Asianet Suvarna News Asianet Suvarna News

ಶಿಯಾ ಕಮಾಂಡರ್‌ನಿಂದ 15 ವರ್ಷದ ಸುನ್ನಿ ಬಾಲಕಿ ಮೇಲೆ ಅತ್ಯಾಚಾರ, ಕೆಂಡವಾದ ಇರಾನ್‌!

ಇತ್ತೀಚೆಗೆ ಹಿಜಾಬ್‌ ವಿಚಾರವಾಗಿ 22 ವರ್ಷದ ಮಹ್ಸಾ ಅಮನಿಯ ಸಾವಿಗಾಗಿ ಇರಾನ್‌ನಲ್ಲಿ ಪ್ರತಿಭಟನೆ ತೀವ್ರವಾಗಿ ಪ್ರತಿಭಟನೆ ನಡೆದಿತ್ತು. ಇದರ ಬೆನ್ನಲ್ಲಿಯೇ ಈಗ 15 ವರ್ಷದ ಸುನ್ನಿ ಜನಾಂಗದ ಬಾಲಕಿಯ ಮೇಲೆ ಶಿಯಾ ಜನಾಂಗದ ಕಮಾಂಡರ್‌ ಅತ್ಯಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲಿಯೇ ಇರಾನ್‌ ಕೆಂಡವಾಗಿದೆ.

Shia commander rapes Sunni girl Iran smolders Mob sets government offices on fire 36 killed in police firing san
Author
First Published Oct 1, 2022, 4:54 PM IST

ಟೆಹ್ರಾನ್‌ (ಅ.1): ಹಿಜಾಬ್‌ ವಿಚಾರವಾಗಿ 22 ವರ್ಷದ ಮಹ್ಸಾ ಅಮಿನಿ ಪೊಲೀಸ್‌ ಕಸ್ಟಡಿಯಲ್ಲಿ ಸಾವು ಕಂಡ ವಿಚಾರದಲ್ಲಿ ಇರಾನ್‌ ಇನ್ನೂ ಪ್ರಕ್ಷುಬ್ದವಾಗಿದೆ. ಇದರ ನಡುವೆಯೇ ಮತ್ತೊಂದು ಅಮಾನವೀಯ ಘಟನೆ ಇರಾನ್‌ನಲ್ಲಿ ಬೆಳಕಿಗೆ ಬಂದಿದ್ದು, ಇಡೀ ದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತಾಗಿ ನಡೆದ ಪ್ರತಿಭಟನೆಯಲ್ಲಿ ಈವರೆಗೂ 36 ಮಂದಿ ಸಾವು ಕಂಡಿದ್ದಾರೆ. ಶುಕ್ರವಾರ ಇರಾನ್‌ನಲ್ಲಿ 15 ವರ್ಷ ಬಲೂಚ್‌ ಬಾಲಕಿಯನ್ನು ಜೆಹ್ಡಾನ್‌ ನಗರದಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ನ್ಯಾಯ ದೊರಕಿಸಿಕೊಡುವಂತೆ ನಡೆದ ಪ್ರತಿಭಟನೆಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, 36 ಮಂದಿ ಸಾವು ಕಂಡಿದ್ದು, ಸಾಕಷ್ಟು ಮಂದಿಗೆ ಗಾಯವಾಗಿದೆ. ಸಿಟ್ಟಿಗೆದ್ದ ಜನರು ಸರ್ಕಾರಿ ಕಚೇರಿಗಳು ಮತ್ತು ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ನಂತರ ಬಲೂಚ್ ಸಮುದಾಯದ ಜನರು ಬೀದಿಗಿಳಿದು ಘೋಷಣೆಗಳನ್ನು ಕೂಗಿದರು. ಇದಾದ ಬಳಿಕ ಪೊಲೀಸರು ಗುಂಡು ಹಾರಿಸಿದ್ದಾರೆ. ಕಳೆದ ವಾರ ಪೊಲೀಸ್ ಕಮಾಂಡರ್ 15 ವರ್ಷದ ಬಲೂಚ್ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಇರಾನ್‌ನ ಪ್ರಮುಖ ಸುನ್ನಿ ಧರ್ಮಗುರು ಮೌಲ್ವಿ ಅಬ್ದುಲ್ ಹಮೀದ್ ಕೂಡ ಬಾಲಕಿಯ ಅತ್ಯಾಚಾರವನ್ನು ಖಚಿತಪಡಿಸಿದ್ದಾರೆ. ಸುನ್ನಿ ಬಲೂಚ್ ಜನಸಂಖ್ಯೆಯು ಇರಾನ್‌ನ ಆಗ್ನೇಯ ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ವಾಸಿಸುತ್ತಿದೆ.


ಆರೋಪಿ ಕಮಾಂಡರ್ ಅನ್ನು ಕರ್ನಲ್ ಇಬ್ರಾಹಿಂ ಖುಚಕ್ಝೈ ಎಂದು ಗುರುತಿಸಲಾಗಿದೆ. ಆತ ಶಿಯಾ ಮುಸ್ಲಿಂ. ಅತ್ಯಾಚಾರಕ್ಕೆ ಒಳಗಾದ (Zahedan) ಹುಡುಗಿ ಸುನ್ನಿ. ಘಟನೆಯ ವಿರುದ್ಧ ಶುಕ್ರವಾರ ಬಲೂಚ್ ಸಮುದಾಯದ ಮುಖಂಡರು ಪ್ರತಿಭಟನೆಗೆ ಕರೆ ನೀಡಿದ್ದರು. ಪ್ರತಿಭಟನೆಯ ವೇಳೆ ಬಲೂಚ್ ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಮಾಧ್ಯಮ ವರದಿಗಳ ಪ್ರಕಾರ, ಜೆಹ್ಡಾನ್ ನಗರದ ಹೆಚ್ಚಿನ ಭಾಗವು ಪ್ರತಿಭಟನಾಕಾರರ (Protest)ನಿಯಂತ್ರಣದಲ್ಲಿದೆ. ಈ ವೇಳೆ ಪೊಲೀಸ್ ಠಾಣೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಯಿತು.

