ನಗ್ನವಾಗಿ ಮನೆ ಸೇರಿದ ಸಂತ್ರಸ್ತೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್, ಅತ್ಯಾಚಾರ ಆಗಿಲ್ಲ ಎಂದ ಪೊಲೀಸ್!
15ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯ ಬಟ್ಟೆಯನ್ನು ಕಸಿದು ನಗ್ನವಾಗಿ ದಾರಿಯಲ್ಲಿ ಬಿಟ್ಟು ಹೋದ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಈ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಾಲಕಿ ಮೇಲೆ ಅತ್ಯಾಚಾರ ಆಗಿಲ್ಲ ಎಂದು ವೈದ್ಯಕೀಯ ವರದಿ ಹೇಳುತ್ತಿದೆ.
ಉತ್ತರ ಪ್ರದೇಶ(ಸೆ.22): ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರಾ ಹಾಗೂ ನಗ್ನವಾಗಿ ಮನೆಗೆ ಕಳುಹಿಸಿದ ಪೈಶಾಚಿಕ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಈ ಘಟನೆ ಹೊಸ ತಿರುವು ಪಡೆದುಕೊಂಡಿದೆ. 15ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಗ್ಯಾಂಗ್, ಆಕೆಯ ಬಟ್ಟೆಯನ್ನು ಕಿತ್ತು ದಾರಿಯಲ್ಲಿ ಬಿಟ್ಟಿದ್ದಾರೆ. ಸಂತ್ರಸ್ತ ಬಾಲಕಿ 2 ಕಿಲೋಮೀಟರ್ ನಡೆದುಕೊಂಡೇ ಮನೆ ಸೇರಿದ್ದಾಳೆ ಅನ್ನೋ ಆರೋಪ ಹಾಗೂ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿತ್ತು. ಆದರೆ ಬಾಲಕಿಯ ವೈದ್ಯಕೀಯ ಪರೀಕ್ಷೆ ವರದಿ ಬಂದಿದ್ದು, ಬಾಲಕಿ ಮೇಲೆ ಅತ್ಯಾಚಾರ ಆಗಿಲ್ಲ ಎಂದು ಮೊರಾಬಾದ್ ಎಸ್‌ಪಿ ಹೇಮಂತ್ ಕುಟಿಯಾಲ್ ಹೇಳಿದ್ದಾರೆ. ಈ ಕುರಿತು ಬಾಲಕಿ ಬಾಲ್ಯದಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಎಂದು ಬಾಲಕಿ ಪೋಷಕರು ಹೇಳಿದ್ದಾರೆ. ಆದರೆ ಸಮಗ್ರ ತನಿಖೆ ನಡೆಯಲಿದೆ ಎಂದು ಹೇಮಂತ್ ಕುಟಿಯಾಲ್ ಹೇಳಿದ್ದಾರೆ.
ಅಪ್ರಾಪ್ತ ಬಾಲಕಿ 2 ಕಿಲೋಮೀಟರ್ ನಡೆದುಕೊಂಡ ಮನೆ ಸೇರಿದ ಬೆನ್ನಲ್ಲೇ ಆಕೆಯ ಚಿಕ್ಕಪ್ಪ ಮೊರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಚಿಕ್ಕಪ್ಪನ ದೂರಿನ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಈ ವರದಿಯಲ್ಲಿ ಬಾಲಕಿ ಮೇಲೆ ಯಾವುಗದೇ ಅತ್ಯಾಚಾರ ಆಗಿಲ್ಲ ಎಂದು ವರದಿ ಬಂದಿದೆ. ಬಳಿಕ ಬಾಲಕಿಯ ಪೋಷಕರ ಹೇಳಿಕೆಯನ್ನು ದಾಖಲಿಸಿಲಾಗಿದೆ. ಈ ವೇಳೆ ಪೋಷಕರು ಅತ್ಯಾಚಾರ ಆರೋಪವನ್ನು ಅಲ್ಲಗೆಳೆದಿದ್ದಾರೆ. ಬಾಲಕಿ ಮಾನಸಿಕ ಸ್ಥಿತಿ ಉತ್ತಮವಿಲ್ಲ ಎಂದು ಪೋಷಕರು ಹೇಳಿದ್ದಾರೆ.
