ಖ್ಯಾತ ಜ್ಯೋತಿಷಿಯೊಬ್ಬರು, ಸ್ಟಾರ್ ನಟಿಯೊಬ್ಬಳು ಮಾಟ-ಮಂತ್ರದ ಮೂಲಕ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಾಳೆ ಎಂದು ಹೇಳಿದ್ದಾರೆ. ಆ ನಟಿಯ ಕುಟುಂಬ ರಾಮಾಯಣದ ಹೆಸರಿನಿಂದ ಬಂದಿದೆ ಎಂಬ ಸುಳಿವು ನೀಡಿದ್ದು, ಈ ಹೇಳಿಕೆಯು ಈ ನಟಿಯತ್ತ ಬೆರಳು ಮಾಡುತ್ತಿದೆ.

ಮಾಟ-ಮಂತ್ರಗಳಿಂದ ಏನೇನೋ ಅನಾಹುತಗಳನ್ನು ಮಾಡುವ ಬಗ್ಗೆ ಕೇಳಿರುತ್ತೇವೆ. ಸಿನಿಮಾ ರಂಗದಲ್ಲಿಯೂ ಮಾಟ-ಮಂತ್ರದ ಪ್ರಯೋಗ ಸಾಕಷ್ಟು ಆಗುತ್ತದೆ ಎನ್ನುತ್ತಾರೆ ಕೆಲವು ಜ್ಯೋತಿಷಿಗಳು. ಇದೀಗ ಖ್ಯಾತ ಜ್ಯೋತಿಷಿ ಸುಶಿಲ್​ ಕುಮಾರ್​ ಸಿಂಗ್​ ಎನ್ನುವವರು ಇದೀಗ ಶಾಕಿಂಗ್​ ಘಟನೆಯೊಂದನ್ನು ತಿಳಿಸಿದ್ದಾರೆ. ಸಿನಿಮಾ ರಂಗದಲ್ಲಿ ಮಾಟ ಮಂತ್ರ ಮಾಡಿಸಿ ಖ್ಯಾತಿ ಪಡೆದಿರುವ, ಮದುವೆಯಾಗಿರುವ ಐವರು ಸ್ಟಾರ್​ ನಟಿಯರು ತಮಗೆ ಗೊತ್ತು ಎಂದಿರುವ ಅವರು, ಅದರಲ್ಲಿ ಮುಸ್ಲಿಂ ಯುವಕನಿಗೆ ಆ ಒಂದು ಪದಾರ್ಥವನ್ನು ಸಿಹಿಯಲ್ಲಿ ಬೆರೆಸಿ ತಿನ್ನಿಸಿ ವಾಮಾಚಾರದ ಮೂಲಕ ಮದುವೆಯಾಗಿದ್ದಾಳೆ ಆ ಸ್ಟಾರ್​ ನಟಿ ಎಂದು ಹೇಳಿದ್ದಾರೆ.

ರಾಮಾಯಣದ ಹೆಸರು

ಅವರ ಮನೆಯವರೆಲ್ಲರೂ ರಾಮಾಯಣದ ಹೆಸರಿನಿಂದ ಬಂದವರು ಎಂದು The Mystic Journey and Astro Sushil Official ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಮ್ಯಾಚ್​ ಮಾಡಿ ಕೆಲವು ಯುಟ್ಯೂಬ್​ ಚಾನೆಲ್​ಗಳಲ್ಲಿ ಸೋನಾಕ್ಷಿ ಸಿನ್ಹಾ ಅವರ ವಿಡಿಯೋ ವೈರಲ್​ ಆಗುತ್ತಿದೆ. ಇದಕ್ಕೆ ಕಾರಣ, ಸೋನಾಕ್ಷಿ ಅವರ ತಂದೆ ಫೇಮಸ್​ ಬಾಲಿವುಡ್​ ನಟ ಶತ್ರುಘ್ನ ಸಿನ್ಹಾ ರಾಮನ ಭಕ್ತರಾಗಿದ್ದ ಹಿನ್ನೆಲೆಯಲ್ಲಿ, ಅವರು ತಮ್ಮ ಮನೆಯ ಹೆಸರು ಮಾತ್ರವಲ್ಲದೇ ತಮ್ಮ ಜೀವನದಲ್ಲಿ ಎಲ್ಲವನ್ನೂ ರಾಮಾಯಣಕ್ಕೆ ಸಂಬಂಧಿಸಿದ ವಿಷಯಗಳನ್ನೇ ಅವರು ನಡೆಸುತ್ತಿದ್ದರಿಂದಲೋ ಏನೋ ಸೋನಾಕ್ಷಿ ವಿಡಿಯೋ ಈಗ ವೈರಲ್​ ಆಗ್ತಿದೆ!