Mahsa Amini Death: ಪ್ರತಿಭಟನೆ ನಡೆಸುತ್ತಿದ್ದ ನಾಲ್ವರು ಮಹಿಳೆಯರ ಗುಂಡಿಕ್ಕಿ ಹತ್ಯೆ!

ಸಾವು ಕಂಡ ಕಮಾಂಡರ್‌: ಇರಾನ್‌ನ (Iran) ರಾಜ್ಯ ಚಾನೆಲ್ ಪ್ರಕಾರ, ಜೆಹ್ಡಾನ್‌ನಲ್ಲಿ ನಡೆದ ಹೋರಾಟದಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಭದ್ರತಾ ಪಡೆಯ ಯೋಧರೂ ಸೇರಿದ್ದಾರೆ. ಇಲ್ಲಿ ಪೊಲೀಸ್ ಠಾಣೆಯ ಮೇಲೆ ಶಸ್ತ್ರಸಜ್ಜಿತ ಗುಂಪು ದಾಳಿ ನಡೆಸಿದೆ. ಇದಾದ ಬಳಿಕ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಈ ದಾಳಿಯಲ್ಲಿ ಸಿಸ್ತಾನ್ ಮತ್ತು ಬಲೂಚಿಸ್ತಾನ್ (Balochistan) ಪ್ರಾಂತ್ಯದ ರೆವಲ್ಯೂಷನರಿ ಗಾರ್ಡ್ ಗುಪ್ತಚರ ಮುಖ್ಯಸ್ಥರು ಸಾವನ್ನಪ್ಪಿದ್ದಾರೆ. ಪ್ರತಿಭಟನೆಗಳು ಮತ್ತು ಹಿಂಸಾಚಾರದ ನಂತರ ಸರ್ಕಾರವು ಜೆಹ್ಡಾನ್‌ನಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದೆ. ಇತರ ಬಲೂಚ್ ಜನಸಂಖ್ಯೆಯ ನಗರಗಳಲ್ಲಿಯೂ ಸಹ ಪ್ರದರ್ಶನಗಳು ನಡೆದಿವೆ. ಸರಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ ಘಟನೆಯೂ ವರದಿಯಾಗಿದೆ.

ಇರಾನ್‌ನಲ್ಲಿ ವಿರೋಧಿ ಹಿಜಾಬ್ ಹೋರಾಟಕ್ಕೆ 75 ಬಲಿ: ಇರಾನ್ ಅಧ್ಯಕ್ಷ ಆಡಳಿತ ಅಂತ್ಯಕ್ಕೆ ಕರೆ

ಪೊಲೀಸ್ ಕಮಾಂಡರ್ ಕರ್ನಲ್ ಇಬ್ರಾಹಿಂ ಖುಚಕ್ಜೈ ಅವರು ಸೆಪ್ಟೆಂಬರ್ 1 ರಂದು ಚಬಹಾರ್‌ನಲ್ಲಿ ನಡೆದ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದರು. ಅತ್ಯಾಚಾರಕ್ಕೆ ಒಳಗಾದ ಹುಡುಗಿಯು ನೆರೆಹೊರೆಯವರ ಮಗಳು. ಕಮಾಂಡರ್ ಈ ಹುಡುಗಿಯನ್ನು ವಿಚಾರಣೆಗಾಗಿ ಕಚೇರಿಗೆ ಕರೆದು ಅಲ್ಲಿ ಆಕೆಯ (Baloch Girl Rape Case in Zahedan) ಮೇಲೆ ಅತ್ಯಾಚಾರವೆಸಗಿದ್ದಾನೆ. ಇರಾನ್ ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಸೆಪ್ಟೆಂಬರ್ 1 ನಡೆದಿದೆ. ಮನೆಗೆ ಹಿಂದಿರುಗಿದ ಹುಡುಗಿ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ವಿಷಯವನ್ನು ನಿಯಂತ್ರಿಸಲು, ಭದ್ರತಾ ಪಡೆಗಳು ಹುಡುಗಿಯ ಮೂವರು ಸಂಬಂಧಿಕರನ್ನು ಅಪಹರಿಸಿದರು ಮತ್ತು ಬಾಲಕಿಗೆ ಏನೂ ಆಗಿಲ್ಲ ಎಂದು ಹೇಳಿಕೆ ನೀಡುವಂತೆ ಕುಟುಂಬಕ್ಕೆ ಒತ್ತಾಯಿಸಿದರು. ದೂರು ದಾಖಲಿಸಿಕೊಳ್ಳದಂತೆ ಸಂತ್ರಸ್ತ ಕುಟುಂಬದ ಮೇಲೂ ಒತ್ತಡ ಹೇರಲಾಗಿತ್ತು. ಆದರೆ, ಭಾರೀ ಒತ್ತಡದ ನಡುವೆಯೂ ಸಂತ್ರಸ್ತೆಯ ಕುಟುಂಬ ಅತ್ಯಾಚಾರದ ಆರೋಪವನ್ನು ಕೈಬಿಡಲಿಲ್ಲ.

Follow Us:
Download App:
  • android
  • ios