ಬೆತ್ತಲೆಯಾಗಿ 2 ಕಿ.ಮೀ. ನಡೆದು ಮನೆ ಸೇರಿದ ಸಂತ್ರಸ್ತೆ
ಬಾಲಕಿ ಬಾಲ್ಯದಿಂದಲೇ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಈ ರೀತಿ ನಗ್ನವಾಗಿ ನಡೆದುಕೊಂಡಿಲ್ಲ ಎಂದು ಪೋಷಕರು ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ಬಾಲಕಿಗೆ ನೆರವು ನೀಡುವ ಬದಲು ಆಕೆಯ ವಿಡಿಯೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಲಕಿ ಮಾನಸಿಕ ಅಸ್ವಸ್ಥರಾಗಿದ್ದಾರೋ ಅಥವಾ ಅತ್ಯಾಚಾರವಾಗಿದಿಯೋ ಅನ್ನೋದು ಎರಡನೇ ಪ್ರಶ್ನೆ. ಮೊದಲು ಆಕೆಗೆ ನೆರವು ನೀಡಬೇಕಿತ್ತು. ಬಾಲಕಿಯ ನಗ್ನ ವಿಡಿಯೋವನ್ನು ತೆಗೆಯುವುದು, ಫೋಟೋ ತೆಗೆಯುವುದು, ಸಾಮಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ನಾಗರೀಕ ಸಮಾಜವೇ ತಲೆತಗ್ಗಿಸುವಂತೆ ಕೆಲವರು ಮಾಡಿದ್ದಾರೆ ಎಂದು ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಗ್ಯಾಂಗ್‌ರೇಪ್ ಆದ ಬೆನ್ನಲ್ಲೇ ಗರ್ಭಿಣಿಗೆ ಗರ್ಭಪಾತ, ಭ್ರೂಣ ಹಿಡಿದು ಪೊಲೀಸ್ ಸ್ಟೇಷನ್‌ಗೆ ಬಂದ ಅತ್ತೆ!
ಏನಿದು ಘಟನೆ:
ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯ ಭೋಜ್‌ಪುರ್ ಎಂಬಲ್ಲಿ 15 ವರ್ಷದ ಬಾಲಕಿಯೊಬ್ಬಳ ಮೇಲೆ ದುರುಳರ ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ನಗ್ನವಾಗಿ ಮನೆಗೆ ಕಳುಹಿಸಿದ ಪೈಶಾಚಿಕ ಘಟನೆ ನಡೆದಿದೆ ಅನ್ನೋ ಆರೋಪ ಕೇಳಿಬಂದಿತ್ತು. ಬಾಲಕಿ, ಇತ್ತೀಚೆಗೆ ಪಕ್ಕದ ಹಳ್ಳಿಯ ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಪ್ರಕರಣ ನಡೆದಿದ್ದು, ಬಾಲಕಿ ನಗ್ನವಾಗಿ ರಸ್ತೆಯಲ್ಲಿ ನಡೆಯುತ್ತಿದ್ದ ವೀಡಿಯೋ ಬಹಿರಂಗವಾದ ಬಳಿಕ ಪ್ರಕರಣದ ಬೆಳಕಿಗೆ ಬಂದಿತ್ತು.. ಬಳಿಕ ಸಂತ್ರಸ್ತೆಯ ಮಾವ ಕೊಟ್ಟದೂರಿನ ಅನ್ವಯ ನಾಲ್ವರು ಯುವಕರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈ ಪೈಕಿ ಒಬ್ಬನನ್ನು ಬಂಧಿಸಲಾಗಿದೆ.