತಿಯ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಂದಹಾಗೆ ಬಿಹಾರದ (Bihar) ನವಾಡ (Nawada) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಐದು ವರ್ಷದ ಪುಟ್ಟ ಬಾಲಕಿಯನ್ನು ಚಾಕೋಲೇಟ್ (chocolates)ನೀಡುವುದಾಗಿ ಪುಸಲಾಯಿಸಿ ತನ್ನ ಕೋಳಿ ಸಾಕಾಣೆ ಘಟಕದತ್ತ ಕರೆದುಕೊಂಡು ಬಂದ ಈ ಅತ್ಯಾಚಾರ ಆರೋಪಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದ್ದು, ಇದನ್ನು ಯಾರೋ ಗಮನಿಸಿ ಆತನನ್ನು ನ್ಯಾಯ ಸಂಧಾನಕ್ಕಾಗಿ ಪಂಚಾಯಿತಿ ಮುಂದೆ ತಂದು ಕೂರಿಸಿದ್ದಾರೆ. ಆತ ಅತ್ಯಾಚಾರವೆಸಗಿಲ್ಲ ಕೇವಲ ಬಾಲಕಿಯನ್ನು ಆ ಪ್ರದೇಶಕ್ಕೆ ಕರೆದೊಯ್ದಿದ್ದಷ್ಟೇ ಎಂದು ನಿರ್ಧರಿಸಿದ ಪಂಚಾಯಿತಿ (panchayat) ಮುಖಂಡರು, ಆ ಮಗುವನ್ನು ಬೇರೆಡೆ ಕರೆದೊಯ್ದ ಕಾರಣಕ್ಕೆ ಮಾತ್ರ ಶಿಕ್ಷೆ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಳವಳ್ಳಿ: ಪುಟ್ಟ ಬಾಲಕಿ ಮೇಲೆ ಕಾಮುಕ ಕಾಂತರಾಜು ಅತ್ಯಾಚಾರ, ಕೊಲೆ!
ಆದರೆ ಈ ಶಿಕ್ಷೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ(social media) ಅಸಮಾಧಾನ ವ್ಯಕ್ತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಕೆಲವು ಪುರುಷ ಪ್ರಧಾನ ನ್ಯಾಯ ವ್ಯವಸ್ಥೆ ಇದು ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar), ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಮುಂತಾದವರಿಗೆ ಟ್ಯಾಗ್ ಮಾಡಿರುವ ಕೆಲವರು, ಅಪರಾಧಿಗಳು ಶಿಕ್ಷೆ ಇಲ್ಲದೆ ಪಾರಾಗಲು ರಾಜ್ಯ ಸರ್ಕಾರ ಬಿಡುತ್ತದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಬಯಸುವುದಾಗಿ ಆಗ್ರಹಿಸಿದ್ದಾರೆ. ಇತ್ತ ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗ್ಲಾ(Gaurav Mangla) ಹೇಳಿದ್ದಾರೆ.
ಶಿಯಾ ಕಮಾಂಡರ್‌ನಿಂದ 15 ವರ್ಷದ ಸುನ್ನಿ ಬಾಲಕಿ ಮೇಲೆ ಅತ್ಯಾಚಾರ, ಕೆಂಡವಾದ ಇರಾನ್!
ನಗ್ನವಾಗಿ ಮನೆ ಸೇರಿದ ಸಂತ್ರಸ್ತೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್, ಅತ್ಯಾಚಾರ ಆಗಿಲ್ಲ ಎಂದ ಪೊಲೀಸ್!