ಮುಸ್ಲಿಂ ಯುವಕರ ಜೊತೆ ಮದುವೆ

ಒಂದೆರಡು ವರ್ಷಗಳ ಕೆಳಗೆ ಸ್ವರಾ ಭಾಸ್ಕರ್​ ಮತ್ತು ಸೋನಾಕ್ಷಿ ಸಿನ್ಹಾ ಅವರು ಮುಸ್ಲಿಂ ಯುವಕರನ್ನು ಮದುವೆಯಾಗಿದ್ದಕ್ಕೆ ಸಕತ್​ ಟ್ರೋಲ್​ಗೆ ಒಳಗಾಗುತ್ತಲೇ ಇದ್ದವರು. ಸೋನಾಕ್ಷಿ ಸಿನ್ಹಾ ತಮ್ಮ ಗಂಡ ಜಹೀರ್​ ಇಕ್ಬಾಲ್​ ಜೊತೆ ಎಂಜಾಯ್​ ಮಾಡುತ್ತಿದ್ದಾರೆ. ಇದರ ಹೊರತಾಗಿಯೂ ಯಾಕೋ ಟ್ರೋಲಿಗರಿಗೆ ಇವರಿಬ್ಬರ ಮೇಲೆ ಇನ್ನಿಲ್ಲದ ಕಣ್ಣು. ತಮ್ಮ ಪಾಡಿಗೆ ತಮ್ಮನ್ನು ಬಿಟ್ಟುಬಿಡಿ ಎಂದು ಇವರಿಬ್ಬರೂ ಗೋಗರೆದೂ ಆಗಿದೆ, ಒಂದು ಹೆಜ್ಜೆ ಮುಂದಕ್ಕೆ ಹೋಗಿ ಟ್ರೋಲಿಗರ ಮೇಲೆ ಹರಿಹಾಯ್ದಿದ್ದೂ ಆಗಿದೆ. ಆದರೂ ಟ್ರೋಲಿಗರು ಮಾತ್ರ ಏನಾದರೊಂದು ವಿಷಯವನ್ನು ಕೆದಕಿ ಇವರಿಬ್ಬರ ಕಾಲು ಎಳೆಯುತ್ತಲೇ ಇದ್ದಾರೆ.

ಸಕತ್​ ಸುದ್ದಿಯಲ್ಲಿ ಸೋನಾಕ್ಷಿ

ಅದೇ, ಬಾಲಿವುಡ್​ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಿ ಸೋನಾಕ್ಷಿ ಜಹೀರ್ ಇಕ್ಬಾಲ್ ಆದಾಗಿನಿಂದಲೂ ಸಕತ್​ ಸುದ್ದಿಯಲ್ಲಿ ಇದ್ದಾರೆ. ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ. ಆರೇಳು ವರ್ಷ ಒಟ್ಟಿಗೇ ಇದ್ದು, ಡೇಟಿಂಗ್‌ ಮಾಡಿದ ಬಳಿಕ ಮದುವೆಯಾಗಿದ್ದಾರೆ. ಇವರು ಡೇಟಿಂಗ್‌ ಮಾಡುತ್ತಿದ್ದ ವಿಷಯ ಅಷ್ಟೊಂದು ಬೆಳಕಿಗೆ ಬಂದಿರದ ಹಿನ್ನೆಲೆಯಲ್ಲಿ ಮದುವೆಯಾದ ಮೇಲೆ ದಿಢೀರನೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಮದುವೆ ಲವ್‌ ಜಿಹಾದ್‌ ಎನ್ನುವ ಮಟ್ಟಕ್ಕೂ ಚರ್ಚೆಯಾಗಿ ಬಿಟ್ಟಿತು. ಸಾಲದು ಎನ್ನುವುದಕ್ಕೆ ಸೋನಾಕ್ಷಿ ತಮ್ಮ ತಂದೆಗೇ ತಿಳಿಸದೇ ಈ ಮದುವೆಯಾಗಿರುವುದು ಮತ್ತಷ್ಟು ವಿವಾದಕ್ಕೆ ಈಡಾಗಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದರೂ, ಆಗಾಗ್ಗೆ ಸುದ್ದಿಯಲ್ಲಿ ಇರುವುದಕ್ಕಾಗಿಯೋ ಏನೋ, ನಟಿ ವಿವಾದದ ಮಾತುಗಳನ್ನಾಡುತ್ತಲೇ ಇರುತ್ತಾರೆ.

View post on Instagram